Advertisement
ಈ ಹಿಂದಿನ ಕೆಲವು ತಿಂಗಳುಗಳಲ್ಲಿ ಬರುತ್ತಿದ್ದ ಬಿಲ್ ಮೊತ್ತಕ್ಕೆ ಹೋಲಿಸಿದರೆ ಈ ಬಾರಿ ಬಿಲ್ ಮೊತ್ತ ಒಂದೇ ಸಮನೆ ಏರಿರುವುದರಿಂದ ಕಂಗಾಲಾಗಿದ್ದಾರೆ. “ಹೊಸದಾಗಿ ಮೀಟರ್ ಅಳವಡಿಸಿದ ಅನಂತರ ಯರ್ರಾಬಿರ್ರಿ ಬಿಲ್ ಬಂದಿದೆ’ ಎಂಬುದು ಹಲವರ ದೂರು.
ಮೆಸ್ಕಾಂ ವ್ಯಾಪ್ತಿಯ ಸುಮಾರು 6.5 ಲಕ್ಷ ಮೀಟರ್‌ಗಳು ಸೇರಿದಂತೆ ರಾಜ್ಯಾದ್ಯಂತ ಹಳೆಯ ಮೀಟರ್‌ಗಳನ್ನು (ಎಲೆಕ್ಟ್ರೋ ಮೆಕ್ಯಾನಿಕಲ್) ತೆಗೆದು ಹೊಸತಾಗಿ (ಸ್ಟಾಟಿಕ್ ಇಲೆಕ್ಟ್ರಾನಿಕ್-ಡಿಜಿಟಲ್) ಮೀಟರ್‌ಗಳನ್ನು ಅಳವಡಿಸುವ ಪ್ರಕ್ರಿಯೆ ಕಳೆದ 6 ತಿಂಗಳ ಹಿಂದೆ ಆರಂಭಗೊಂಡು ಉಡುಪಿ, ದ.ಕ ಜಿಲ್ಲೆಗಳಲ್ಲಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಮೀಟರ್ ಅಳವಡಿಸಿದ ಅನಂತರ ಈ ರೀತಿ ಬಿಲ್ ಮೊತ್ತ ಹೆಚ್ಚಾಗಿರುವುದು ಹೌದು. ಆದರೆ ಮೀಟರ್‌ನಲ್ಲಿರುವ ದೋಷ ಇದಕ್ಕೆ ಕಾರಣವಲ್ಲ ಎನ್ನುವುದು ಅಧಿಕಾರಿಗಳ ಸ್ಪಷ್ಟೀಕರಣ.
Related Articles
ಹೊಸ ಮೀಟರ್‌ಗಳ ಅಳವಡಿಕೆಯಾದ ಮೊದಲ ಎರಡು – ಮೂರು ತಿಂಗಳುಗಳಲ್ಲಿ ಆ ಮೀಟರ್‌ನಲ್ಲಿ ದಾಖಲಾದ ಮಾಹಿತಿ (ದತ್ತಾಂಶ) ನೆಟ್‌ವರ್ಕ್ ತೊಂದರೆಯಿಂದಾಗಿ ಇಲಾಖೆಯ ಸಿಸ್ಟಂಗೆ ಅಪ್‌ಡೇಟ್ ಆಗಿಲ್ಲ. ಹಾಗಾಗಿ ಈ ಅವಧಿಯಲ್ಲಿ ಗ್ರಾಹಕರಿಗೆ ಅವರೇಜ್ (ಉದಾ: ಹಿಂದೆ 500 ರೂ. ಬಿಲ್ ಬರುತ್ತಿದ್ದರೆ 200 ರೂ.) ಬಿಲ್ ಹಾಕಲಾಗುತ್ತಿತ್ತು. ಅಂದರೆ ವಾಸ್ತವವಾಗಿ 100 ಯುನಿಟ್ ಬಳಕೆಯಾಗಿದ್ದರೂ 80 ಯುನಿಟ್‌ನ ಮೊತ್ತವನ್ನು ಮಾತ್ರ ಬಿಲ್‌ನಲ್ಲಿ ತೋರಿಸಲಾಗಿತ್ತು. ಅನಂತರ ಸಿಸ್ಟಂಗೆ ಅಪ್‌ಡೇಟ್ ಆದ ಬಳಿಕ ಅಂದರೆ ಜೂನ್-ಜುಲೈ ತಿಂಗಳ ಬಿಲ್‌ಗಳಲ್ಲಿ ಈ ಹಿಂದಿನ ನೈಜ ಮೊತ್ತವನ್ನು ಸೇರಿಸಲಾಗಿದೆ. ಇದರಿಂದ ಮೊತ್ತ ಹೆಚ್ಚಾಗಿದೆ. ಇದರ ಜತೆಗೆ ಕಳೆದ ಎಪ್ರಿಲ್‌ನಲ್ಲಿ ಯುನಿಟ್‌ಗೆ 32 ಪೈಸೆ ವಿದ್ಯುತ್ ದರ ಹೆಚ್ಚಳವಾಗಿತ್ತು. ಅದು ಕೂಡ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಸೇರ್ಪಡೆಯಾಗಿದೆ. ಇದರೊಂದಿಗೆ ಹೊಸ ಮೀಟರ್ ಅತ್ಯಂತ ಸೂಕ್ಷ್ಮವಾಗಿ ವಿದ್ಯುತ್ ಬಳಕೆಯನ್ನು ಮಾಪನ ಮಾಡುವುದರಿಂದ ಒಂದಷ್ಟು ಹೆಚ್ಚು ಬಿಲ್ ಬಂದಿದೆ.
Advertisement
ಪಫೆìಕ್ಟ್ ರೆಕಾರ್ಡಿಂಗ್!“ಹೊಸ ಸ್ಟಾಟಿಕ್ ಇಲೆಕ್ಟ್ರಾನಿಕ್ ಮೀಟರ್ ಅತ್ಯಂತ ನಿಖರವಾಗಿ ವಿದ್ಯುತ್ ಬಳಕೆಯ ಪ್ರಮಾಣವನ್ನು ದಾಖಲಿಸುತ್ತದೆ. ಹಿಂದಿನ ಮೀಟರ್‌ಗಳಲ್ಲಿ ಇಷ್ಟು ನಿಖರತೆ ಇರಲಿಲ್ಲ. ಸಣ್ಣ ಇಂಡಿಕೇಟರ್ ಲ್ಯಾಂಪ್ ಉರಿಯುತ್ತಿದ್ದರೂ, ಸಣ್ಣ ಮಿನಿಚರ್ ಇದ್ದರೂ ಅದರ ವಿದ್ಯುತ್ ಬಳಕೆ ರೆಕಾರ್ಡ್ ಆಗುತ್ತದೆ. ಟಿ.ವಿಯಂಥ ಉಪಕರಣಗಳನ್ನು ಆಫ್ ಮಾಡಿ ಫ್ಲಗ್ ಆನ್ ಇದ್ದರೆ ಅದರ ವಿದ್ಯುತ್ ಕೂಡ ಲೆಕ್ಕಕ್ಕೆ ಸಿಗುತ್ತದೆ. ಮನೆಗಳಿಗೆ ಪಾಯಿಂಟ್ 5 ಕ್ಲಾಸ್ , ಕೈಗಾರಿಕೆಗಳಿಗೆ ಪಾಯಿಂಟ್ 2 ಕ್ಲಾಸ್ ಮೀಟರ್ ಹಾಕಲಾಗುತ್ತಿದೆ. ಆದರೆ ಹಿಂದಿನ ಬಿಲ್‌ಗಿಂತ ಈಗ ದುಪ್ಪಟ್ಟು ಆಗುವ ಸಾಧ್ಯತೆಗಳು ಕಡಿಮೆ. ಅಂತಹ ನಿರ್ದಿಷ್ಟ ಪ್ರಕರಣಗಳ ಕುರಿತು ಪರಿಶೀಲಿಸುತ್ತೇವೆ’ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು. ದೂರು ನೀಡಲು ಅವಕಾಶ
ಹೊಸ ಮೀಟರ್‌ಗಳು ಹೆಚ್ಚು ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿವೆ. ಇವುಗಳಲ್ಲಿ ದೋಷವಿಲ್ಲ. ಗೊಂದಲಗಳಿದ್ದರೆ ಗ್ರಾಹಕರು ಹತ್ತಿರದ ಮೆಸ್ಕಾಂ ಉಪವಿಭಾಗ ಅಥವಾ ಎಸ್‌ಒ ಕಚೇರಿಗೆ ತೆರಳಿ ದೂರು ನೀಡಬಹುದು. ಮೀಟರ್ ಟೆಸ್ಟಿಂಗ್ ವಿಂಗ್ ಮೂಲಕ ಮೀಟರ್‌ನ್ನು ಕೂಡ ತಪಾಸಣೆ ಮಾಡಲಾಗುವುದು. ಮೀಟರ್‌ನಲ್ಲಿ ದೋಷ ಪತ್ತೆಯಾಗಿಲ್ಲ. ದೋಷವಿದ್ದರೆ ಮೀಟರ್ ಬದಲಿಸಲಾಗುವುದು. ಒಂದು ವೇಳೆ ಬಿಲ್‌ನಲ್ಲಿ ನಿಜವಾಗಿಯೂ ಹೆಚ್ಚು ಮೊತ್ತ ದಾಖಲಾಗಿದ್ದರೆ ಅದನ್ನು ಮುಂದಿನ ತಿಂಗಳಿನ ಬಿಲ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. -ನರಸಿಂಹ ಪಂಡಿತ್,
ಸೂಪರಿಂಟೆಂಡೆಂಟ್ ಎಂಜಿನಿಯರ್, ಮೆಸ್ಕಾಂ – ಸಂತೋಷ್ ಬೊಳ್ಳೆಟ್ಟು