Advertisement

ದಾವಣಗೆರೆಯಲ್ಲಿ ಮತ್ತೆ ಎಂಟು ಜನರಿಗೆ ಸೋಂಕು ದೃಢ: ಏಳು ಮಂದಿ ಬಿಡುಗಡೆ

07:04 PM Jun 09, 2020 | keerthan |

ದಾವಣಗೆರೆ: ಮಂಗಳವಾರ ದಾವಣಗೆರೆಯಲ್ಲಿ ಮತ್ತೆ ಎಂಟು ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 211ಕ್ಕೆ ಏರಿಕೆಯಾಗಿದೆ.

Advertisement

34 ವರ್ಷದ ಮಹಿಳೆಗೆ (ಸೋಂಕಿತ ಸಂಖ್ಯೆ 5816) ಕಂಟೈನ್ ಮೆಂಟ್ ಝೋನ್ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ.

ಸೋಂಕಿತ ಸಂಖ್ಯೆ 3862ರ ಸಂಪರ್ಕದಿಂದ 40 ವರ್ಷ (ಸೋಂಕಿತ ಸಂಖ್ಯೆ 5817) 62 ವರ್ಷದ ವೃದ್ಧ (ಸೋಂಕಿತ ಸಂಖ್ಯೆ 5818) ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿತ ಸಂಖ್ಯೆ 3857ರ ಸಂಪರ್ಕದಿಂದ 58 ವರ್ಷದ ಪುರುಷ (ಸೋಂಕಿತ ಸಂಖ್ಯೆ 5819), 48 ವರ್ಷದ ಮಹಿಳೆ (ಸೋಂಕಿತ ಸಂಖ್ಯೆ 5820) ಸೋಂಕು ದೃಢಪಟ್ಟಿದೆ. ಸೋಂಕಿತ ಸಂಖ್ಯೆ 3635ರ ಸಂಪರ್ಕದಿಂದ 66 ವರ್ಷದ ವೃದ್ಧೆ (ಸೋಂಕಿತ ಸಂಖ್ಯೆ 5821), 36 ವರ್ಷದ ಮಹಿಳೆ (ಸೋಂಕಿತ ಸಂಖ್ಯೆ 5822), 38 ವರ್ಷದ ಮಹಿಳೆ (ಸೋಂಕಿತ ಸಂಖ್ಯೆ 5823) ಸೋಂಕಿಗೆ ತುತ್ತಾಗಿದ್ದಾರೆ.

ಕೋವಿಡ್ ಸೋಂಕಿನಿಂದ ಗುಣಮುಖರಾಗಿರುವ ಸೋಂಕಿತ ಸಂಖ್ಯೆ 3635, 3636, 3637, 3638, 3657, 3862, 1485 ರು ಮಂಗಳವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 211 ಪ್ರಕರಣಗಳಲ್ಲಿ ಈವರೆಗೆ 157 ಸೋಂಕಿತರು ಬಿಡುಗಡೆಯಾದಂತಾಗಿದೆ. ಆರು ಜನ ಮೃತಪಟ್ಟಿದ್ದಾರೆ. 48 ಸಕ್ರಿಯ ಪ್ರಕರಣಗಳಿವೆ

Advertisement

Udayavani is now on Telegram. Click here to join our channel and stay updated with the latest news.

Next