Advertisement

ಡಿಸೆಂಬರ್‌ನಿಂದ ಹೊಸ ಶಿಕ್ಷಣ ನೀತಿ ಜಾರಿ: ಕೇಂದ್ರ

07:25 AM Oct 24, 2017 | Team Udayavani |

ತಿರುವನಂತಪುರಂ: ಭಾರತದಲ್ಲಿ ಸದ್ಯಕ್ಕಿರುವ ಶಿಕ್ಷಣ ಪದ್ಧತಿಯು ಬ್ರಿಟಿಷರ ಸಾಮ್ರಾಜ್ಯಶಾಹಿಯ ಪ್ರತೀಕದಂತಿದ್ದು, ಇದರಲ್ಲಿನ ಲೋಪಗಳನ್ನು ತಿದ್ದುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿಯನ್ನು ಡಿಸೆಂಬರ್‌ನಲ್ಲೇ ಜಾರಿಗೊಳಿಸಲಿದೆ ಎಂದು ಕೇಂದ್ರ ಸಚಿವ ಸತ್ಯಪಾಲ್‌ ಸಿಂಗ್‌ ಹೇಳಿದ್ದಾರೆ. 

Advertisement

ಹೊಸ ಶಿಕ್ಷಣ ನೀತಿಯ ಬಗ್ಗೆ ಸೋಮವಾರ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಅವರು ಈ ವಿಚಾರ ತಿಳಿಸಿದ್ದಾರೆ. “”ಎನ್‌ಡಿಎ ಸರಕಾರದ ಮಹತ್ವಾಕಾಂಕ್ಷೆಯ ಈ ಹೊಸ ಶಿಕ್ಷಣ ನೀತಿಯ ರೂಪುರೇಷೆಗಳು ಅಂತಿಮ ಹಂತದಲ್ಲಿದ್ದು, ಇದೇ ವರ್ಷ ಡಿಸೆಂಬರ್‌ನಲ್ಲಿ ಹೊಸ ಪದ್ಧತಿಯನ್ನು ಅನುಷ್ಠಾನಕ್ಕೆ ತರಲಾಗುವುದು. ಬ್ರಿಟಿಷರು ಭಾರತ ತೊರೆದ ಬೆನ್ನಲ್ಲೇ ನಮ್ಮದೇ ಶೈಲಿಯ ಶಿಕ್ಷಣ ಪದ್ಧತಿಯೊಂದನ್ನು ಜಾರಿಗೆ ತರಬೇಕಿತ್ತು. ಆದರೆ, ವಿಪರ್ಯಾಸವೆಂಬಂತೆ, ಆಗ ಭಾರತದಲ್ಲಿದ್ದ ಶಿಕ್ಷಣ ತಜ್ಞರು, ಈ ವಿಚಾರದಲ್ಲಿ ಬ್ರಿಟಿಷರನ್ನೇ ಅನುಕರಿಸಿದರು. ಹಾಗಾಗಿ, ಹೊಸತೊಂದು ಶಿಕ್ಷಣ ಪದ್ಧತಿ ಜಾರಿಗೆ ತರುವ ಮೂಲಕ ಭಾರತೀಯರಲ್ಲಿ ಬೇರೂರಿರುವ ಸಾಮ್ರಾಜ್ಯಶಾಹಿ ಮನಸ್ಥಿತಿಗಳನ್ನು ಬದಲಾಯಿಸಬೇಕಿದೆ” ಎಂದು ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರಾಥಮಿಕ ಹಂತದಲ್ಲೇ ಶಿಕ್ಷಣದ ಗುಣಮಟ್ಟ ಸುಧಾರಣೆ, ಅಗ್ಗದ ದರದಲ್ಲಿ ಉನ್ನತ ಶಿಕ್ಷಣದ ಲಭ್ಯತೆ, ಹೆಚ್ಚಿನ ಸಂಖ್ಯೆಯ ಜನರು ಶಿಕ್ಷಣ ಪಡೆಯುವಂತೆ ಮಾಡುವುದು, ಕೌಶಲಾಭಿವೃದ್ಧಿ ಸಹಿತ ಅನೇಕ ಅಂಶಗಳು ಹೊಸ ನೀತಿಯಲ್ಲಿ ಸೇರಿವೆ ಎಂದೂ ಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next