ಬೆಂಗಳೂರು: ಹೊಸ ಶಿಕ್ಷಣ ನೀತಿ 2030ರ ವೇಳೆಗೆರಾಜ್ಯದಲ್ಲಿ ಸಂಪೂರ್ಣವಾಗಿ ಜಾರಿಯಾಗಬೇಕು ಎಂಬ ಗುರಿಯನ್ನು ಸರ್ಕಾರ ಹೊಂದಿದೆ. ಆ ನಿಟ್ಟಿನಲ್ಲಿಯೇ ಕಾರ್ಯಗಳು ನಡೆಯುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಉನ್ನತ ಶಿಕ್ಷಣ ಇಲಾಖೆ ಭಾನುವಾರ ಸೆಂಟ್ರಲ್‌ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೊಸ ಶಿಕ್ಷಣನೀತಿಯಲ್ಲಿ ಅಂಶಗಳು ದೇಶವನ್ನು ಮತ್ತಷ್ಟು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲಿದೆ ಎಂದರು.
ದೇಶದಲ್ಲಿ ಬಹುದೊಡ್ಡ ಸುಧಾರಣೆಗೆ ಹೊಸ ಶಿಕ್ಷಣನೀತಿ ನಾಂದಿ ಹಾಡಲಿದೆ. ಶಿಕ್ಷಣ ಸಂಸ್ಥೆಗಳಿಗೆಸ್ವಾಯತ್ತತೆಯನ್ನು ನೀಡಲಿದೆ. ವಿದ್ಯಾರ್ಥಿಗಳಕೇಂದ್ರೀಕೃತಶಿಕ್ಷಣ ಇದಾಗಿದ್ದು ಕಲಿಕಾ ಅವಧಿಯಲ್ಲಿ ವಿದ್ಯಾರ್ಥಿಗಳುತಮಗೆ ಬೇಕಾದ ವಿಷಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ಸರ್ಕಾರಆತುರ ತೋರುತ್ತಿಲ್ಲ.
ಹೊಸ ಶೈಕ್ಷಣಿಕ ನೀತಿ ರೂಪಿಸಿ ಸುಮಾರು ಐದುವರೆ ವರ್ಷಗಳಾಗಿವೆ. ಆದರೂ ಜಾರಿಯಾಗಿರಲಿಲ್ಲ. ಜಾರಿ ವಿಚಾರದಲ್ಲಿ ಕರ್ನಾಟಕ ವೇ ದೇಶಕ್ಕೆಮೊದಲಾಗಬೇಕು ಎಂಬ ಉದ್ದೇಶ ನಮಗಿರಲಿಲ್ಲ.ಜಾರಿಗೆ Ö ೊರಟಾಗಲೇ ಗೊತ್ತಾಗಿದ್ದು, ಹೊÓ ಶಿಕ್ಷಣನೀತಿ ಜಾರಿ ಮಾಡುತ್ತಿರುವ ಮೊದಲ ರಾಜ್ಯ ನಮ್ಮದುಎಂದು ಎಂದರು.
ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ:ಉನ್ನತ ಶಿಕ್ಷಣಇಲಾಖೆವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ.ಅಧಿಕಾರದುರ್ಬಳಕೆಗೂ ಅವಕಾಶ ನೀಡುವುದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿರಾಜಕೀಯ ಸುಳಿಯಬಾರದು ಎಂಬುವುದು ನಮ್ಮಉದ್ದೇಶವಾಗಿದೆ.ಆಹಿನ್ನೆಲೆಯಲ್ಲಿ ಅಧ್ಯಾಪಕ ವರ್ಗಾವಣೆವಿಚಾರದಲ್ಲಿ ಅವರಿಗೆ ಸ್ವಯಂ ಆಯ್ಕೆ ನೀಡಲಾಯಿತುಎಂದು ಹೇಳಿದರು.ಹೊಸ ಶಿಕ್ಷಣ ನೀತಿಯ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ.ಈ ವಿಚಾರದಲ್ಲಿ ಶಿಕ್ಷಕರಿಗೆ ಸರ್ಕಾರ ಎಲ್ಲ ರೀತಿಯ ಸಹಾಯನೀಡಲಿದೆ. ಸದೃಢ ಸಮಾಜ ನಿರ್ಮಾಣ ಶಿಕ್ಷಣ ಕ್ಷೇತ್ರದಮೇಲೆ ಅವಲಂಬಿತವಾಗಿದೆ ಎಂದರು.
ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಸ್ವಾಮಿವಿರೇಶಾನಂದಸರಸ್ವತಿಮಾತನಾಡಿ,ಭಾರತೀಯರಿಗೆಭಾರತದ ಸಂಸ್ಕೃತಿಯನ್ನು ಪರಿಚಯಿಸುವ ಅಂಶಗಳುಹೊಸ ಶಿಕ್ಷಣನೀತಿಯಲ್ಲಿವೆ ಎಂದು ಹೇಳಿದರು.ಬ್ರಿಟಿಷ್ ವ್ಯವಸ್ಥೆಯ ಶಿಕ್ಷಣ ವ್ಯವಸ್ಥೆಯಲ್ಲಿಯೇ ನಾವಿದ್ದೇವೆ. ಆ ವ್ಯವಸ್ಥೆ ಬದಲಾಗಬೇಕು. ಶಿಕ್ಷಕರು ಕೂಡಕಾಲ ಕಾಲಕ್ಕೆ ಹೊಸತನವನ್ನು ರೂಢಿಸಿಕೊಳ್ಳಬೇಕು.ಕಲಿಯುವ ಆಸಕ್ತಿ ಉಳ್ಳರು ಕಲಿಸಲು ಯೋಗ್ಯರು. ಆಹಿನ್ನೆಲೆಯಲ್ಲಿ ಶಿಕ್ಷಕರು ಕೂಡ ಹೊಸ ಚೈತನ್ಯವನ್ನುರೂಢಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಉನ್ನತಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಶಿಕ್ಷಣಇಲಾಖೆ ಆಯುಕ್ತ ಪ್ರದೀಪ್, ಲಿಂಗರಾಜುಗಾಂಧಿಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು