Advertisement

ನೂತನ ಶಿಕ್ಷಣ ನೀತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

04:40 PM Jul 31, 2020 | keerthan |

ಮಣಿಪಾಲ: ನಮ್ಮ ಶಿಕ್ಷಣ ವ್ಯವಸ್ಥೆ ಇನ್ನು 10+2 ಬದಲಾಗಿ 5+3+3+4 ಮಾದರಿಯದ್ದು, 5ನೆ ತರಗತಿಯವರೆಗೂ ಮಾತೃಭಾಷೆ ಶಿಕ್ಷಣ, ಇದೇ ಮುಂತಾಗಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿರುವ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ವೀರೇಶ್ ಆಗುಂಬೆ: ಒಳ್ಳೆಯದು ಜಾರಿ ಆಗಿ ಕಾರ್ಯರೂಪಕ್ಕೆ ಬರುವುದರೊಳಗೆ ಇನ್ನೋಂದು ಶಿಕ್ಷಣ ನೀತಿ ಬಂದಿರುತ್ತದೆ. ಇತಿಹಾಸವನ್ನು ಒಮ್ಮೆ ನೋಡಿದರೆ. ಸರ್ಕಾರ ಇಚ್ಚಾಶಕ್ತಿ ತೋರಿಸಿ ಕಾಯ೯ರೂಪಕ್ಕೆ ಬಂದರೆ ಒಳ್ಳೇಯದು

ಚಿ. ಮ. ವಿನೋದ್ ಕುಮಾರ್: ಒಳ್ಳೆಯ ವಿಚಾರ ಇದು.ಖಾಸಗಿ ಶಾಲೆಗಳ ಶುಲ್ಕದ ವಿಚಾರದಲ್ಲೂ ಸರ್ಕಾರ ತನ್ನ ಬದ್ದತೆಯನ್ನು ತೋರಿಸಬೇಕು

ನಟರಂಜನ್ ಸುರೇಶ್:  5ನೆ ತರಗತಿ ವರೆಗೆ ಮಾತೃಭಾಷೆಯಲ್ಲಿ ಕಲಿಸಿದರೆ ಮುಂದೆ 6ನೆ ತರಗತಿಯಿಂದ ಆಂಗ್ಲ ಭಾಷೆಯಲ್ಲಿ ವೃತ್ತಿಪರ ಶಿಕ್ಷಣ ವನ್ನು ಹೇಗೆ ಮಕ್ಕಳು ಅರ್ಥಮಾಡಿಕೊಳ್ಳುತ್ತಾರೆ .? ಗಣಿತ ಮತ್ತು ವಿಜ್ಞಾನವನ್ನು ಆಂಗ್ಲ ಭಾಷೆಯಲ್ಲಿ ಕಲಿಸಿ

Advertisement

Udayavani is now on Telegram. Click here to join our channel and stay updated with the latest news.

Next