Advertisement

ರಾಜ್ಯದ ಲಾಜಿಸ್ಟಿಕ್‌ ನೀತಿಗೆ ಹೊಸ ಕರಡು

06:11 AM Jan 19, 2019 | Team Udayavani |

ಬೆಂಗಳೂರು: ರಾಜ್ಯ ಸರ್ಕಾರವು ಸಾಗಣೆ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ಉದ್ದೇಶದಿಂದ ಹೊಸ ಲಾಜಿಸ್ಟಿಕ್‌ ನೀತಿ ಸಿದ್ಧಪಡಿಸುತ್ತಿದೆ ಎಂದು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ (ವಿಟಿಪಿಸಿ) ಜಂಟಿ ನಿರ್ದೇಶಕ ಪ್ರವೀಣ್‌ ರಾಮದುರ್ಗ ಹೇಳಿದರು.

Advertisement

ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ, ಕನೆಕ್ಟ್ ಮಿತ್ರಾ ಹಾಗೂ ಬಿಜಿನೆಸ್‌ ಯೋಗ ಮೊದಲಾದ ಸಂಘಟನೆಗಳು ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ವಾಣಿಜ್ಯ ಶೃಂಗಸಭೆ-2019ರಲ್ಲಿ ಮಾತನಾಡಿದ ಅವರು, ಲಾಜಿಸ್ಟಿಕ್‌ ನೀತಿಯಿಂದ ಉದ್ಯಮಕ್ಕೆ ಮೂಲ ಸೌಕರ್ಯ ಸಿಗಲಿದೆ ಎಂದು ತಿಳಿಸಿದರು.

ನೀತಿಯ ಕರಡು ಸಿದ್ಧವಾಗಿದ್ದು, ಸರ್ಕಾರದ ಹಂತದಲ್ಲಿ ಅನುಮೋದನೆಗೆ ಬಾಕಿ ಇದೆ. ಬೆಂಗಳೂರಿನ ಹೊರವಲಯದ ದಾಬಾಸ್‌ಪೇಟೆಯಲ್ಲಿ ಬಹುವಿಧ ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಲಾಜಿಸ್ಟಿಕ್‌ ಪಾರ್ಕ್‌, ಕಂಟೈನರ್‌ ಡಿಪೋ, ಕೋಲ್ಡ್‌ ಸ್ಟೋರೇಜ್‌ ಹೀಗೆ ಎಲ್ಲ ರೀತಿಯ ಸೌಲಭ್ಯ ಇದರಿಂದ ಲಭ್ಯವಾಗಲಿದೆ ಎಂದು ಹೇಳಿದರು. 

62 ವಿಶೇಷ ಅರ್ಥಿಕ ವಲಯಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಅದರಲ್ಲಿ 51ಕ್ಕೆ ಜಮೀನು ಗುರುತಿಸುತ್ತಿದ್ದೇವೆ. ಈಗಾಗಲೇ 28 ಕಾರ್ಯನಿರ್ವಹಿಸುತ್ತಿವೆ. ವಿಶೇಷ ಆರ್ಥಿಕ ವಲಯದ ಮೂಲಕ 2017ರಲ್ಲಿ 73 ಸಾವಿರ ಕೋಟಿಯಷ್ಟು ರಫ್ತು ಮಾಡಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಪು¤ ಉತ್ತೇಜನಕ್ಕೆ ಹಲವು ಕ್ರಮ ತೆಗೆದುಕೊಂಡಿದ್ದೇವೆ.

ಕೇಂದ್ರ ಸರ್ಕಾರ ಅನುಮತಿಯಂತೆ ಕುಮಟಾದಲ್ಲಿ ಮೀನು ರಫ್ತು ಹಾಗೂ ಗೋಡಂಬಿ ರಫ್ತು ಘಟಕ ತೆರೆಯಲು ಕ್ರಮ ವಹಿಸುತ್ತಿದ್ದೇವೆ ಎಂದು ವಿವರಿಸಿದರು. ಸಮ್ಮೇಳನದ ಆಯೋಕರಾದ ಸತೀಶ್‌ ಕೋಟ ಮಾತನಾಡಿ, ರಾಜ್ಯದಲ್ಲಿ ರಫ್ತು ಹೆಚ್ಚಳ ಮತ್ತು ರಫ್ತುದಾರರ ಉತ್ತೇಜನಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದೇವೆ. ಉತ್ಪನ್ನಗಳ ರಫ್ತಿನಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಮತ್ತು ಗುಜರಾತ್‌ ಮೊದಲೆರೆಡು ಸ್ಥಾನದಲ್ಲಿದೆ ಎಂದು ಹೇಳಿದರು.

Advertisement

ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ ದಕ್ಷಿಣ ವಲಯ ಅಧ್ಯಕ್ಷ ಇಸ್ರಾರ್‌ ಅಹ್ಮದ್‌ ಮಾತನಾಡಿ, ವ್ಯಾಪಾರ ಮತ್ತು ತಂತ್ರಜ್ಞಾನ ಆಧಾರಿತ ವಸ್ತುಗಳನ್ನು ಪ್ರಮುಖವಾಗಿಟ್ಟುಕೊಂಡು ರಫ್ತು ವಹಿವಾಟು ಮುಂದಿನ ಮೂರ್‍ನಾಲ್ಕು ವರ್ಷದಲ್ಲಿ 300 ಬಿಲಿಯನ್‌ ಡಾಲರ್‌ನಿಂದ 350 ಬಿಲಿಯನ್‌ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದರು.

ರಾಜ್ಯದ ರಫ್ತು ಪ್ರಮಾಣ ಹೆಚ್ಚಿಸುವ ಗುರಿ: ರಫ್ತು ಪ್ರಮಾಣವು ಕರ್ನಾಟಕದಲ್ಲಿ ಶೇ.9ರಷ್ಟಿದ್ದು, ಗುಜರಾತ್‌ ಮತ್ತು ಮಹಾರಾಷ್ಟ್ರದ ಒಟ್ಟು ರಫ್ತು ಪ್ರಮಾಣ ಶೇ.42ರಷ್ಟಿದೆ. ರಾಜ್ಯದ ರಫ್ತು ಪ್ರಮಾಣವನ್ನು ಶೇ.9ರಿಂದ ಶೇ.20ಕ್ಕೆ ಏರಿಸುವ ಗುರಿ ಹೊಂದಿದ್ದೇವೆ.

ಗಾರ್ಮೆಂಟ್‌, ಆಹಾರ ಮತ್ತು ಯಂತ್ರೋಪಕರಣದ ಕ್ಷೇತ್ರದ ಉತ್ಪಾದನಾ ರಫ್ತು ಹೆಚ್ಚಿಸು ಉದ್ದೇಶದಿಂದ ವಾಣಿಜ್ಯ ಸಮ್ಮೇಳನ ನಡೆಸುತ್ತಿದ್ದೇವೆ. ಪೆರು, ಪೋಲ್ಯಾಂಡ್‌, ಸಿಂಗಪೂರ್‌, ಫ್ರಾನ್ಸ್‌, ಇಟಲಿ, ಸ್ಪೇನ್‌, ಝೆಕ್‌ ರಿಪಬ್ಲಿಕ್‌, ಎಸ್ಟೋನಿಯಾ, ಚೀನಾ ಮೊದಲಾದ ದೇಶಗಳಿಂದ ಪ್ರತಿನಿಧಿಗಳು ಆಗಮಿಸಿದ್ದಾರೆ ಎಂದು ಸಮ್ಮೇಳನದ ಆಯೋಕರಾದ ಸತೀಶ್‌ ಕೋಟ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next