ಸ್ಪೆಷಲ್ ವಾರ್ಡ್‌ಗಳ ಕೊರತೆ ನೀಗಿಸುವುದರ ಗುರಿಯೊಂದಿಗೆ ಉತ್ತಮ ಗುಣಮಟ್ಟದ ರೋಗಿಗಳ ಆರೈಕೆ ಮತ್ತು ಚಿಕಿತ್ಸಾ ಸೇವೆಗಳನ್ನು ನೀಡಲು ವೈಯಕ್ತಿಕ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳನ್ನು ನೀಡುವ ಗುರಿಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿರುವ ಡಾ| ರಾಮದಾಸ್ ಎಂ. ಪೈ ಬ್ಲಾಕ್ ಹೊಂದಿದೆ.
ನಿಮ್ಮ ಅನುಕೂಲಕ್ಕಾಗಿ ಆರೋಗ್ಯ ರಕ್ಷಣೆ ಸೇವೆಯನ್ನು ಪರಿವರ್ತಿಸಿರುವ – ಡಾ| ರಾಮದಾಸ್ ಎಂ. ಪೈ ಬ್ಲಾಕ್‌ಗೆ ಸ್ವಾಗತ, ಇಲ್ಲಿ ನಿಮ್ಮ ಯೋಗಕ್ಷೇಮವು ಮೊದಲು ಬರುತ್ತದೆ. ಅಂತ್ಯವಿಲ್ಲದ ಸರತಿ ಸಾಲಿನಲ್ಲಿ ಇನ್ನು ಮುಂದೆ ಕಾಯಬೇಕಾಗಿಲ್ಲ; ಇಲ್ಲಿ ನಿಮ್ಮ ವೈದ್ಯರು ನಿಮಗೆ ಬೇಕಾದ ದಿನದ ಸಮಯದಲ್ಲಿ ಸಮಾಲೋಚನಾ ಸೇವೆಗೆ ಲಭ್ಯ. ನಮ ಬಳಕೆದಾರ ಸ್ನೇಹಿ ವೆಬ್‌ಸೈಟ್ www.khmanipal.com ಗೆ ಭೇಟಿ ನೀಡಿ ಅಥವಾ ನಮಗೆ ಕರೆ ಮಾಡಿ ಅತ್ಯಾಧುನಿಕ ಸೌಲಭ್ಯಗಳಿಂದ ಹಿಡಿದು ತಜ್ಞರ ಆರೈಕೆಯವರೆಗೆ ನಿಮ್ಮ ಅಪಾಯಿಂಟ್‌ಮೆಂಟ್ ಅನ್ನು ಸಲೀಸಾಗಿ ನಿಗದಿಪಡಿಸಿಕೊಳ್ಳಿ ಕರೆ ಮಾಡಲು ನಮ್ಮ ದೂರವಾಣಿ ಸಂಖ್ಯೆ 6364469750. ನಿಮ್ಮ ಆರೋಗ್ಯ ಪ್ರಯಾಣವು ಡಾ| ರಾಮದಾಸ್ ಎಂಪೈ ಬ್ಲಾಕ್‌ನಲ್ಲಿ ಸುಲಭ ಮತ್ತು ಶ್ರೇಷ್ಠತೆಯೊಂದಿಗೆ ಪ್ರಾರಂಭವಾಗುತ್ತದೆ – ಇಲ್ಲಿ ಗುಣಮಟ್ಟವು ಅನುಕೂಲಕರವಾಗಿರುತ್ತದೆ. ವಿಶಾಲವಾದ ವಾಹನ ಪಾರ್ಕಿಂಗ್ ಸೌಲಭ್ಯವು ಹೊಸ ಬ್ಲಾಕ್‌ನ ಎದುರಲ್ಲೇ ಲಭ್ಯ.
ವಿಸ್ತರಣೆ
ಅತ್ಯಾಧುನಿಕ ಸೌಲಭ್ಯಗಳುಳ್ಳ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಪ್ರಸ್ತುತ ವಿಶೇಷ ಬೆಡ್ (ಸ್ಪೆಷಲ್ ವಾರ್ಡ್ ಹಾಸಿಗೆ) ಗಳಿಗೆ ಭಾರೀ ಬೇಡಿಕೆ ಇರುವ ಕಾರಣ ಈ ಕೊರತೆ ನೀಗಿಸುವುದರೊಂದಿಗೆ ಉತ್ತಮ ಗುಣಮಟ್ಟದ ರೋಗಿಗಳ ಆರೈಕೆ ಮತ್ತು ಚಿಕಿತ್ಸಾ ಸೇವೆಗಳನ್ನು ತ್ವರಿತವಾಗಿ ನೀಡುವ ಗುರಿಯೊಂದಿಗೆ ಹೊಸ ಬ್ಲಾಕ್ ನಿರ್ಮಿಸಲಾಗಿದೆ. ಆರೋಗ್ಯ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಕಾರಣರಾದ ಸಂಸ್ಥೆಯ ಎರಡನೆಯ ಪೀಳಿಗೆಯ ನಾಯಕ, ಮಣಿಪಾಲ ಮಾಹೆ ವಿ.ವಿ. ಕುಲಾಧಿಪತಿ ಡಾ| ರಾಮದಾಸ್ ಎಂ. ಪೈಯವರ ಹೆಸರನ್ನು ಇರಿಸಲಾಗಿದೆ. ನೂತನ ಡಾ| ರಾಮದಾಸ್ ಎಂ. ಪೈ ಬ್ಲಾಕ್‌ನ್ನು ಮಣಿಪಾಲ ಸಂಸ್ಥೆಗಳ ಸ್ಥಾಪಕ ಡಾ| ಟಿ.ಎಂ.ಎ. ಪೈಯವರ 126ನೆಯ ಜನ್ಮದಿನವಾದ ಎ. 30ರಂದು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳಿಸಲಾಗಿದೆ.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಈಗ ಒಟ್ಟು 11 ಬ್ಲಾಕ್‌ಗಳು, 2,032 ಬೆಡ್‌ಗಳಿವೆ. ಇದರಲ್ಲಿ 90 ಖಾಸಗಿ ಹಾಸಿಗೆ (ಸಿಂಗಲ್ ರೂಮ್), 3 ಸೂಟ್ ರೂಮ್ ಮತ್ತು 56 ಸೆಮಿ ಸ್ಪೆಷಲ್ ಹಾಸಿಗೆಗಳಿವೆ. ಉಳಿದುದೆಲ್ಲವೂ ಸಾಮಾನ್ಯ (ಜನರಲ್) ಹಾಸಿಗೆಗಳು. ಹೀಗಾಗಿ ಖಾಸಗಿ ಹಾಸಿಗೆ ಬಯಸುವ ರೋಗಿಗಳಿಗೆ ನಿರೀಕ್ಷಿಸಿದಷ್ಟು ಖಾಸಗಿ ಹಾಸಿಗೆ ಸೇವೆಯನ್ನು ಕೊಡಲು ಆಗುತ್ತಿಲ್ಲ. ನಿತ್ಯ ಸುಮಾರು 50 ರೋಗಿಗಳು ವಿಶೇಷ ಬೆಡ್‌ಗಳಿಗಾಗಿ ಕಾಯುತ್ತಿದ್ದಾರೆ. ಪ್ರಸ್ತುತ 3,500ರಿಂದ 4,000 ರೋಗಿಗಳು ಹೊರರೋಗಿ ವಿಭಾಗದ ಸೇವೆ ಯನ್ನು (ಒಪಿಡಿ) ಪಡೆದು ಕೊಳ್ಳುತ್ತಿದ್ದಾರೆ. ಹೀಗೆ ವಿಶೇಷ ಬೆಡ್‌ಗಳ ಒಳರೋಗಿಗಳ ವಿಭಾಗ ಮತ್ತು ಅಧಿಕ ಒತ್ತಡವಿರುವ ಹೊರ ರೋಗಿಗಳ ವಿಭಾಗ ಇವೆರಡೂ ಒತ್ತಡವನ್ನು ತಪ್ಪಿಸಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಹೊಸ ಬ್ಲಾಕ್ ನಿರ್ಮಿಸಲಾಗಿದೆ.
ಈಗಿರುವ ವಿಶೇಷ ವಾರ್ಡ್‌ಗಳೂ 30-40 ವರ್ಷಗಳ ಹಿಂದೆ ಕಟ್ಟಿಸಿದವು. ಇವುಗಳನ್ನು ಮತ್ತಷ್ಟು ಮೇಲ್ದರ್ಜೆಗೇರಿಸಬೇಕಾದ ಅನಿವಾರ್ಯವೂ ಆಸ್ಪತ್ರೆಯ ಆಡಳಿತ ಮಂಡಳಿಗೆ ಇದೆ. ಮುಂದೆ ಎನ್ ಬ್ಲಾಕ್ ಮತ್ತು ಚರಕ ಬ್ಲಾಕ್‌ಗಳನ್ನು ನವೀಕರಿಸಬೇಕಾಗಿರುವುದರಿಂದ ನವೀಕರಣದ ಸಂದರ್ಭದಲ್ಲಿ ಈ ಹೊಸ ಬ್ಲಾಕ್ ಸೇವೆಯು ಅನುಕೂಲವಾಗಲಿದೆ.
ಹೊಸ ಡಾ| ರಾಮದಾಸ್ ಪೈ ಬ್ಲಾಕ್‌ನಲ್ಲಿ 10 ಹೊರರೋಗಿ ಸಮಾಲೋಚನೆ ಕೊಠಡಿಗಳು, 34 ಡಬಲ್ ಆಕ್ಯುಪೆನ್ಸಿ ಕೊಠಡಿಗಳು, 75 ಖಾಸಗಿ ಕೊಠಡಿಗಳು, 4 ಪ್ರಮುಖ ಸುಧಾರಿತ ಅತ್ಯಾಧುನಿಕ ಆಪರೇಷನ್ ಥಿಯೇಟರ್‌ಗಳು, 4 ಪ್ರೀಮಿಯರ್ ಸೂಟ್ ರೂಮ್‌ಗಳೊಂದಿಗೆ 4 ಶಸ್ತ್ರಚಿಕಿತ್ಸಾ ಪೂರ್ವ ಹಾಸಿಗೆಗಳು, 4 ಶಸ್ತ್ರ ಚಿಕಿತ್ಸಾ ನಂತರದ ಕೊಠಡಿಗಳು, 14 ತೀವ್ರ ನಿಗಾ ಘಟಕ ಹಾಸಿಗೆಗಳು, 10 ಎಚ್‌ಡಿಯು ಹಾಸಿಗೆಗಳು ಮತ್ತು 16 ಹಾಸಿಗೆಗಳ ದಿನದ ಆರೈಕೆ ಘಟಕ- ಹೀಗೆ ಹೊಸ ಬ್ಲಾಕ್‌ನಲ್ಲಿ ಒಟ್ಟು 161 ಒಳರೋಗಿ ಹಾಸಿಗೆಗಳ ಸೌಲಭ್ಯವಿದೆ.
ಈ ಬ್ಲಾಕ್‌ನ್ನು ರೋಗಿಗಳ ಜತೆಗೆ ಬರುವ ಸಹಾಯಕರಿಗೂ ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಈ ಎಲ್ಲ ಸೇವೆಗಳನ್ನು ಆನ್‌ಲೈನ್ ಮತ್ತು ದೂರವಾಣಿ ಮೂಲಕ ಕಾಯ್ದಿರಿಸಬಹುದಾಗಿದೆ. ಇಲ್ಲಿ ಎಕ್ಸ್-ರೇ, ರಕ್ತದ ಮಾದರಿ ಸಂಗ್ರಹಣೆ, ರೋಗನಿರ್ಣಯ ಸಂಬಂದಿಸಿದ ಉಪಕರಣ, ಅಲ್ಟ್ರಾ ಸೌಂಡ್ ಔಷಧ ಹೀಗೆ ವಿವಿಧ ಸೇವೆಗಳನ್ನು ಹೊಸ ಬ್ಲಾಕ್‌ಗೆ ಬರುವ ರೋಗಿಗಳಿಗೆ ಹೊಸ ಬ್ಲಾಕ್‌ನಲ್ಲಿಯೇ ಒದಗಿಸಲಾಗುತ್ತದೆ. ಸಿಟಿ ಮತ್ತು ಎಂಆರ್‌ಐ ಸೌಲಭ್ಯಗಳನ್ನು ಹಳೇ ಬ್ಲಾಕ್‌ನಲ್ಲಿ ಒದಗಿಸಲಾಗುವುದು. ರೋಗಿಗಳಿಗೆ ದೀರ್ಘಾವಧಿಯ ಕಾಯುವಿಕೆಯನ್ನು ತಪ್ಪಿಸಲು ಆನ್‌ಲೈನ್ ಅಪಾಯಿಂಟ್‌ಮೆಂಟ್‌ಗಳು ಮತ್ತು ಸಮಾಲೋಚನಾ ಸಮಯವನ್ನು ಕಾಯ್ದಿರಿಸುವ ಮೂಲಕ ಅವರ ಆಯ್ಕೆಯ ಪರಿಣತ ಸಲಹೆಗಾರರನ್ನು ತಮ್ಮ ಅನುಕೂಲ ಸಮಯದಲ್ಲಿ ಭೇಟಿ ಮಾಡಲು ಪ್ರೀಮಿಯಂ ಹೊರರೋಗಿ ಸಮಾಲೋಚನೆಯ ಸೌಲಭ್ಯ ನೀಡುವ ಉದ್ದೇಶ ಹೊಸ ಬ್ಲಾಕ್ ಒಳಗೊಂಡಿದೆ. ಹೊರರೋಗಿ ಮತ್ತು ಒಳರೋಗಿಪ್ರದೇಶ ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಣದಿಂದ ಕೂಡಿದೆ. ಇದರಲ್ಲಿ ಇಂಟರ್ವೆನ್ಶನಲ್ ರೇಡಿಯಾಲಜಿ ಕಾರ್ಯವಿಧಾನಗಳಿಗೆ ಉನ್ನತ ಮಟ್ಟದ ಬೈ-ಪ್ಲೇನ್ ಕ್ಯಾಥ್ ಲ್ಯಾಬ್ ಸೌಲಭ್ಯವಿದೆ.
ಹೀಗೆ ಹೊಸ ಬ್ಲಾಕ್ ತಳ ಅಂತಸ್ತು ಮತ್ತು ಐದು ಮಹಡಿಗಳನ್ನು ಒಳಗೊಂಡಿದೆ. ವಿದೇಶಿ ರೋಗಿಗಳಿಗೆ ಒಂದೇ ಕಡೆ ವೈದ್ಯಕೀಯ ಮತ್ತು ಆಡಳಿತಾತ್ಮಕ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿಕೊಡುವ, ವಿಶೇಷವಾದ ಅಂತರಾಷ್ಟ್ರೀಯ ರೋಗಿಗಳ ಲೌಂಜ್‌ನೊಂದಿಗೆ ಅಂತರರಾಷ್ಟ್ರೀಯ ರೋಗಿಗಳನ್ನು ಚಿಕಿತ್ಸಾ ಕ್ರಮಗಳನ್ನು ಪೂರೈಸುವ ಸೌಲಭ್ಯಗಳನ್ನು ಈ ಹೊಸ ಬ್ಲಾಕ್ ಹೊಂದಿದೆ.
ಬೇಡಿಕೆಗಿಂತ ಸ್ಪೆಷಲ್ ವಾರ್ಡ್ ಹಾಸಿಗೆ ಮತ್ತು ಸೆಮಿಸ್ಪೆಷಲ್ ವಾರ್ಡ್ ಹಾಸಿಗೆ ಕಡಿಮೆ ಇವೆ. ಈ ಕೊರತೆಯನ್ನು ನೀಗಿಸುವುದಕ್ಕೆ ಡಾ| ರಾಮದಾಸ್ ಪೈ ಬ್ಲಾಕ್ ನಿರ್ಮಿಸಲಾಗಿದೆ. ಈ ಬ್ಲಾಕ್‌ನಲ್ಲಿ ಮುಂಚಿತವಾಗಿ ಆನ್ ಲೈನ್ ಅಪಾಯಿಂಟ್‌ಮೆಂಟ್‌ಗಳು ಮತ್ತು ಸಮಾಲೋಚನಾ ಸಮಯವನ್ನು ಕಾಯ್ದಿರಿಸುವ ಸೌಲಭ್ಯವಿರುವುದರಿಂದ ಹೊರರೋಗಿಗಳೂ ಕಾಯಬೇಕಾ ಗಿರುವುದಿಲ್ಲ. ವೈಯಕ್ತಿಕ ಸೇವೆಗೆ ವಿಶೇಷ ಗಮನ ಕೊಡಲಾಗುತ್ತದೆ. ವಿಶೇಷವಾದ ಅಂತಾರಾಷ್ಟ್ರೀಯ ರೋಗಿಗಳ ಲೌಂಜ್ ನೊಂದಿಗೆ ಅಂತಾರಾಷ್ಟ್ರೀಯ ರೋಗಿ ಗಳನ್ನು ಚಿಕಿತ್ಸಾ ಕ್ರಮಗಳನ್ನು ಪೂರೈಸುವ ಸೌಲಭ್ಯಗಳನ್ನು ಬ್ಲಾಕ್ ಹೊಂದಿದೆ.
-ಡಾ| ಅವಿನಾಶ್ ಶೆಟ್ಟಿ,
ವೈದ್ಯಕೀಯ ಅಧೀಕ್ಷಕರು,
ಕೆಎಂಸಿ, ಮಣಿಪಾಲ