Advertisement
ಮಂಗಳೂರು ದಕ್ಕೆಯಿಂದ ಮೀನು ಸಾಗಾಟ ಮಾಡುವ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಮಲ್ಪೆ, ಗೋವಾ, ಕೇರಳ ಮತ್ತಿತರೆಡೆ ಸಾಗುತ್ತವೆ. ಈಗ ಮೀನು ಸಾಗಾಟ ಲಾರಿಗಳ ಸಹಿತ ಬಂದರಿನಿಂದ ಬರುವ ಘನ ವಾಹನಗಳು ನಗರ ಮುಖ್ಯ ರಸ್ತೆಯಾದ ಕಾರ್‌ಸ್ಟ್ರೀಟ್, ಮಣ್ಣಗುಡ್ಡೆ ಅಥವಾ ಬೋಳಾರ ರಸ್ತೆಯಾಗಿ ಲೇಡಿಹಿಲ್ ಮೂಲಕ ಸಾಗುತ್ತಿವೆ. ಮಾತ್ರವಲ್ಲ ಬೆಳಗ್ಗೆ ಘನ ವಾಹನಗಳು ನಗರ ಪ್ರವೇಶಕ್ಕೆ ನಿಷೇಧವೂ ಇದೆ. ಹೊಸ ರಸ್ತೆ ನಿರ್ಮಾಣದಿಂದ ನಗರ ಪ್ರದೇಶದಲ್ಲಿ ವಾಹನದ ಒತ್ತಡ ಕಡಿಮೆಯಾಗಲಿದೆ.
ಹಿಂದಿನ ಬಿಜೆಪಿ, ಜೆಡಿಎಸ್ ಸರಕಾರದ ಸಂದರ್ಭ ಸುಲ್ತಾನ್ ಬತ್ತೇರಿಯಲ್ಲಿ ಪ್ರವಾಸಿ ಆಕರ್ಷಣೆಗಾಗಿ 100 ಕೋಟಿ ರೂ. ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣದ ಯೋಜನೆಯಿತ್ತು. ಇದಕ್ಕಾಗಿ ಕೋಟಿ ರೂ. ಖರ್ಚು ಮಾಡಿ ಶಿಲಾನ್ಯಾಸ ಹಾಗೂ ಸಣ್ಣ ಪ್ರಮಾಣದ ಕಾಮಗಾರಿ ನಡೆಸಲಾಗಿತ್ತು. ಇದೀಗ ಹೊಸ ಪ್ರಸ್ತಾವನೆಯಲ್ಲಿ ತೂಗು ಸೇತುವೆ ಯೋಜನೆ ಕಣ್ಮುಚ್ಚಲಿದೆ. ಇದರ ಬದಲಾಗಿ ಶಾಶ್ವತ ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದೆ. ದೊಡ್ಡ ಮತ್ತು ಸಣ್ಣ ಹಡಗು ಚಲಿಸಲು ಧಕ್ಕೆಯಾಗದ ಮಾದರಿಯಲ್ಲಿ ನಿರ್ಮಿಸಲು ಯೋಜನೆ ಕೈಗೊಳ್ಳಲಾಗುವುದು. ಬಂದರಿನಿಂದ ಎನ್‌ಎಂಪಿಟಿ ವರೆಗೆ ನೇತ್ರಾವತಿ, ಗುರುಪುರ ನದಿ ಹಾಗೂ ಸಮುದ್ರ ವೀಕ್ಷಣೆಯ ವಿಹಂಗಮ ನೋಟ ಸಿಗಲಿದ್ದು, ಪ್ರಮುಖ ಪ್ರವಾಸಿ ತಾಣವಾಗುವ ಸಾಧ್ಯತೆಯಿದೆ. ಸರ್ವೇ ಕಾರ್ಯಾರಂಭ
ಈ ರಸ್ತೆಯ ನಿರ್ಮಾಣದ ಸಾಧ್ಯತೆಯ ಕುರಿತಾಗಿ ಸರ್ವೇ, ಅಂದಾಜು ಪಟ್ಟಿ ತಯಾರಿಸಲು ಈಗಾಗಲೇ ಸಂಬಂಧ ಪಟ್ಟ ಸಂಸ್ಥೆಗೆ ಅಧಿಕಾರ ನೀಡಲಾಗಿದೆ.
Related Articles
Advertisement
ಅಂದಾಜುಪಟ್ಟಿಗೆ ಸೂಚಿಸಲಾಗಿದೆನೇತ್ರಾವತಿ ನದಿ ದಡದಲ್ಲಿ ಸಾವಿರ ಕೋಟಿ ರೂಪಾಯಿ ರಸ್ತೆಗಾಗಿ ಹೂಡಿಕೆಯಾಗಲಿದೆ. 2.5 ಕೋ.ರೂ. ಅಂದಾಜುಪಟ್ಟಿ ತಯಾರಿಸಲು ಕನ್ಸಲ್ಟೆನ್ಸಿಗಾಗಿ ಖಾಸಗಿ ಸಂಸ್ಥೆಗೆ ಒಪ್ಪಿಸಲಾಗಿದೆ. ಈ ರಸ್ತೆಯ ನಿರ್ಮಾಣದಿಂದ ಮಂಗಳೂರು ನಗರದ ಚಿತ್ರಣ ಬದಲಾಗಲಿದೆ. ಮಾತ್ರವಲ್ಲ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ.
– ಜೆ.ಆರ್. ಲೋಬೋ, ಶಾಸಕರು