Advertisement
ಎಪ್ರಿಲ್‌ನೊಳಗೆ ಚುನಾವಣೆ ನಡೆಯಲಿದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಚುನಾವಣಾ ಸಿದ್ಧತೆಯ ಕಹಳೆ ಮೊಳಗಿಸಿವೆ.
Related Articles
Advertisement
ಹೊಸದಿಲ್ಲಿ ತಂತ್ರಕ್ಕೆ ಅವಕಾಶದ.ಕ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಬಿಜೆಪಿ ಸುಳ್ಯ ಕ್ಷೇತ್ರ ದಲ್ಲಿ ಮಾತ್ರ ಶಾಸಕರನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಆ ಕ್ಷೇತ್ರವನ್ನು ಹೊರತುಪಡಿಸಿ ಉಳಿದಂತೆ ಹೊಸ ಅಭ್ಯರ್ಥಿಗಳ ಆಯ್ಕೆಗೆ ಅವಕಾಶಗಳಿವೆ. ಇದು ಹೊಸದಿಲ್ಲಿ ತಂತ್ರಗಾರಿಕೆಯನ್ನು ದಕ್ಷಿಣ ಜಿಲ್ಲೆಯಲ್ಲಿ ಪ್ರಯೋಗಿಸಲು ಅನುಕೂಲ ಮಾಡಿಕೊಟ್ಟಿದೆ. ಎಲ್ಲ ಕ್ಷೇತ್ರಗಳಲ್ಲೂ ಆದಷ್ಟು ಹೊಸಮುಖಗಳನ್ನು ಈ ಬಾರಿ ಕಣಕ್ಕಿಳಿಸುವ ಇರಾದೆಯನ್ನು ಪಕ್ಷದ ವರಿಷ್ಠ ಮಂಡಳಿ ವ್ಯಕ್ತಪಡಿಸಿದೆ ಎನ್ನಲಾಗಿದೆ. ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಬಂಟ್ವಾಳ, ಪುತ್ತೂರು ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿ ಗಳು ಆಂತರಿಕ ಸಮೀಕ್ಷೆಯ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ನೆಲೆಯಲ್ಲಿ ಕಾರ್ಯಕರ್ತರ ಪಾಳೆಯ ಹಾಗೂ ಸಾಮಾಜಿಕ ಕಾರ್ಯ ಕ್ರಮ ಗಳ ಆಯೋಜನೆಯ ಮೂಲಕ ತಮ್ಮ ಪರವಾಗಿ ಒಂದು ಅಲೆಯನ್ನು ಸೃಷ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಹಿಂದಿನ ಬಾರಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಜತೆಗೆ ಹೊಸಬರು ಕೂಡ ಒಳಗೊಂಡಿದ್ದಾರೆ. ಆಂತರಿಕ ಸಮೀಕ್ಷೆಯಲ್ಲಿ ತಮ್ಮ ಹೆಸರು ಇದೆ ಎಂಬ ಮಾತುಗಳನ್ನು ಕೂಡ ಹರಿಯಬಿಡುವುದು ಕಂಡುಬರುತ್ತಿದೆ. ಸವಾಲಿನ ಮುನ್ಸೂಚನೆ
ಹೊಸಬರಿಗೆ ಮಣೆ ಹಾಕುವ ತಂತ್ರಗಾರಿಕೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿರೋಧ ಎದುರಾಗುವ ಮುನ್ಸೂಚನೆಗಳು ಈಗಾಗಲೇ ಕೇಳಿಬಂದಿವೆ. ಜಿಲ್ಲೆಯಲ್ಲಿ ಎರಡು ಪ್ರಭಾವಿ ಕ್ಷೇತ್ರಗಳಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಈ ಬಾರಿಯೂ ಟಿಕೆಟು ಆಕಾಂಕ್ಷಿಗಳಾಗಿದ್ದು ಅವಕಾಶ ದೊರೆಯುವ ನಿರೀಕ್ಷೆಯಲ್ಲಿ ಈಗಾಗಲೇ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಈ ಹಿಂದಿನ ಚುನಾ ವಣೆ ಯಲ್ಲಿ ನಾವು ಪಕ್ಷಕ್ಕೆ ಪ್ರತಿಕೂಲದ ಪರಿಸ್ಥಿತಿ ಇದ್ದರೂ ವರಿಷ್ಠರ ಆದೇಶಕ್ಕೆ ತಲೆಬಾಗಿ ಸ್ಪರ್ಧಿಸಿದ್ದೇವೆ. ಒಂದಷ್ಟು ಹಣವನ್ನು ಕಳೆದುಕೊಂಡಿದ್ದೇವೆ. ಈ ಬಾರಿ ಪಕ್ಷಕ್ಕೆ ಪೂರಕವಾದ ವಾತಾವರಣ ಕ್ಷೇತ್ರದಲ್ಲಿ ಕಂಡುಬರುತ್ತಿದೆ. ಈ ಸನ್ನಿವೇಶದಲ್ಲಿ ಹೊಸಬರನ್ನು ತಂದು ಹಾಕುವುದು ಸರಿಯಲ್ಲ ಎಂಬುದಾಗಿ ತಮ್ಮ ಆಪ್ತ ವಲಯದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ. ಬಿಜೆಪಿ ಕಾರ್ಯಕರ್ತರ ಪಕ್ಷ. ಸಂಘಟನಾತ್ಮವಾಗಿ ಬೆಳೆದು ಬಂದಿದೆ. ಇಲ್ಲಿ ಅಭ್ಯರ್ಥಿಗಳು ಯಾರು ಆಗುತ್ತಾರೆ ಎಂಬ ಬಗ್ಗೆ ಕಾರ್ಯಕರ್ತರು ತಲೆ ಕೆಡಿಸಿ ಕೊಳ್ಳುವುದಿಲ್ಲ. ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿ ಅವರನ್ನು ಗೆಲ್ಲಿಸುವತ್ತ ಶ್ರಮಿಸುತ್ತಾರೆ. ಹಾಗಾಗಿ ನಮಗೆ ಅಭ್ಯರ್ಥಿಗಳ ಕುರಿತಂತೆ ಯಾವುದೇ ಸಮಸ್ಯೆ ಎದುರಾಗದು ಎಂಬುದು ಪಕ್ಷದ ಜಿಲ್ಲಾ ಪ್ರಮುಖ ನಾಯಕರೋರ್ವರ ಅಭಿಪ್ರಾಯ. ದಿಲ್ಲಿಯಲ್ಲಿ ಏನಾಗಿತ್ತು?
ದಿಲ್ಲಿಯ ಮಹಾನಗರ ಪಾಲಿಕೆಗೆ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ 272 ಕ್ಷೇತ್ರಗಳ ಪೈಕಿ 267 ಕ್ಷೇತ್ರಗಳಲ್ಲಿ ಬಿಜೆಪಿ ಹೊಸಬರಿಗೆ ಪಕ್ಷದ ಟಿಕೆಟು ನೀಡಿತ್ತು. ಅಭ್ಯರ್ಥಿಗಳ ಆಯ್ಕೆ ಮೊದಲು ಆಯಾಯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪೈಕಿ ಆಂತರಿಕ ಮೂಲಗಳಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಚುನಾವಣೆಯಲ್ಲಿ 181 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಈ ಪ್ರಯೋಗದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿತ್ತು. - ಕೇಶವ ಕುಂದರ್