Advertisement
ಇಂಟರ್‌ನೆಟ್‌ನಲ್ಲಿ ಫೋಟೋಗ ಳನ್ನೂ ನೋಡಿರಬಹುದು. ಆದರೆ, ಆ ವಿಸ್ಮಯ ಲೋಕದಲ್ಲೇ ನೀವು ಸಂಚರಿಸಿ ದರೆ ಹೇಗಿರುತ್ತದೆ? ಕಲ್ಪನೆಯೇ ರೋಮಾಂಚಕಾರಿಯಾಗಿದೆ ಅಲ್ಲವೇ? ಆ ಸ್ವ-ಅನುಭವ ನೀಡಲು ಜವಾಹರ ಲಾಲ್ ನೆಹರು ತಾರಾಲಯ ಸಜ್ಜಾಗಿದೆ. ಭೂಮಿಯ ಮೇಲೆ ಕಾಣಲು ಸಾಧ್ಯವೇ ಆಗದ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ತಾರಾಲಯದಲ್ಲಿ ಕಾಲ್ಪನಿಕ “ಗಗನ ಯಾತ್ರೆ’ ವ್ಯವಸ್ಥೆ ಕಲ್ಪಿಸಲಾಗಿದೆ. ಅಷ್ಟೇ ಯಾಕೆ, ಭೂಮಿಯಿಂದ ಹೊರಗೆ ನಿಂತು ತಿರುಗಿ ನೋಡಿದಾಗ ಕಾಣುವ ಅಪೂರ್ವ ನೋಟವೂ ಅಲ್ಲಿದೆ.
Related Articles
Advertisement
ಜಾತಕಗಳಲ್ಲಿ ಗ್ರಹಗಳು ಕುಳಿತಿವೆ: ಸಿಎಂ ಬೇಸರಬೆಂಗಳೂರು: “ಗ್ರಹಗಳ ಮೇಲೆ ಪಾದಾರ್ಪಣೆ ಮಾಡಿದ್ದರೂ, ಜಾತಕಗಳಲ್ಲಿ ಮಾತ್ರ ಗ್ರಹಗಳು ಹಾಗೇ ಕುಳಿತಿವೆ. ಗ್ರಹಣಗಳ ಕಾಟವೂ ತಪ್ಪಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಜವಾಹರಲಾಲ್ ನೆಹರು ತಾರಾಲಯದ ಹೈಬ್ರಿಡ್ ಪ್ರೊಜೆಕ್ಷನ್ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿದರು. ಇಂದು ವಿಜ್ಞಾನ ಸಾಕಷ್ಟು ಮುಂದುವರಿದಿದೆ. ಆಕಾಶದಲ್ಲಿರುವ ಗ್ರಹಗಳಲ್ಲಿ ಏನಿದೆ ಎಂಬುದನ್ನು ಖುದ್ದು ನಮ್ಮ ವಿಜ್ಞಾನಿಗಳು ಹೋಗಿ ತಿಳಿದುಕೊಂಡು ಬಂದಿದ್ದಾರೆ. ಆದರೂ, ನಮ್ಮ ಜಾತಕಗಳಲ್ಲಿ ಶನಿ, ಗುರು ಮತ್ತಿತರ ಗ್ರಹಗಳು ಬಂದು ಕುಳಿತುಕೊಳ್ಳುತ್ತವೆ. ಸೂರ್ಯ ಮತ್ತು ಚಂದ್ರಗ್ರಹಣಗಳ ಕಾಟ ತಪ್ಪಿಲ್ಲ. ಗ್ರಹಣದ ಸಂದರ್ಭದಲ್ಲೂ ಕೂಲಿ ಕೆಲಸ ಮಾಡುವ ಕಾರ್ಮಿಕರಿದ್ದಾರೆ. ಆದರೆ, ಸುಶಿಕ್ಷತರು ಈ ಕಂದಾಚಾರ ಗಳನ್ನು ಅನುಸರಿಸುತ್ತಿದ್ದಾರೆ. ಇದರಿಂದ ನಾವಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಂದಾಚಾರಗಳು ಇರಬೇಕು ಎಂದು ಬಯಸುವ ವರ್ಗವೂ ಒಂದಿದೆ. ಆ ಮೂಲಕ ಜನರ ಶೋಷಣೆ ನಡೆಸುವುದು ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರ. ಆದರೆ, ವಿಜ್ಞಾನದ ಜತೆ ನಾವು ಹೆಜ್ಜೆ ಹಾಕದಿದ್ದರೆ, ಅಭಿವೃದ್ಧಿ ಸಾಧ್ಯವಿಲ್ಲ ಎಂದ ಅವರು, ಮೂಲವಿಜ್ಞಾನ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮೂಲ ವಿಜ್ಞಾನಕ್ಕೆ ಪ್ರೋತ್ಸಾಹ ಕೊಡುವ ಕೆಲಸ ಹೆಚ್ಚಾಗಬೇಕು ಎಂದರು. ಬೇಸ್ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಯು.ಆರ್.ರಾವ್, ಸುಮಾರು 12.5 ಕೋಟಿ ವೆಚ್ಚದಲ್ಲಿ ನೆಹರು ತಾರಾಲಯವನ್ನು ನವೀಕರಿಸಲಾಗಿದ್ದು, ಈ ಮೂಲಕ 25 ವರ್ಷಗಳ ಹಿಂದಿನ ತಂತ್ರಜ್ಞಾನಗಳು ಈಗ ಬದಲಾಯಿಸಲಾಗಿದೆ. ವರ್ಷಕ್ಕೆ 3 ಲಕ್ಷ ಜನ ಇಲ್ಲಿಗೆ ಭೇಟಿ ನೀಡುತ್ತಾರೆ ಎಂದು ಮಾಹಿತಿ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ. ಬೇಸ್ ಆಡಳಿತ ಮಂಡಳಿ ನಿರ್ದೇಶಕಿ ಡಾ.ಬಿ.ಎಸ್. ಶೈಲಜಾ, ಜರ್ಮನಿಯ ಕಾರ್ಲ್ ಝೈಸ್ ಕಂಪೆನಿಯ ಡಾ.ಮಾರ್ಟಿನ್ ವಿಮನ್ ಉಪಸ್ಥಿತರಿದ್ದರು.