Advertisement

‘ಕೆಜಿಎಫ್ 2’ ಸಿನಿಮಾ ಬಿಡುಗಡೆಗೆ ಹೊಸ ಡೇಟ್ ?

12:42 PM Jun 24, 2021 | Team Udayavani |

ಬೆಂಗಳೂರು:  ಕನ್ನಡದ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್-2’ ಸಿನಿಮಾ ರಿಲೀಸ್ ಗೆ ಮತ್ತೊಂದು ದಿನಾಂಕ ಫಿಕ್ಸ್ ಮಾಡಲಾಗಿದೆಯಂತೆ.

Advertisement

ಪ್ರಶಾಂತ್ ನೀಲ್ ನಿರ್ದೇಶನದ ಬಹುಭಾಷಾ ಸಿನಿಮಾ ‘ಕೆಜಿಎಫ್-2’ ಇದೇ ಜುಲೈನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್ ಲಾಕ್ ಡೌನ್ ನಿಂದಾಗಿ ಸ್ವಲ್ಪ ಹಿನ್ನಡೆಯಾಯಿತು.

ಮೂಲಗಳ ಪ್ರಕಾರ ಥಿಯೇಟರ್ ಶೇ.100 ರಷ್ಟು ತೆರೆಯಲು ಅವಕಾಶ ಸಿಕ್ಕರೆ ಮತ್ತು ಕೊರೋನಾ ಮೂರನೇ ಅಲೆ ಇಲ್ಲದೇ ಇದ್ದರೆ ಕೆಜಿಎಫ್ 2 ಸಿನಿಮಾ ಸೆಪ್ಟೆಂಬರ್ 9 ರಂದು ಥಿಯೇಟರ್ ಗೆ ಬರಲಿದೆ. ಈ ಸಿನಿಮಾದ ಒಟಿಟಿ ಹಕ್ಕಿಗಾಗಿ ಅಮೆಝೋನ್ ಪ್ರೈಮ್ ಜೊತೆ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿಯಿದೆ. ಈ ಸುದ್ದಿ ತಿಳಿಯುತ್ತಲೇ ಅಭಿಮಾನಿಗಳು ಖುಷಿಯಾಗಿದ್ದಾರೆ.

ಇನ್ನು ಕೆಜಿಎಫ್ ಮೊದಲ ಭಾಗ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಿತು. ಹಿಂದಿ, ತೆಲುಗು, ತಮಿಳು ಸೇರಿದಂತೆ ಎಲ್ಲೆಡೆ ಅದ್ಭುತ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತು. ಇದೀಗ ಎರಡನೇ ಭಾಗದ ಮೇಲೆ ಸಿನಿ ರಸಿಕರ ನಿರೀಕ್ಷೆ ಬೆಟ್ಟದಷ್ಟಿದ್ದು, ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಿನ ಮೇಲೆ ನಿಂತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next