Advertisement

New Criminal Laws: ಪೂರ್ಣ ಸ್ವದೇಶಿ, ನ್ಯಾಯ ಆಧಾರಿತ, ಸಂತ್ರಸ್ತರ ಪರ- ಅಮಿತ್‌ ಶಾ

05:14 PM Jul 01, 2024 | Team Udayavani |

ನವದೆಹಲಿ:  ಹೊಸ ಅಪರಾಧ ಕಾಯ್ದೆಗಳು  (New Criminal Laws) ಸಂತ್ರಸ್ತರ ಪರ ಮತ್ತು ನ್ಯಾಯ ಆಧಾರಿತವಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.

Advertisement

ಸಂಸತ್ತಿನ ಗ್ರಂಥಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,  ದೇಶ ಸ್ವಾತಂತ್ರ್ಯ ಪಡೆದು ಸರಿಸುಮಾರು 77 ವರ್ಷಗಳ ನಂತರ, ಅಪರಾಧ ನ್ಯಾಯ ವ್ಯವಸ್ಥೆಯು ಈಗ ಸಂಪೂರ್ಣ ‘ಸ್ವದೇಶಿ’ ಆಗಿದ್ದು, ಭಾರತೀಯ ಮೌಲ್ಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. 75 ವರ್ಷಗಳ ನಂತರ ವಸಾಹತುಶಾಹಿ ಕಾನೂನುಗಳನ್ನು ಭಾರತೀಯ ಸಂಸತ್ತು ಜಾರಿಗೆ ತಂದ ಹೊಸ ಕಾನೂನುಗಳೊಂದಿಗೆ ಜುಲೈ 1 ರ ಸೋಮವಾರದಿಂದ ಜಾರಿಗೆ ಬಂದಿದೆ ಎಂದು ಹೇಳಿದರು.

“ದಂಡ” ಬದಲಿಗೆ, ಅದು ಈಗ “ನ್ಯಾಯ” ಆಗಿದೆ. ವಿಳಂಬದ ಬದಲಿಗೆ, ತ್ವರಿತ ವಿಚಾರಣೆ ಮತ್ತು ತ್ವರಿತ ನ್ಯಾಯ ಇರುತ್ತದೆ, ಮೊದಲು, ಪೊಲೀಸರ ಹಕ್ಕುಗಳನ್ನು ಮಾತ್ರ ರಕ್ಷಿಸಲಾಗಿದೆ ಆದರೆ ಈಗ, ಸಂತ್ರಸ್ತರು ಮತ್ತು ದೂರುದಾರರ ಹಕ್ಕುಗಳನ್ನು ಸಹ ರಕ್ಷಿಸಲಾಗುತ್ತದೆ. ” ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಹೊಸ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಮೂರು ಹೊಸ ಕಾನೂನುಗಳು ಮಧ್ಯರಾತ್ರಿಯಿಂದ ಜಾರಿಗೆ ಬಂದಿವೆ. “ಈಗ, ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಇರುತ್ತದೆ. ಅಪರಾಧ ಪ್ರಕ್ರಿಯಾ  ಸಂಹಿತೆ (ಸಿಆರ್‌ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಇರಲಿದೆ. ಭಾರತೀಯ ಸಾಕ್ಷ್ಯ ಕಾಯಿದೆ ಬದಲಿಗೆ ಭಾರತೀಯ ಸಾಕ್ಷ್ಯ  ನಿಯಮ (ಬಿಎಸ್ಎ) ಇರುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.
ದೇಶದ್ರೋಹದ ಸೆಕ್ಷನ್  ಸಂಪೂರ್ಣ ತೆಗೆದು ಹಾಕಿ ದೇಶ ವಿರೋಧಿ ಚಟುವಟಿಕೆಗಳಿಗೆ ಹೊಸ ಸೆಕ್ಷನ್ ತಂದಿದ್ದೇವೆ. ಈ ಹಿಂದೆ ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು ಅಪರಾಧ. ಈಗ, ಭಾರತದ ಏಕತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಪ್ರಯತ್ನಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಇದೆ ”ಎಂದು ಹೇಳಿದ್ದಾರೆ.

ಕುಟುಂಬದವರ ಸಮ್ಮುಖದಲ್ಲಿ ಹೇಳಿಕೆ ದಾಖಲು
ಈಗ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರಿಗೆ 20 ವರ್ಷ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಕರ ಅತ್ಯಾಚಾರಕ್ಕೆ ಮರಣದಂಡನೆ. ಒಬ್ಬರ ಗುರುತು ಮರೆಮಾಚುವ ಅಥವಾ ಸುಳ್ಳು ಭರವಸೆಗಳ ನೀಡುವ ಮೂಲಕ ಲೈಂಗಿಕ ಶೋಷಣೆಗಾಗಿ ಪ್ರತ್ಯೇಕ ಅಪರಾಧವನ್ನು ವ್ಯಾಖ್ಯಾನಿಸಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ಆಕೆಯ ಮನೆಯಲ್ಲಿಯೇ ಮಹಿಳಾ ಅಧಿಕಾರಿಗಳು ಮತ್ತು ಅವರ ಕುಟುಂಬದವರ ಸಮ್ಮುಖದಲ್ಲಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಆನ್‌ಲೈನ್ ಎಫ್‌ಐಆರ್‌ನ ಸೌಲಭ್ಯ ಕೂಡ ಒದಗಿಸಲಾಗಿದೆ. ಈ ಮೂಲಕ ಬಹಳಷ್ಟು ಮಹಿಳೆಯರನ್ನು ಮುಜುಗರದಿಂದ ರಕ್ಷಿಸಬಹುದು ಎಂದು ನಾವು ನಂಬುತ್ತೇವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next