Advertisement
ಈ ನಡುವೆ ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆಗೊಳಿಸಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಕುರಿತಾಗಿ ಮಾರ್ಗಸೂಚಿಯೊಂದನ್ನು ಇಂದು ಬಿಡುಗಡೆ ಮಾಡಿದೆ.
Related Articles
Advertisement
– ಇನ್ನು ಜನವಸತಿ ಪ್ರದೇಶಗಳಲ್ಲಿ ಲಭ್ಯವಿರುವ ಸಮುದಾಯ ಭವನಗಳು, ಸರಕಾರಿ ಕಟ್ಟಡಗಳು ಹಾಗೂ ಮಧ್ಯಾಹ್ನದ ಬಳಕ ಲಭ್ಯವಿರುವ ಅಂಗನವಾಡಿ ಕಟ್ಟಡಗಳನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ಶಿಪ್ಟ್ (ಪಾಳಿ) ಪದ್ಧತಿಯಲ್ಲಿ ತರಗತಿಗಳನ್ನು ನಡೆಸುವುದು:
ರಾಜ್ಯದಲ್ಲಿ 1 ರಿಂದ 5 ನೇ ತರಗತಿವರೆಗಿನ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಇವುಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಪಾಳಿ ವ್ಯವಸ್ಥೆಯಲ್ಲಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ.
1 ರಿಂದ 7ನೇ ತರಗತಿವರಗಿನ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಗತಿ ನಡೆಸಲು ಲಭ್ಯ ಎಲ್ಲಾ ವ್ಯವಸ್ಥೆಗಳು ಸಾಲದಾದಲ್ಲಿ ಪಾಳಿ ಪದ್ದತಿಯಲ್ಲಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ.
– 1 ಮತ್ತು 2ನೇ ತರಗತಿ ನಲಿ ಕಲಿ ಮಕ್ಕಳನ್ನು ಒಟ್ಟಿಗೆ ಸೇರ್ಪಡೆ ಮಾಡಿ ಬೋಧನೆಗೆ ಅವಕಾಶ.
– 1ರಿಂದ 7ನೇ ತರಗತಿಯವರೆಗೆ ಶಿಕ್ಷಕರ ಕೊರತೆ ಇದ್ದಲ್ಲಿ ಸ್ಥಳೀಯವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ.
– ಪ್ರಾಥಮಿಕ ಶಾಲೆಗಳಲ್ಲಿಯೂ ಪದವಿಗಳನ್ನು ಪಡೆದಿರುವ ಶಿಕ್ಷಕರು ಲಭ್ಯವಿರುವುದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಪರಸ್ಪರ ಸಮಾಲೋಚನೆ ನಡೆಸಿ ಪ್ರೌಢ ಶಾಲಾ ಶಿಕ್ಷಕರು 6 ಮತ್ತು 7 ನೇ ತರಗತಿಗಳಿಗೂ ಪ್ರಾಥಮಿಕ ಶಾಲೆಗಳಲ್ಲಿ ಪದವಿ ಹೊಂದಿರುವ ಶಿಕ್ಷಕರು 8 ಮತ್ತು 9ನೇ ತರಗತಿಗಳಿಗೂ ಬೋಧಿಸಲು ಅವಕಾಶ.
– ಸದ್ಯಕ್ಕೆ ಪಿಯು ತರಗತಿಗಳು 10 ಗಂಟೆಯಿಂದ 3.30ರವರೆಗೆ ನಡೆಯುತ್ತಿವೆ ಆದರೆ ಈ ತರಗತಿಗಳನ್ನು ಬೆಳಿಗ್ಗೆ 8.30 ರಿಂದ 12.30ರವರೆಗೆ ನಡೆಸಿದಲ್ಲಿ ಪ್ರೌಢಶಾಲಾ ಕೊಠಡಿಗಳನ್ನು ಬಳಸಿಕೊಂಡು ಪಿಯು ತರಗತಿಗಳನ್ನು ಸೂಕ್ತ ಸಾಮಾಜಿಕ ಅಂತರದೊಂದಿಗೆ ನಡೆಸಲು ಸೂಚನೆ.
– ರಾಜ್ಯದ ತಾಲೂಕು/ಹೋಬಳಿ ಕೇಂದ್ರಗಳಲ್ಲಿ ಕೆಲವು ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚಲ್ಪಟ್ಟಿದ್ದು, ಅವುಗಳನ್ನು ಅಗತ್ಯ ದುರಸ್ತಿ ಮಾಡಿಸಿ ಪ್ರೌಢಶಾಲೆಯ ಕೆಲವು ತರಗತಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಸೂಚನೆ.
ಪಾಳಿ ಪದ್ಧತಿಯಲ್ಲಿ ತರಗತಿ ಸಮಯಗಳ ವಿಂಗಡನೆ:ಮೊದಲನೇ ಪಾಳಿ ಸಮಯ ಬೆಳಿಗ್ಗೆ 7.50ರಿಂದ ಪ್ರಾರಂಭಗೊಂಡು ಮಧ್ಯಾಹ್ನ 12.20ರವರೆಗೆ ನಡೆಸುವುದು ಹಾಗೂ ಎರಡನೇ ಪಾಳಿಯನ್ನು ಮಧ್ಯಾಹ್ನ 12.10ರಿಂದ ಸಂಜೆ 5.00 ಗಂಟೆಯವರೆಗೆ ನಡೆಸಲು ಸಮಾಲೋಚನೆ ಮಾಡುವಂತೆ ಸೂಚನೆ. – ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಸಾರಿಗೆ ವ್ಯವಸ್ಥೆಯನ್ನು ಒದಗಿಸುವಾಗ ವಿದ್ಯಾರ್ಥಿಗಳನ್ನು ವಾಹನಗಳಲ್ಲಿ ಕರೆತರುವಾಗ ಸೂಕ್ತ ಸಾಮಾಜಿಕ ಅಂತರ ನಿಯಮಗಳನ್ನು ಪಾಲನೆ ಮಾಡಲು ನಿರ್ದೇಶನ ನೀಡಲಾಗಿದೆ.