Advertisement

ಆಯ್ದ ಕೈಗಾರಿಕೆಗಳಿಗೆ ವಿನಾಯಿತಿ : ಮಾರ್ಗಸೂಚಿ ಪರಿಷ್ಕರಿಸಿದ ಸರಕಾರ

11:02 PM May 08, 2021 | Team Udayavani |

ಬೆಂಗಳೂರು: ಕೋವಿಡ್‌ ಸೋಂಕು ಪ್ರಸರಣ ನಿಯಂತ್ರಣಕ್ಕಾಗಿ ಮೇ 10ರ ಬೆಳಗ್ಗೆ 6ರಿಂದ ಮೇ 24ರ ಬೆಳಗ್ಗೆ 6ರ ವರೆಗೆ ಇನ್ನಷ್ಟು ಬಿಗಿ ಕ್ರಮಗಳನ್ನು ಸರಕಾರ ಜಾರಿಗೊಳಿಸಿದೆ.

Advertisement

ಅಗತ್ಯ ವಸ್ತುಗಳ ಉತ್ಪಾದನೆ ಮತ್ತು ಆಯ್ದ ಅತ್ಯವಶ್ಯಕ ಕೈಗಾರಿಕೆಗಳನ್ನು ಹೊರತುಪಡಿಸಿ ಉಳಿದ ಕೈಗಾರಿಕೆಗಳು, ಕೈಗಾರಿಕಾ ಪ್ರದೇಶಗಳ ಚಟುವಟಿಕೆಗಳನ್ನು ನಿರ್ಬಂಧಿಸಿ ಮಾರ್ಗಸೂಚಿ ಹೊರಡಿಸಿದೆ.

ಮುಖ್ಯವಾಗಿ ಔಷಧಗಳು, ವೈದ್ಯಕೀಯ ಉಪಕರಣಗಳು, ವೈದ್ಯಕೀಯ ಆಮ್ಲಜನಕ, ಪ್ಯಾಕಿಂಗ್‌ ಸಾಮಗ್ರಿ, ಕಚ್ಚಾ ಪದಾರ್ಥಗಳಿಗೆ ಸಂಬಂಧಪಟ್ಟ ಕೈಗಾರಿಕೆಗಳಿಗೆ ವಿನಾಯಿತಿ ಇದೆ. ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳು, ಶೀತಲಗೃಹ, ಉಗ್ರಾಣ ಸೇವೆಗಳು, ಅಗತ್ಯ ವಸ್ತುಗಳ ಉತ್ಪಾದನ ಘಟಕಗಳು, ದಿನದ 24 ತಾಸು ಕಾರ್ಯ ನಿರ್ವಹಣೆ ಅಗತ್ಯವಿರುವ ಕೈಗಾರಿಕೆಗಳು, ಸ್ಥಳದಲ್ಲೇ ಕಾರ್ಮಿಕರು ಲಭ್ಯವಿರುವ ಸರಕಾರಿ ಮತ್ತು ಖಾಸಗಿ ಕೈಗಾರಿಕೆಗಳು, ಕೈಗಾರಿಕಾ ಪ್ರದೇಶಗಳು, ಉತ್ಪಾದನ ಘಟಕಗಳ ಕಾರ್ಯ ನಿರ್ವಹಣೆಗೆ ವಿನಾಯಿತಿ ನೀಡಲಾಗಿದೆ.

ವೈದ್ಯಕೀಯ ಸಂಬಂಧಿ ಚಟುವಟಿಕೆಗಳು
– ಔಷಧ ತಯಾರಿ ಘಟಕ, ದೊಡ್ಡ ಪ್ರಮಾಣದ ಔಷಧ ತಯಾರಿ ಘಟಕಗಳು, ಔಷಧೋದ್ಯಮ, ಸ್ಯಾನಿಟೈಸರ್‌ ಸಲಕರಣೆಗಳು, ಆಮ್ಲಜನಕ, ವೈದ್ಯಕೀಯ ಉಪಕರಣಗಳು, ವೈದ್ಯ ಸೇವೆಯಲ್ಲಿ ಬಳಕೆಯಾಗುವ ವಸ್ತ್ರಗಳು, ಅದರ ಕಚ್ಚಾ ಸಾಮಗ್ರಿ, ಸಂಬಂಧಪಟ್ಟ ಸಲಕರಣೆಗಳ ಉತ್ಪಾದನೆ.

– ಆಮ್ಲಜನಕ ಪೂರೈಕೆ ಕೊಳವೆ, ಸಕ್ಷನ್‌ ಯಂತ್ರ ಸೇರಿದಂತೆ ವೈದ್ಯಕೀಯ ಉಪಕರಣಗಳು, ಪಿಪಿಇ ಗೇರ್‌, ಸರ್ಜಿಕಲ್‌ ಸಾಧನಗಳು
– ಗಾಜ್‌- ಬ್ಯಾಂಡೇಜ್‌ ಬಟ್ಟೆ
– ಸಂಶೋಧನೆ ಮತ್ತು ಅಭಿವೃದ್ಧಿ
– ಆಯುರ್ವೇದ/ ಹೋಮಿಯೋಪಥಿ ಮತ್ತು ಇತರ ಔಷಧ ತಯಾರಿ ಘಟಕ
– ಕೋವಿಡ್‌- 19 ಕಿಟ್‌, ವೆಂಟಿಲೇಟರ್‌ಗಳು
– ಆಕ್ಸಿಜನ್‌ ಡೊಮೆಸ್ಟಿಕ್‌ ಗ್ಯಾಸ್‌ ಸಿಲಿಂಡರ್‌
– ಮಾಸ್ಕ್, ಬಾಡಿ ಸೂಟ್ಸ್‌
– ಪೇಪರ್‌ ನ್ಯಾಪ್ಕಿನ್, ಡೈಪರ್‌/ ಸ್ಯಾನಿಟರಿ ನ್ಯಾಪ್ಕಿನ್
– ಲಿಕ್ವಿಡ್‌ ಸೋಪ್‌, ಡಿಟರ್ಜೆಂಟ್‌, ಫೆನಾಯಿಲ್‌, ಫ್ಲೋರ್‌ ಕ್ಲೀನರ್‌, ಬ್ಲೀಚಿಂಗ್‌ ಪೌಡರ್‌, ಸ್ಯಾನಿಟೈಸರ್‌

Advertisement

ಆಹಾರ ಮತ್ತು ಆಹಾರ ಸಂಸ್ಕರಣೆ
– ಅಕ್ಕಿ, ಎಣ್ಣೆ, ಬೇಳೆ ಗಿರಣಿ, ಡೇರಿ ಉತ್ಪನ್ನಗಳು, ಆರ್‌.ಒ. ಮತ್ತು ಡಿಸ್ಟಿಲ್ಡ್‌ ವಾಟರ್‌ ಪ್ಲಾಂಟ್‌, ಪ್ಯಾಕೇಜ್‌x ಕುಡಿಯುವ ನೀರಿನ ಘಟಕ, ರೋಲರ್‌ ಫ್ಲೋರ್‌ ಗಿರಣಿ
– ವರ್ಮಿಸೆಲ್ಲಿ, ಬಿಸ್ಕೆಟ್‌, ಹಣ್ಣಿನ ರಸ, ಪಲ್ಪ್ ಮತ್ತು ಸಂಬಂಧಪಟ್ಟ ಆಹಾರ ಉತ್ಪನ್ನ
– ಬೇಕರಿ- ಕನೆಕ್ಷನರೀಸ್‌
– ಮೀನು, ಕುಕ್ಕುಟ, ಪಶು ಆಹಾರ
– ಐಸ್‌ಕ್ರೀಂ ಘಟಕ
– ಮೆಣಸಿನಕಾಯಿ, ಅರಿಶಿನ, ಉಪ್ಪು, ಸಾಂಬಾರ ಪದಾರ್ಥ ಸೇರಿದಂತೆ ಕೃಷಿ ಆಧಾರಿತ ಕೈಗಾರಿಕೆ

ಇತರ
ರಸಗೊಬ್ಬರ, ಕೃಷಿ ಯಂತ್ರೋಪಕರಣಗಳು, ಕೃಷಿ ಸಂಬಂಧಿ ಸಲಕರಣೆಗಳ ತಯಾರಿ ಘಟಕ. ವೈಮಾನಿಕ ಮತ್ತು ರಕ್ಷಣ ಕ್ಷೇತ್ರಕ್ಕೆ ಪೂರೈಕೆಯಾಗಬೇಕಾದ ಸಾಧನ- ಸಲಕರಣೆಗಳ ಉತ್ಪಾದನ ಘಟಕ. ಈ ಸಾಧನಗಳ ಪ್ಯಾಕೇಜಿಂಗ್‌ ಸಲಕರಣೆಗಳ ತಯಾರಿ ಘಟಕ. ತ್ಯಾಜ್ಯ ನೀರು ಸಂಸ್ಕರಣ ಘಟಕ. ದಿನಸಿ, ಆಹಾರ ಧಾನ್ಯಗಳ ಬಿ2ಬಿ ವ್ಯವಹಾರ, ಅಗತ್ಯ ವಸ್ತುಗಳಿಗೆ ಸಂಬಂಧಪಟ್ಟ ಚಟುವಟಿಕೆಗಳು. ಇ- ಕಾಮರ್ಸ್‌ ಕಂಪೆನಿಗಳು, ಕೃಷಿ, ಆಹಾರ ಸಂಸ್ಕರಣ ಘಟಕಗಳು, ಗೋದಾಮು, ಸಾಗಣೆ ಚಟುವಟಿಕೆ.

ನಿರಂತರ ಕಾರ್ಯನಿರ್ವಹಣೆ ಅಗತ್ಯ ಉದ್ದಿಮೆಗಳು
ಪೆಟ್ರೋಲಿಯಂ ರಿಫೈನರಿಗಳು. ಭಾರೀ ಉಕ್ಕು- ಸಿಮೆಂಟ್‌ ತಯಾರಿ ಘಟಕಗಳು. ಪೇಂಟ್‌ ಮತ್ತು ರಾಸಾಯನಿಕ ತಯಾರಿ ಘಟಕಗಳು, ಸಕ್ಕರೆ ಕಾರ್ಖಾನೆ, ರಸಗೊಬ್ಬರ ತಯಾರಿ, ಗಾಜು ತಯಾರಿ ಘಟಕ, ಟೈರ್‌, ಪೇಪರ್‌ ತಯಾರಿ ಘಟಕ, ಭಾರೀ ಫೌಂಡ್ರಿ ಒಳಗೊಂಡ ಆಟೊಮೊಬೈಲ್‌ ತಯಾರಿ ಘಟಕಗಳು, ಕೋಲ್‌ ಟಾರ್‌ ಡಿಸ್ಟಿಲೇಷನ್‌ ಘಟಕ, ಜವಳಿ ಘಟಕ.

Advertisement

Udayavani is now on Telegram. Click here to join our channel and stay updated with the latest news.

Next