Advertisement

ನಿಲ್ಲದ ಕೋವಿಡ್ ಆತಂಕ: ಉಡುಪಿ ಜಿಲ್ಲೆಯಲ್ಲಿ ಇಂದು 14 ಜನರಿಗೆ ಕೋವಿಡ್ ಸೋಂಕು ದೃಢ

08:27 PM Jun 27, 2020 | keerthan |

ಉಡುಪಿ: ಈಗಾಗಲೇ ಸಹಸ್ರ ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿರುವ ಉಡುಪಿ ಜಿಲ್ಲೆಯಲ್ಲಿಂದು 14 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1139ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯ ಪಡುಬಿದ್ರಿ ಸಮೀಪದ ನಡ್ಸಾಲು ಗ್ರಾಮದ ಕಣ್ಣಂಗಾರು ಬೈಪಾಸ್ ನ ಸಹೋದರರಿಬ್ಬರಿಗೆ ಈ ಮೊದಲು ಕೋವಿಡ್-19 ಸೋಂಕು ಪತ್ತೆಯಾಗಿತ್ತು. ಇವರ ಸಂಪರ್ಕಕ್ಕೆ ಬಂದ ನಾಲ್ವರಿಗೆ ಕೋವಿಡ್ ಸೋಂಕು ತಾಗಿದೆ. ಅಧಿಕಾರಿಗಳಿಗೆ ತಮ್ಮ ಪ್ರಯಾಣದ ಬಗ್ಗೆ ತಪ್ಪು ಮಾಹಿತಿ ನೀಡಿದ ಕಾರಣ ಈ ಸಹೋದರರಿಬ್ಬರ (ಸೋಂಕಿತ ಸಂಖ್ಯೆ 10186 ಮತ್ತು 10187 ) ಮೇಲೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಹೆಜಮಾಡಿ ಕೋಡಿಯ ವ್ಯಕ್ತಿಯು ಜ್ವರ ಕಂಡು ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ಪರೀಕ್ಷೆ ವೇಳೆ ಈತನಿಗೂ ಕೋವಿಡ್-19 ಸೋಂಕು ಇರುವುದು ದೃಢವಾಗಿತ್ತು. ಸದ್ಯ ಈತನ ಸಂಪರ್ಕದಿಂದ ಹತ್ತು ಮಂದಿಗೆ ಕೋವಿಡ್ 19 ಸೋಂಕು ದೃಢವಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ  1038 ಮಂದಿ ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಸೋಂಕಿನ ಕಾರಣದಿಂದ ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 99 ಸಕ್ರಿಯ ಕೋವಿಡ್-19 ಸೋಂಕು ಪ್ರಕರಣಗಳಿವೆ. ಇವರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next