Advertisement
ಪುರುಷ ಮತ್ತು ಮಹಿಳಾ ಸಿಬಂದಿಗೆ ಧರಿಸಲು ಅನುಕೂಲವಾಗುವಂತೆ ಮತ್ತು ಹವಾಮಾನಕ್ಕೆ ತಕ್ಕಂತೆ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ಶನಿವಾರ ರಕ್ಷಣ ಪಡೆಗಳ 74ನೇ ಸ್ಥಾಪನ ದಿನದ ನಿಮಿತ್ತ ದಿಲ್ಲಿಯಲ್ಲಿ ನಡೆದ ಪರೇಡ್‌ನಲ್ಲಿ ಪ್ಯಾರಾಚೂಟ್ ರೆಜಿಮೆಂಟ್‌ನ ಯೋಧರು ಹೊಸ ಸಮವಸ್ತ್ರವನ್ನು ಧರಿಸಿ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ.
ಸೇನಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಭೂಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ, ದೇಶದ ಗಡಿ ಪ್ರದೇಶವನ್ನು ಬದಲಾವಣೆ ಮಾಡುವ ಯಾವುದೇ ಪ್ರಯತ್ನವನ್ನೂ ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಸಾರಿದ್ದಾರೆ. ಕಳೆದ ವರ್ಷ ಉತ್ತರ ಭಾಗದ ಗಡಿ ಪ್ರದೇಶಗಳ ಪರಿಸ್ಥಿತಿ ನಿರ್ವಹಣೆ ಅತ್ಯಂತ ಸವಾಲಿನ ದ್ದಾಗಿತ್ತು ಎಂದ ಅವರು, ಈಗ ಪೂರ್ವ ಲಡಾಖ್‌ನಲ್ಲಿ ಪರಿಸ್ಥಿತಿ ನಿಯಂತ್ರ ಣದಲ್ಲಿದೆ ಎಂದಿದ್ದಾರೆ. ಇದೇ ವೇಳೆ, ದೇಶದ ಹಿತಾಸಕ್ತಿ ಕಾಪಾಡುವಲ್ಲಿ ಸೇನೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಅದು ನಮ್ಮ ಪ್ರಜೆಗಳ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಅದರ ಸೇವೆ ಅನನ್ಯವಾದದ್ದು ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಸಶಸ್ತ್ರ ಪಡೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Related Articles
Advertisement
ಹಲವು ಬಣ್ಣಗಳ ಬಳಕೆಹೊಸ ಸಮವಸ್ತ್ರದಲ್ಲಿ ಆಲಿವ್ ಗ್ರೀನ್, ವಿವಿಧ ರೀತಿಯ ಭೂ ಪ್ರದೇಶ ಗಳನ್ನು ಹೊಂದಿಕೊಂಡು ಬಣ್ಣಗಳನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ. ಹೊಸ ಸಮವಸ್ತ್ರವನ್ನು ಟಕ್ ಇನ್ ಮಾಡುವ ಕ್ರಮವಿಲ್ಲ. ಮಹಿಳಾ ಅಧಿಕಾರಿಗಳಿಗೆ ಮತ್ತು ಸಿಬಂದಿಗೆ ಕೊಂಚ ವ್ಯತ್ಯಾಸ ಇರುವ ಸಮವಸ್ತ್ರ ಇದೆ. ಯಾವ ರೀತಿಯ ಬಟ್ಟೆ?
ಹತ್ತಿ ಮತ್ತು ಪಾಲಿಸ್ಟರ್ ಅನ್ನು 70:30ರ ಅನುಪಾತದಲ್ಲಿ ಬಳಸಲಾಗಿದೆ. ಸುಲಭದಲ್ಲಿ ಒಣಗಿಸಲೂ ಸಾಧ್ಯ. ವಿನ್ಯಾಸಗೊಳಿಸಿದ್ದು ಯಾರು?
ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವಿನ್ಯಾಸ ತಂಡದ ಸಹಯೋಗದೊಂದಿಗೆ ಹೊಸ ಸಮವಸ್ತ್ರ ವಿನ್ಯಾಸಗೊಳಿಸಲಾಗಿದೆ. ಹೊಸತೇನಿದೆ?
-ಯೋಧರಿಗೆ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ವಿನ್ಯಾಸ
-ವಿವಿಧ ಭೌಗೋಳಿಕ ಪ್ರದೇಶಗಳಿಗೆ ಅನ್ವಯವಾಗುವಂತೆ ತಯಾರು
-ಕಠಿನ ಚಳಿ, ಅತಿಯಾದ ಬಿಸಿ ಹೀಗೆ ಅತ್ಯಂತ ಪ್ರತಿಕೂಲ ಹವಾಮಾನ ತಡೆಯುವ ನಿಟ್ಟಿನಲ್ಲಿ ಅನುಕೂಲ
-ದೀರ್ಘಕಾಲ ಬಾಳಿಕೆ ಬರುವಂಥ ಬಟ್ಟೆಯ ಬಳಕೆ ಲೋಂಗೇವಾಲಾದಲ್ಲಿ ರಾರಾಜಿಸಿದ ಖಾದಿ ರಾಷ್ಟ್ರಧ್ವಜ
ಸೇನಾ ದಿನದ ಪ್ರಯುಕ್ತ ರಾಜಸ್ಥಾನಕ್ಕೆ ಹೊಂದಿಕೊಂಡಿರುವ ಭಾರತ- ಪಾಕಿಸ್ಥಾನ ಗಡಿಯಿರುವ ಲೋಂಗೇವಾಲಾದಲ್ಲಿ ಜಗತ್ತಿನ ಅತೀದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾಗಿದೆ. 2021 ಅ.2ರ ಬಳಿಕ 5ನೇ ಬಾರಿಗೆ ಇದನ್ನು ಹಾರಿಸಲಾಗಿದೆ. ಈ ಹಿಂದೆ ಎಲ್ಲಿ ಅಳವಡಿಸಲಾಗಿತ್ತು?
2021 ಅ.8: ಹಿಂಡನ್ ವಾಯುನೆಲೆಯಲ್ಲಿ
2021 ಅ.21: ಹೊಸದಿಲ್ಲಿಯ ಕೆಂಪುಕೋಟೆಯಲ್ಲಿ
2021 ಡಿ.4: ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ ಬಳಿ