Advertisement

ಕಾಕಡೆ ಮಹಿಳಾ ವಿವಿ ಪ್ರಭಾರ ಕುಲಪತಿ

07:53 AM Jun 20, 2020 | Suhan S |

ವಿಜಯಪುರ: ಪ್ರೊ| ಸಬಿಹಾ ಭೂಮಿಗೌಡ ಅವರ ನಿವೃತ್ತಿಯಿಂದ ಶುಕ್ರವಾರ ತೆರವಾಗಿದ್ದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪ್ರಭಾರ ಕುಲಪತಿಯಾಗಿ ಡಾ| ಓಂಕಾರ ಕಾಕಡೆ ಅಧಿಕಾರ ಸ್ವೀಕರಿಸಿದರು.

Advertisement

ಸತತ ನಾಲ್ಕು ವರ್ಷಗಳ ಸೇವೆ ನಂತರ ಜೂ. 19ರಂದು ಸಬಿಹಾ ನಿವೃತ್ತಿಯಾದರು. ಸಬಿಹಾ ಅವರಿಂದ ತೆರವಾದ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಕುಲಾಧಿಪತಿಗಳಾದ ರಾಜ್ಯಪಾಲ ವಜುಬಾಯಿ ವಾಲಾ ಅವರು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ-2000ನ ಸೆಕ್ಷನ್‌ 16 (2)ರ ಅನ್ವಯ ಪ್ರದತ್ತವಾದ ಅಧಿಕಾರ ಬಳಸಿ ನೂತನ ಹಂಗಾಮಿ ಕುಲಪತಿ ನೇಮಕ ಮಾಡಿದ್ದಾರೆ.

ಶುಕ್ರವಾರ ಜರುಗಿದ ಸರಳ ಸಮಾರಂಭದಲ್ಲಿ ಸನ್ಮಾನಗೊಂಡ ನಿರ್ಗಮಿತ ಕುಲಪತಿ ಡಾ| ಸಬಿಹಾ ಭೂಮಿಗೌಡ ಅವರು ನೂತನ ಪ್ರಭಾರ ಕುಲಪತಿ ಡಾ| ಓಂಕಾರ ಕಾಕಡೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನಿವೃತ್ತರಾದ ಸಬಿಹಾ ಅವರು ತಮ್ಮ ಮಾತೃ ಸಂಸ್ಥೆ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠಕ್ಕೆ ಮರಳುತ್ತಿದ್ದಾರೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಸಮಾಜ ವಿಜ್ಞಾನ ನಿಕಾಯದ ಡೀನ್‌ ಓಂಕಾರ ಕಾಕಡೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇವರ ಅಧಿಕಾರ ಅವಧಿ 20-6-2020ರಿಂದ 13-12-2020ರವರೆಗೆ ಅಥವಾ ನೂತನ ಕುಲಪತಿಗಳ ನೇಮಕ ಇದರಲ್ಲಿ ಯಾವುದು ಮೊದಲೋ ಅಲ್ಲಿವರೆಗೆ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next