Advertisement

ವನಿತೆಯರ ಮುಂದೆ ಹೊಸ ಸವಾಲು

07:30 AM Mar 22, 2018 | Team Udayavani |

ಮುಂಬಯಿ: ಆಸ್ಟ್ರೇಲಿಯ ಎದುರಿನ ಏಕದಿನ ಸರಣಿಯಲ್ಲಿ ವೈಟ್‌ವಾಶ್‌ ಅನುಭವಿಸಿದ ಸಂಕಟದಲ್ಲಿರುವ ಭಾರತದ ವನಿತಾ ಕ್ರಿಕೆಟ್‌ ತಂಡ, ಈ ಆಘಾತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಟಿ20 ತ್ರಿಕೋನ ಸರಣಿಗೆ ಅಣಿಯಾಗಬೇಕಿದೆ. ಆಸ್ಟ್ರೇಲಿಯ, ಇಂಗ್ಲೆಂಡ್‌ ತಂಡಗಳನ್ನೊಳಗೊಂಡ ಈ ಚುಟುಕು ಸರಣಿ ಗುರುವಾರದಿಂದ ಮುಂಬಯಿಯಲ್ಲಿ ಆರಂಭವಾಗಲಿದ್ದು, ಪಂದ್ಯಗಳೆಲ್ಲ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿವೆ.

Advertisement

ಕೂಟದ ಮೊದಲ ಪಂದ್ಯದಲ್ಲೇ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತ ತಂಡಕ್ಕೆ ಬಲಿಷ್ಠ ಆಸ್ಟ್ರೇಲಿಯ ಎದುರಾಗಲಿದೆ. ಏಕದಿನ ಸರಣಿ ಯಲ್ಲಿ ಅನುಭವಿಸಿದ 3-0 ಸೋಲು ಭಾರತದ ಬೆನ್ನಿಗಿದೆ. ಇದು ಆತಿಥೇಯರ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆ ಇಲ್ಲದಿಲ್ಲ. ಆದರೆ ಇದಕ್ಕೂ ಹಿಂದಿನ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ಜಯಿಸಿದ ಹಿರಿಮೆ ಭಾರತದ ವನಿತೆಯರ ಪಾಲಿಗಿದೆ. 

ಏಕದಿನ ಸರಣಿಯಲ್ಲಿ ಸತತ 2 ಅರ್ಧ ಶತಕ ಗಳೊಂದಿಗೆ ಮಿಂಚಿದ ಸ್ಮತಿ ಮಂಧನಾ ಇದೇ ಫಾರ್ಮನ್ನು ಟಿ20ಯಲ್ಲೂ ಮುಂದುವರಿಸ ಬೇಕಾದುದು ಅನಿವಾರ್ಯ. ಅನುಭವಿಗಳಾದ ಮಿಥಾಲಿ ರಾಜ್‌, ಹರ್ಮನ್‌ಪ್ರೀತ್‌ ಕೌರ್‌, ವೇದಾ ಕೃಷ್ಣಮೂರ್ತಿ, ಸ್ಥಳೀಯ ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌, ಆಲ್‌ರೌಂಡರ್‌ ಪೂಜಾ ವಸ್ತ್ರಾಕರ್‌ ಅವರೆಲ್ಲ ಹೆಚ್ಚು ಜವಾಬ್ದಾರಿಯುತವಾಗಿ ಬ್ಯಾಟಿಂಗ್‌ ನಡೆಸಿ ತಂಡವನ್ನು ಹೋರಾಟಕ್ಕೆ ಅಣಿಗೊಳಿಸಬೇಕಿದೆ.

ಬೌಲಿಂಗ್‌ನಲ್ಲಿ ಹಿರಿಯ ವೇಗಿ ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ, ಸ್ಪಿನ್ನರ್‌ಗಳಾದ ದೀಪ್ತಿ ಶರ್ಮ, ಪೂನಂ ಯಾದವ್‌ ಶ್ರೇಷ್ಠ ಮಟ್ಟದ ಪ್ರದರ್ಶನದೊಂದಿಗೆ ಕಾಂಗರೂಗಳನ್ನು ಹಿಡಿದು ನಿಲ್ಲಿಸಬೇಕಾದುದು ಮುಖ್ಯ. ಆಸ್ಟ್ರೇಲಿಯ ಗೆಲುವಿನ ಲಯವನ್ನು ಟಿ- ಟ್ವೆಂಟಿಗೂ ವಿಸ್ತರಿಸುವ ಉಮೇದಿನಲ್ಲಿದೆ. ಬಲಿಷ್ಠ ಇಂಗ್ಲೆಂಡ್‌ ತಂಡ ಕಣದಲ್ಲಿ ಇರು ವುದರಿಂದ ಕಾಂಗರೂ ಆಟ ಎಷ್ಟರ ಮಟ್ಟಿಗೆ ನಡೆದೀತೆಂಬುದು ಕುತೂಹಲದ ಸಂಗತಿ.

ತಂಡಗಳು
ಭಾರತ: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮತಿ ಮಂಧನಾ, ಮಿಥಾಲಿ ರಾಜ್‌, ವೇದಾ ಕೃಷ್ಣಮೂರ್ತಿ, ಜೆಮಿಮಾ ರೋಡ್ರಿಗಸ್‌, ಅನುಜಾ ಪಾಟೀಲ್‌, ದೀಪ್ತಿ ಶರ್ಮ, ತನಿಯಾ ಭಾಟಿಯ (ವಿ.ಕೀ.), ಪೂನಂ ಯಾದವ್‌, ರಾಜೇಶ್ವರಿ, ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್‌, ರುಮೇಲಿ ಧರ್‌, ಮೋನಾ ಮೆಶ್ರಮ್‌.

Advertisement

ಆಸ್ಟ್ರೇಲಿಯ: ಮೆಗ್‌ ಲ್ಯಾನಿಂಗ್‌ (ನಾಯಕಿ), ರಶೆಲ್‌ ಹೇನ್ಸ್‌, ನಿಕೋಲಾ ಕ್ಯಾರಿ, ಆ್ಯಶ್ಲಿ ಗಾಡ್ನìರ್‌, ಅಲಿಸ್ಸಾ ಹೀಲಿ (ವಿ.ಕೀ.), ಜೆಸ್‌ ಜೊನಾಸೆನ್‌, ಡೆಲಿಸ್ಸಾ ಕಿಮ್ಮಿನ್ಸ್‌, ಸೋಫಿ ಮೊಲಿನಾಕ್ಸ್‌, ಬೆತ್‌ ಮೂನಿ, ಎಲಿಸ್‌ ಪೆರ್ರಿ, ಮೆಗಾನ್‌ ಶಟ್‌, ನವೋಮಿ ಸ್ಟಾಲೆನ್‌ಬರ್ಗ್‌, ಎಲಿಸ್‌ ವಿಲ್ಲಾನಿ, ಅಮಂಡಾ ಜೇಡ್‌ ವೆಲ್ಲಿಂಗ್ಟನ್‌.

Advertisement

Udayavani is now on Telegram. Click here to join our channel and stay updated with the latest news.

Next