ನವದೆಹಲಿ: ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ಆಯೋಜಿಸಲಾದ ಆಟೋ ಎಕ್ಸ್‌ಪೋಗೆ ಚಾಲನೆ ಸಿಕ್ಕಿದೆ. ಅದರಲ್ಲಿ ಹಲವು ಹೊಸ ಮಾದರಿಯ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಬೆಲೆ 6 ಲಕ್ಷ ರೂ. (ಎಕ್ಸ್ ಶೋ ರೂಂ).
ಮಾರುತಿ ಸುಜುಕಿ: ದೇಶದ ಪ್ರಮುಖ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ಹೊಸ ಮಾದರಿಯ ಕಾರು ಕಾನ್ಸೆಪ್ಟ್ ಎಸ್ ಅನ್ನು ಬಿಡುಗಡೆ ಮಾಡಿದೆ
ಮಿನಿ ಕಂಟ್ರೀಮನ್: ಭಾರತೀಯ ರಸ್ತೆಗಳಿಗೆಂದೇ ಸಿದ್ಧಗೊಳಿಸಲಾದ 2ಲೀ. ಪೆಟ್ರೋಲ್, 1ಲೀ. ಡೀಸೆಲ್ ಎಂಜಿನ್ ಕಾರುಗಳು ಅನಾವರಣಗೊಂಡಿವೆ. ಎಕ್ಸ್ ಶೋ ರೂಂ ಬೆಲೆ: 37 ಲಕ್ಷ ರೂ.
ರೆಕ್ಸಟಾನ್: ಮಹೀಂದ್ರಾ ಕಂಪನಿಯ ಲಕ್ಸುರಿ ಎಸ್‌ಯುವಿ. ಆರ್‌ಎಕ್ಸ್ 6 ಮತ್ತು 7 ವೇರಿಯಂಟ್ ಲಭ್ಯ. ಎಕ್ಸ್ ಶೋ ರೂಂ ಬೆಲೆ: 24 ಲಕ್ಷ ರೂ.
ಯಾರಿಸ್: ಟೊಯೋಟಾದ ಸೆಡಾನ್ ಸೆಗೆ¾ಂಟ್‌ನ ಲಕ್ಸುರಿ ಕಾರು. ಸಿವಿಟಿ ಆಟೋಮ್ಯಾಟಿಕ್ ಯುನಿಟ್ ಹೊಂದಿದೆ. ಎಕ್ಸ್ ಶೋ ರೂಂ ಬೆಲೆ: 5.5-9.5 ಲಕ್ಷ ರೂ.
ಸ್ಪರ್ಧೆ ಚುರುಕುಗೊಳಿಸಿದ ಟಾಟಾ: ಟಾಟಾ ಮೋಟಾರ್ 45ಎಕ್ಸ್ ಹಾಗೂ ಎಚ್5ಎಕ್ಸ್ ಹೆಸರಿನ ಹ್ಯಾಚ್‌ಬ್ಯಾಕ್ ಹಾಗೂ ಎಸ್‌ಯುವಿ ಕಾರನ್ನು ಅನಾವರಣಗೊಳಿಸಿದೆ. ಇದೇ ವೇಳೆ ಟಿಯಾಗೋ ಹಾಗೂ ಟಿಗಾರ್ ಕಾರುಗಳ ನೂತನ ಜೆಪಿ ವೇರಿಯಂಟ್‌ಗಳನ್ನೂ ಪರಿಚಯಿಸಿದೆ.