Advertisement

ಹೊಸ ಕಾರು, ಹೊಸ ವರ್ಷದ ಕುತೂಹಲ

07:36 AM Jan 04, 2019 | |

ಮಾರುಕಟ್ಟೆಯಲ್ಲೀಗ ಕಾರುಗಳದ್ದೇ ಕಾರುಬಾರು. 2018 ಅನ್ನು ಮುಗಿಸಿ 2019ರ ಲೆಕ್ಕಚಾರ ಕೈಗೆತ್ತಿಕೊಂಡಿದ್ದೇವೆ. ಕಳೆದ ವರ್ಷ ಟಾಪ್‌ 5ರಲ್ಲಿದ ಕಾರುಗಳ ಈ ವರ್ಷದ ನಿರೀಕ್ಷೆಗಳು ಏನು, ವರ್ಷಾರಂಭದಲ್ಲಿ ಮಾರುಕಟ್ಟೆಗೆ ಬರಲಿರುವ ಕಾರುಗಳು ಯಾವ ರೀತಿಯಲ್ಲಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಹಲವು ಕಂಪೆನಿಗಳ ಹೊಸ ಕಾರುಗಳು ಮಾರುಕಟ್ಟೆಗೆ ಬರಲಿದ್ದು ಯಾವುದು ಯಾವುದಕ್ಕೆ ಪೈಪೋಟಿ ಕೊಡಬಹುದು ಎಂಬುದನ್ನು ಕಾದು ನೋಡಬೇಕು.

Advertisement

ಹೊಸ ವರ್ಷ ಆರಂಭವಾಗಿದ್ದು, ಈ ಋತುವಿನಲ್ಲಿ ಯಾವೆಲ್ಲ ಕಾರುಗಳು ಬಿಡುಗಡೆಯಾಗಲಿವೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅದರಲ್ಲೂ ಯಾವ ಕಂಪೆನಿಯ ಕಾರುಗಳು ಕೈಗೆಟಕುವ ದರದಲ್ಲಿ ದೊರಕಲಿ ವೆ, ಯಾವ ಕಾರುಗಳು ಹೊಸ ವೈಶಿಷ್ಟ್ಯದೊಂದಿಗೆ ಬರಲಿವೆ ಅನ್ನುವಂತಹ ಕುತೂಹಲ ಆಟೋಮೊಬೈಲ್‌ ಕ್ಷೇತ್ರದಲ್ಲಿದೆ.

ಹೊಸ ವರ್ಷದ ಆರಂಭದಲ್ಲೇ ಮಾರುತಿ ತನ್ನ ವ್ಯಾಗನಾರ್‌ ಕಾರನ್ನು ಬಿಡುಗಡೆ ಮಾಡಲಿದೆ. ಸುಮಾರು 5.5 ಲಕ್ಷ ರೂ. ಹೊಸ ಮಾದರಿಯ ವೈಶಿಷ್ಟ್ಯದೊಂದಿಗೆ ಮಾರುಕಟ್ಟೆಗೆ ಬರಲಿರುವ ಈ ಕಾರಿನಲ್ಲಿ ಹೊಸ ವಿನ್ಯಾಸದಿಂದ ಕೂಡಿದ ಹೆಡ್‌ಲ್ಯಾಂಪ್‌ ಕ್ಲಸ್ಟರ್‌, ಏರ್‌ ಇಂಟೆಕ್ಸ್‌, ಮರು ವಿನ್ಯಾಸದ ಬಂಪರ್‌, ಫಾಗ್‌ ಲ್ಯಾಂಪ್‌ ಹೊಂದಿದೆ.

ನಿಸಾನ್‌ ಸಂಸ್ಥೆಯು ಈ ಬಾರಿ ಕಿಕ್ಸ್‌ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಲು ತಯಾರಾಗಿದ್ದು, ಅಂದಾಜಿನ ಪ್ರಕಾರ ಮಾರ್ಚ್‌ ಅಥವಾ ಎಪ್ರಿಲ್‌ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿದೆ. ಎಕ್ಸ್‌ಶೋರೂಂ ಪ್ರಕಾರ ಈ ಕಾರಿಗೆ ಸುಮಾರು 11ರಿಂದ 15 ಲಕ್ಷ ರೂ. ಕಿಕ್ಸ್‌ ಕಾರನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತಯಾರು ಮಾಡಲಾಗಿದ್ದು, ಪೆಟ್ರೋಲ್‌ ಮತ್ತು ಡೀಸೆ ಲ್‌ ಎಂಜಿನ್‌ ಆಯ್ಕೆ ಇದ ರಲ್ಲಿದೆ. ಅಷ್ಟೇ ಅಲ್ಲದೆ ಈ ಕಾರು 5 ಸ್ಪೀಡ್‌ ಮ್ಯಾನುವಲ್‌ ಪೆಟ್ರೋಲ್‌ ಮಾದರಿ ಮತ್ತು 6 ಸ್ಪೀಡ್‌ ಮ್ಯಾನುವೆಲ್‌ ಡೀಸೆಲ್‌ ಮಾದರಿಯ ಗೇರ್‌ಬಾಕ್ಸ್‌ ಹೊಂದಿದೆ.

ಹೋಂಡಾ ಸಂಸ್ಥೆಯು ಇದೇ ವರ್ಷ ಸಿವಿಕ್‌ ಎಂಬ ಕಾರನ್ನು ಬಿಡುಗಡೆ ಮಾಡಲಿದೆ. ಇದು ಸ್ಪೋರ್ಟ್ಸ್ ಲುಕ್‌ ಹೊಂದಿದ್ದು, ಸುಮಾರು 20 ಲಕ್ಷ ರೂ. ಬೆಲೆ ಇರಲಿದೆ ಎಂದು ಅಂದಾಜಿಸಲಾಗಿದೆ. ಈ ಕಾರಿನಲ್ಲಿ 2 ಲೀಟರ್‌ ಪೆಟ್ರೋಲ್‌ ಎಂಜಿನ್‌, 1.6 ಡೀಸೆಲ್‌ ಎಂಜಿನ್‌, 6 ಸ್ಪೀಡ್‌ ಮ್ಯಾನುವಲ್‌ ಗೇರ್‌ ವೈಶಿಷ್ಟ್ಯವನ್ನು ಹೊಂದಿದೆ. ಅದೇ ರೀತಿ ಎಲ್‌ ಇಡಿ ಟೈಲ್‌ ಲೈಟ್‌, ಡ್ಯುಯಲ್‌ ಟೋನ್‌ ಇಂಟೀರಿಯರ್‌, ಟಚ್‌ ಸ್ಕ್ರೀನ್‌ ಇನ್ಫೋಟೈನ್‌ ಮೆಂಟ್‌ ಸೌಲಭ್ಯ ಹೊಂದಿದ್ದು, ಉಳಿದ ಕಂಪೆನಿಯ ಕಾರುಗಳಿಗೆ ತೀವ್ರ ಪೈಪೋಟಿ ನೀಡಲು ತಯಾರಾಗಿದೆ.

Advertisement

ಟಾಟಾ ಸಂಸ್ಥೆಯು ಟಾಟಾ 45 ಎಕ್ಸ್‌ ಕಾರನ್ನು ಜನವರಿ- ಫೆಬ್ರವರಿಯಲ್ಲಿ ಬಿಡುಗಡೆಗೊಳಿ ಸಲಿದೆ. 1.5 ಲೀಟರ್‌ ಡೀಸೆಲ್‌ ಮತ್ತು 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ನಲ್ಲಿ ಇದು ಲಭ್ಯ ವಾಗಲಿದೆ. ಅಂದಾಜಿನ ಪ್ರಕಾರ ಸುಮಾರು 6ರಿಂದ 7 ಲಕ್ಷ ರೂ. ಗಳಿಗೆ ಲಭ್ಯವಾಗಲಿದೆ. ಇನ್ನು ಐಷಾರಾಮಿ ಕಾರು ಎಂದೇ ಪ್ರಖ್ಯಾತಿ ಹೊಂದಿದ ಮರ್ಸಿಡಿಸ್‌ ಬೆಂಝ್ ಎ ಕ್ಲಾಸ್‌ ಕಾರು ಕೂಡ ಬಿಡುಗಡೆಯಾಗಲಿದೆ. ಇದು ಹಿಂದಿನ ಕಾರಿಗಿಂತ ಹೆಚ್ಚಿನ ವೈಶಿಷ್ಟ್ಯ ಪಡೆಯಲಿದ್ದು, 300 ಎಂಎಂ ಲಾಂಗ್‌ ವೀಲ್ಹ್ ಬೇಸ್‌, 10.3 ಇಂಚ್‌ ಇನ್ಫೋಟೈನ್‌ ಮೆಂಟ್‌ ಸಿಸ್ಟಮ್‌ ಒಳಗೊಂಡಿದೆ. ಅಂದಾಜಿನ ಪ್ರಕಾರ ಸುಮಾರು 30 ಲಕ್ಷ ರೂ. ಬೆಲೆ.

ವರ್ಷಾಂತ್ಯಕ್ಕೆ ಮಾರುತಿಯದ್ದೇ ಪಾರುಪತ್ಯ
‘ಸೊಸೈಟಿ ಆಫ್‌ ಇಂಡಿಯನ್‌ ಆಟೋ ಮೊಬೈಲ್‌ ಮ್ಯಾನುಫ್ಯಾಕ್ಚರ್ ಸಂಸ್ಥೆಯು ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ 2018- 19ನೇ ಸಾಲಿನಲ್ಲಿ ಮಾರುತಿ ಸುಜುಕಿ ಡಿಸೈರ್‌ ಕಾರು ಹೆಚ್ಚಾಗಿ ಖರೀದಿಯಾಗಿದೆ. ಇದು ತನ್ನದೇ ಸಂಸ್ಥೆಯ ಸಣ್ಣ ಕಾರಾದ ಆಲ್ಟೋವನ್ನು ಹಿಂದಿಕ್ಕಿದೆ. 2018ನೇ ಎಪ್ರಿಲ್‌-ನವೆಂಬರ್‌ ವರೆಗಿನ ಅಂಕಿ ಅಂಶದ ಪ್ರಕಾರ ದೇಶದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಕಳೆದ ವರ್ಷ 1,82,130 ಡಿಸೈರ್‌ ಕಾರುಗಳನ್ನು ಮಾರಾಟ ಮಾಡಿದೆ.

ಹೂಂಡೈ ಕಂಪೆನಿಯ ಎಲೈಟ್‌ ಐ-20 ಮಾದರಿ ಕಾರು 2018 ಎಪ್ರಿಲ್‌- ನವೆಂಬರ್‌ ಅವಧಿಯಲ್ಲಿ 92,817 ಕಾರು ಮಾರಾಟವಾಗಿದೆ. ಹೂಂಡೈ ಗ್ರ್ಯಾಂಡ್‌ ಐ10 ಕಾರು 88,016 ಕಾರು ಮಾರಾಟವಾಗಿದೆ. ಹೂಂಡೈ ಕ್ರೇಟ 44,701 ಕಾರು ಮಾರಾಟವಾಗಿದೆ.

ಜಿಲ್ಲೆಯಲ್ಲಿ ಮಾರಾಟವಾದ ಟಾಪ್‌-3 ಕಾರುಗಳು
ದ.ಕ. ಜಿಲ್ಲೆಯಲ್ಲಿ ಮಾರುತಿ ಕಂಪೆನಿಯ ಸ್ವಿಫ್ಟ್ ಕಾರು ಅತೀ ಹೆಚ್ಚು ಮಾರಾಟವಾಗಿದೆ. ಅದೇ ರೀತಿ ಎರಡನೇ ಸ್ಥಾನದಲ್ಲಿ ಮಾರುತಿ ಆಮ್ನಿ ಮತ್ತು ಮೂರನೇ ಸ್ಥಾನದಲ್ಲಿ ಸೆಲೇರಿಯೋ ಕಾರು ಇದೆ. ಅದರಂತೆಯೇ ರೆನಾಲ್ಟ್ ಕಂಪೆನಿಯ ಕ್ವಿಡ್‌ ಕಾರು ಜಿಲ್ಲೆಯಲ್ಲಿ ಅತೀ ಹೆಚ್ಚು ಮಾರಾಟವಾಗಿದೆ. ಎರಡನೇ ಸ್ಥಾನದಲ್ಲಿ ಡಸ್ಟರ್‌, ಮೂರನೇ ಸ್ಥಾನದಲ್ಲಿ ಕ್ಯಾಪ್ಚರ್‌ ಕಾರು ಮಾರಾಟವಾಗಿದೆ. ಹೂಂಡೈ ಸಂಸ್ಥೆಯ ಕ್ರೇಟಾ ಕಾರು ಮೊದಲನೇ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಗ್ರಾಂಡ್‌ ಐ-20 ಮತ್ತು ಮೂರನೇ ಸ್ಥಾನದಲ್ಲಿ ಗ್ರಾಂಡ್‌ ಐ-10 ಕಾರು ಇದೆ.

ನಿರೀಕ್ಷೆ ಹೆಚ್ಚು 
ಹೊಸ ವರ್ಷದಲ್ಲಿ ಆಟೋಮೊಬೈಲ್‌ ಕ್ಷೇತ್ರದಲ್ಲಿ ನಿರೀಕ್ಷೆಗಳು ಹೆಚ್ಚಿವೆ. ಅದರಲ್ಲಿಯೂ ಕಡಿಮೆ ಬೆಲೆಯ ಕಾರುಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ.
– ವಿವೇಕ್‌, ಸುರತ್ಕಲ್‌

ಬೆಲೆ ಕೆಡಿಮೆಯಾಗಬಹುದು
ಇನ್ನೇನು ಕೆಲ ತಿಂಗಳಿನಲ್ಲಿ ಚುನಾವಣೆ ನಡೆಯಲಿದ್ದು, ಈ ವೇಳೆ ಕಾರುಗಳ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ. ಬಳಿಕ ಹೊಸ ಕಾರು ಕೊಂಡುಕೊಳ್ಳಲಿದ್ದೇನೆ.
– ಚೇತನ್‌, ಆಕಾಶಭವನ

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next