Advertisement
ಅಭ್ಯರ್ಥಿಗಳಿಗಾಗಿಯೇ ಹುಡುಕಾಟ ನಡೆಸಬೇಕಿದ್ದ ಕ್ಷೇತ್ರದಲ್ಲೀಗ ಪ್ರಮುಖ ಎರಡು ಪಕ್ಷಗಳಲ್ಲಿ ಆಕಾಂಕ್ಷಿಗಳ ದಂಡೇ ತುಂಬಿದೆ. ಹೀಗಾಗಿ ಹೈಕಮಾಂಡ್‌ಗೆ ಅಭ್ಯರ್ಥಿ ಹೆಸರು ಅಂತಿಮ ಮಾಡುವುದೇ ದೊಡ್ಡ ಸವಾಲು.
Related Articles
Advertisement
ಒಂದು ವೇಳೆ ಅಂಗಾರ ಅವರನ್ನು ಬದಲಾಯಿಸಿ ಹೊಸ ಮುಖಕ್ಕೆ ಅವಕಾಶ ನೀಡುವುದಿದ್ದರೆ ಮೊದಲ ಹೆಸರು ಕೇಳಿ ಬರುತ್ತಿರುವುದು 31ರ ಹರೆಯದ ಪದವೀಧರ, ಬ್ಯಾಂಕ್ ಉದ್ಯೋಗಿ ಶಿವಪ್ರಸಾದ್ ಪೆರುವಾಜೆ. ಸಂಘದ ಕಟ್ಟಾಳು ಅನ್ನುವುದು ಇವರಿಗೆ ಇರುವ ಪ್ಲಸ್ ಪಾಯಿಂಟ್. ಕಳೆದ ಎರಡು ಅವಧಿಯಿಂದಲೂ ಪ್ರಬಲವಾಗಿ ಕೇಳಿಬರುತ್ತಿರುವ ಇನ್ನೊಂದು ಹೆಸರು ಜಿ. ಪಂ. ಮಾಜಿ ಸದಸ್ಯೆ ಭಾಗೀರಥಿ. ಇವೆರಡು ಟಿಕೆಟ್ ಅಂಗಳದಲ್ಲಿರುವ ಪ್ರಮುಖ ಹೆಸರುಗಳು. ಉಳಿದಂತೆ ಉಪನ್ಯಾಸಕ ಪದ್ಮಕುಮಾರ್ ಗುಂಡ್ಯಡ್ಕ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಶಂಕರ ಪೆರಾಜೆ, ಶೀನಪ್ಪ ಬಯಂಬು, ಸಂಜಯಕುಮಾರ್, ಲತೀಶ್ ಗುಂಡ್ಯ, ಜಗನ್ನಾಥ, ಪುತ್ತೂರಿನವರಾದ ಜಿ. ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಹಿತ ಹತ್ತಾರು ಹೆಸರುಗಳು ಚಾಲ್ತಿಯಲ್ಲಿವೆ. ಕೆಲವು ಆಕಾಂಕ್ಷಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಗ್ರೂಪ್ ರಚಿಸಿ ಆಕಾಂಕ್ಷೆ ತೋರ್ಪಡಿಸುತ್ತಿದ್ದಾರೆ. ಈ ಮಧ್ಯೆ ಸುಳ್ಯ ಕ್ಷೇತ್ರಕ್ಕೆ ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದು ಎಂದು ಆಗ್ರಹಿಸಿ ಸುಳ್ಯದ ದಲಿತ ಮುಖಂಡರು ಪತ್ರಿಕಾಗೋಷ್ಠಿ ನಡೆಸಿರುವುದು ಕೂಡ ಗಮನಾರ್ಹ ಸಂಗತಿ.
ಕಾಂಗ್ರೆಸ್ ನಲ್ಲಿ ಹೊಸ ಮುಖ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸತತ 4 ಬಾರಿ ಸೋತಿರುವ ಡಾ| ರಘು ಅವರು ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದಾರೆ. ಅವರ ಪುತ್ರರಾದ ಪ್ರಹ್ಲಾದ್, ಅಭಿಷೇಕ್ ಅವರು ಟಿಕೆಟ್ ಆಕಾಂಕ್ಷೆ ವ್ಯಕ್ತಪಡಿಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಉಳಿದಂತೆ ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ನಂದ ಕುಮಾರ್, ಜಿ. ಕೃಷ್ಣಪ್ಪ. ನಂದಕುಮಾರ್ ಕಳೆದ ಕೆಲವು ವರ್ಷಗಳಿಂದ ಕ್ಷೇತ್ರಾದ್ಯಂತ ಓಡಾಟ ನಡೆಸುತ್ತಿದ್ದಾರೆ. ಜಿ. ಕೃಷ್ಣಪ್ಪ ಕೂಡ ಸಭೆ, ಸಮಾವೇಶಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಉಳಿದಂತೆ ಮಾಜಿ ಕಾರ್ಪೊರೇಟರ್ ಅಪ್ಪಿ ಮೊದಲಾದವರ ಹೆಸರು ಕೇಳಿ ಬಂದಿದೆ. ಕಾಂಗ್ರೆಸ್‌ನಿಂದ ಸುಳ್ಯದ ಕೊನೆಯ ಶಾಸಕರಾಗಿದ್ದ ಮಾಜಿ ಶಾಸಕ ಕುಶಲ ಅವರ ಪುತ್ರಿ ಈ ಬಾರಿ ಆಮ್ ಆದ್ಮಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಈ ಮಧ್ಯೆ ಕುಶಲ ಅವರ ನಡೆ ಏನಿರಬಹುದು ಅನ್ನುವ ಕುತೂಹಲ ಇದೆ. – ಕಿರಣ್ ಪ್ರಸಾದ್ ಕುಂಡಡ್ಕ