Advertisement
ಬೆಳ್ತಂಗಡಿ: ಗ್ರಾಮದ ಮಂದಿ ಅಗತ್ಯ ದಾಖಲೆ ಪತ್ರಗಳಿಗಾಗಿ, ಸರಕಾರಿ ಯೋಜನೆಗಳ ಮಾಹಿತಿ ಪಡೆಯಲು ಗ್ರಾ.ಪಂ. ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ ವಾತಾವರಣ ಅಷ್ಟೇ ಉತ್ತಮವಾಗಿರಬೇಕು ಎಂಬ ದೃಷ್ಟಿಯಿಂದ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾ.ಪಂ.ಗೆ ನೂತನ ಕಟ್ಟಡ ನಿರ್ಮಿಸಲು ಆಡಳಿತ ಮುಂದಾಗಿದೆ.
Related Articles
Advertisement
ತಾಲೂಕಿನ ಬಹುತೇಕ ಗ್ರಾ.ಪಂ.ಗಳು ನವೀನ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ. ಕೆಲವು ಗ್ರಾ.ಪಂ. ಕಟ್ಟಡಗಳು ಹಳೆಯ ದಾಗಿವೆ. ಇದೀಗ ಕಡಿರುದ್ಯಾವರ ಗ್ರಾ.ಪಂ.ನ ಹೊಸ ಕಟ್ಟಡ ವಿಭಿನ್ನವಾಗಿ ಮೂಡಿಬರುವ ಯೋಜನೆಯಲ್ಲಿದೆ. ಇದು 2,500 ಚದರಡಿ ವಿಸ್ತೀರ್ಣ ಹೊಂದಿರಲಿದ್ದು, ಮೀಟಿಂಗ್ ಹಾಲ್, ಪಿಡಿಒ ಕಚೇರಿ, ಅಧ್ಯಕ್ಷರು, ಉಪಾಧ್ಯಕರು, ಕಾರ್ಯದರ್ಶಿ, ಸಿಬಂದಿಗೆ ಪ್ರತ್ಯೇಕ ಕೊಠಡಿ ಇರಲಿದೆ. ಕಡಿರುದ್ಯಾವರ ಗ್ರಾ.ಪಂ. 3 ವಾರ್ಡ್ ಒಳಗೊಂಡಿದ್ದು, 9 ಸದಸ್ಯರಿದ್ದಾರೆ. 4,334 ಜನಸಂಖ್ಯೆ ಇದೆ. ಕೈ ತೋಟ ರಚನೆ, ಪಾರ್ಕಿಂಗ್ ಅವಕಾಶ ಇರಲಿದೆ.
ಇತರ ಯೋಜನೆಗಳು :
ಸ್ವತ್ಛ ಭಾರತ ಅಭಿಯಾನದಲ್ಲಿ 2020- 21ರಲ್ಲಿ ಗ್ರಾ.ಪಂ. ಒಗ್ಗೂಡಿಸುವಿಕೆಯಲ್ಲಿ ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ ಸೇರಿ ಕಡಿರುದ್ಯಾವರದಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಅನುಮೋದನೆ ಆಗಿ ಜಿ.ಪಂ.ಗೆ ಕಳುಹಿಸಲಾಗಿದೆ. ರುದ್ರಭೂಮಿ, ದಫನ ಭೂಮಿಗೆ ಆಂಜನೇಯ ಬೆಟ್ಟದ ಬಳಿ 3 ಎಕರೆ ಗುರುತಿಸಲಾಗಿದೆ.
ಗ್ರಾ.ಪಂ. ಕಟ್ಟಡ ಜನರ ಆಸ್ತಿ. ಹೀಗಾಗಿ ಮಾದರಿ ಗ್ರಾ.ಪಂ.ಕಟ್ಟಡ ರಚನೆಗಾಗಿ ರೂಪುರೇಷೆ ಸಿದ್ಧಪಡಿಸಲಾಗಿದೆ. ಗ್ರಾಮೀಣ ನಿವೇಶನ ಯೋಜನೆಯಡಿ ಸರ್ವೇ ನಂಬರ್ 76/10ನಲ್ಲಿ 2.80 ಎಕರೆ ನಿವೇಶನ ಕಾಯ್ದಿರಿಸಲಾಗಿದ್ದು, ಮರ ತೆರವು ಕಾರ್ಯ ನಡೆಯುತ್ತಿದೆ. -ಜಯಕೀರ್ತಿ, ಪಿಡಿಒ
ವಿಶೇಷ ವರದಿ