Advertisement

ಕೃಷಿ ಕಾಲೇಜಿನಲ್ಲಿ ಶೇ.50 ಮೀಸಲು: ಸಚಿವ

02:35 PM Mar 02, 2022 | Team Udayavani |

ಶಿರಾ: ರಾಜ್ಯದ ರೈತರ ಮಕ್ಕಳಿಗೆ ಬಿಎಸ್‌ಸಿ, ಎಜಿ ವಿದ್ಯಾಭ್ಯಾಸಕ್ಕೆ ಕೃಷಿ ಕಾಲೇಜುಗಳಲ್ಲಿ ಶೇ.40 ರಷ್ಟು ಮೀಸಲಾತಿಯಿಂದ ಶೇ.50ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ. ಇದರಿಂದ ಸಾವಿರಾರು ರೈತರ ಮಕ್ಕಳಿಗೆ ಕೃಷಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿದೆಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು.

Advertisement

ತಾಲೂಕಿನ ಚಿಕ್ಕನಹಳ್ಳಿಯಲ್ಲಿ ಮಂಗಳವಾರ 1.20ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀಉಗ್ರೇಗೌಡ ಸ್ಮಾರಕ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಆದ ತತ್‌ಕ್ಷಣ ಕೃಷಿಕರ ಮಕ್ಕಳಿಗೆ 2,000 ರಿಂದ 11,500ರೂ. ವರೆಗೆ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ಪ್ರೌಢಶಾಲೆಯಲ್ಲಿ ಓದುತ್ತಿರುವ ಕೃಷಿಕರ ಹೆಣ್ಣು ಮಕ್ಕಳಿಗೆ2,000 ರೂ. ಸಹಾಯಧನ ನೀಡುತ್ತಿದ್ದಾರೆ. ಸರ್ಕಾರದಿಂದ ಈ ವರ್ಷ 20,996 ಮಕ್ಕಳಿಗೆ 5.18 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.

ರೈತರು ಸಮಗ್ರ ಕೃಷಿ ಅಳವಡಿಸಿಕೊಳ್ಳಿ: ರೈತರುಸಮಗ್ರ ಕೃಷಿ ನೀತಿ ಅಳವಡಿಸದೆ ಹೋದರೆ ಆದಾಯಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ಮಂಡ್ಯದಲ್ಲಿ ಕಬ್ಬು, ಭತ್ತಬಿಟ್ಟರೆ ಬೇರೆ ಬೆಳೆ ಬೆಳೆಯುವುದಿಲ್ಲ. ಮಂಡ್ಯದಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆಕೋಲಾರದಲ್ಲಿ ಮಳೆಯೇ ಇಲ್ಲ. 1200 ಅಡಿಕೊರೆದರೂ ನೀರು ಸಿಗುವುದಿಲ್ಲ. ಹಾಗಿದ್ದರೂಕೋಲಾರದ ರೈತರು ಸಮೃದ್ಧವಾಗಿದ್ದಾರೆ. ಏಕೆಂದರೆಅಲ್ಲಿ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಎಲ್ಲ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ.

ತರಬೇತಿ ನೀಡುತ್ತಿದ್ದೇವೆ: ರೈತರು ಕೇವಲ ಒಂದೆರಡುಬೆಳೆಗಳ ಮೇಲೆ ಅವಲಂಬಿತರಾಗಬಾರದು. ಹತ್ತಾರುಬೆಳೆ ಬೆಳೆದರೆ ಒಂದು ಬೆಳೆಗೆ ಬೆಲೆ ಕಡಿಮೆಯಾದರೂಮತ್ತೂಂದರಲ್ಲಿ ಲಾಭ ಮಾಡಬಹುದು. ಆದ್ದರಿಂದರೈತರು ಸಮಗ್ರ ಕೃಷಿ ನೀತಿ ಅಳವಡಿಸಿಕೊಳ್ಳಬೇಕು.ಆ ನಿಟ್ಟಿನಲ್ಲಿ ನಾವೂ ಕೂಡ ತರಬೇತಿ ನೀಡುತ್ತಿದ್ದೇವೆ. ಕಳೆದ ವರ್ಷ ಉಚಿತವಾಗಿ ಕಿಟ್‌ಗಳನ್ನುನೀಡಿದ್ದೇವೆ ಎಂದರು.

ಸಿಎಂ ಬಳಿ ಮನವಿ ಮಾಡೋಣ: ಶಿರಾ ತಾಲೂಕಿನಲ್ಲಿಕೃಷಿ ಕಾಲೇಜು ಸ್ಥಾಪನೆ ಮಾಡಲು ನನ್ನದು ಯಾವುದೇಅಭ್ಯಂತರವಿಲ್ಲ. ನಾನು ನಿಮ್ಮ ಪರವಾಗಿದ್ದೇನೆ.ಎಲ್ಲರೂ ಒಟ್ಟಿಗೆ ಹೋಗಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡೋಣ. ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟರೆ ಖಂಡಿತವಾಗಿ ಕೃಷಿ ಕಾಲೇಜು ತರುವ ಪ್ರಯತ್ನ ಮಾಡೋಣ ಎಂದರು.

Advertisement

ಕೃಷಿ ಕಾಲೇಜು ಸ್ಥಾಪಿಸಲು ಒತ್ತಾಯ: ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಮಾತನಾಡಿ, ಶಿರಾ ತಾಲೂಕಿನಲ್ಲಿ ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ಎರಡು ಬಾರಿ ನೀರು ಹರಿಸಲಾಗಿದೆ ಹಾಗೂ25ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗಿದೆ ಎಂದಅವರು, ಚಿಕ್ಕನಹಳ್ಳಿಯಲ್ಲಿ ಕೃಷಿ ಕಾಲೇಜು ಸ್ಥಾಪಿಸಲುಕ್ರಮ ಕೈಗೊಳ್ಳಬೇಕೆಂದು ಕೃಷಿ ಸಚಿವರಿಗೆ ಮನವಿಮಾಡಿದರು. ರಾಜ್ಯ ತೆಂಗು ಮತ್ತು ನಾರುನಿಗಮದ ಅಧ್ಯಕ್ಷ ಬಿ.ಕೆ. ಮಂಜುನಾಥ್‌,ವಿಧಾನಪರಿಷತ್‌ ಸದಸ್ಯ ಚಿದಾನಂದ್‌ ಎಂ. ಗೌಡ ಮಾತನಾಡಿದರು.

ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಎಂ.ಎನ್‌.ರಾಜಸುಲೋಚನ, ತಹಶೀಲ್ದಾರ್‌ ಮಮತಾ, ಗ್ರಾಪಂ ಅಧ್ಯಕ್ಷ ಉಮೇಶ್‌ ಜಿ.ಇ., ಉಪಾಧ್ಯಕ್ಷೆ ಸರೋಜಮ್ಮ, ಸಹಾಯಕ ಕೃಷಿನಿರ್ದೇಶಕರಾದ ಆರ್‌.ರಂಗನಾಥ್‌, ತಾಂತ್ರಿಕ ಕೃಷಿಅಧಿಕಾರಿ ಸತ್ಯನಾರಾಯಣ, ಎಪಿಎಂಸಿ ಉಪಾಧ್ಯಕ್ಷರಾಮರಾಜು, ಕೃಷಿ ಸಂಘದ ನಾದೂರು ಕೆಂಚಪ್ಪ,ಪರಮೇಶಿವಯ್ಯ, ಮುಖಂಡರಾದ ವಿಜಯರಾಜ್‌, ರಂಗಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.

ಚಿಕ್ಕನಹಳ್ಳಿಯಲ್ಲಿ ಶ್ರೀ ಉಗ್ರೇಗೌಡಅವರು ತಾನು ದುಡಿದ ಹಣದಲ್ಲಿ1909 ರಲ್ಲಿ ಶಾಲೆ, ಧರ್ಮಛತ್ರಗಳನ್ನುನಿರ್ಮಾಣ ಮಾಡಿ ಶಿಕ್ಷಣಪ್ರಾರಂಭಿಸಿದ್ದಾರೆ. ಅವರು ಮಾಡಿದ ಸಾಧನೆಯನ್ನು ನಾವು ಇಂದಿಗೂನೆನಪಿಸುತ್ತೇವೆ. ಅವರ ಆಶಯದಂತೆಶಿರಾದಲ್ಲಿ ಕೃಷಿ ಕಾಲೇಜು ಸ್ಥಾಪಿಸಲು ನಾನುಇಚ್ಛೆ ಹೊಂದಿದ್ದೇನೆ. -ಬಿ.ಸಿ.ಪಾಟೀಲ್‌, ಕೃಷಿ ಸಚಿವ

ಕೃಷಿ ಇಲಾಖೆಯ ಹಲವಾರುಕಾರ್ಯಕ್ರಮಗಳು ರೈತರಿಗೆತಲುಪಬೇಕು. ಆ ನಿಟ್ಟಿನಲ್ಲಿಬಿ.ಸಿ.ಪಾಟೀಲ್‌ ಅವರು ಕೃಷಿ ಸಚಿವರಾದನಂತರ ಸಾಕಷ್ಟು ಬದಲಾವಣೆಗಳನ್ನು ಕೃಷಿಇಲಾಖೆಯಲ್ಲಿ ತಂದಿದ್ದಾರೆ. ಎಲ್ಲ ರೈತರಿಗೂಯಂತ್ರೋಪಕರಣಗಳನ್ನು ಶೇ.50 ರಷ್ಟು ಸಹಾಯಧನದಲ್ಲಿ ನೀಡಲಾಗುತ್ತಿದೆ. -ಎಸ್‌.ಆರ್‌.ಗೌಡ, ರಾಜ್ಯ ರೇಷ್ಮೆ ನಿಗಮದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next