ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಆರೋಗ್ಯಸೇವಾ ಪೂರೈಕೆದಾರರಾದ ನಾರಾಯಣ ಹೆಲ್ತ್ ತನ್ನ ಹೊಸ ಲಾಂಛನ ಬಿಡುಗಡೆ ಮಾಡಿದೆ ಮತ್ತು ತನ್ನ ಎಲ್ಲ ಆರೋಗ್ಯಸೇವಾ ಸೌಲಭ್ಯಗಳ ಸಮಗ್ರ ಮರು ಬ್ಯಾಂಡಿಂಗ್ ಪ್ರಕಟಿಸಿದೆ.
ಹೊಸ ಬ್ರಾಂಡ್ ಗುರುತನ್ನು ಅನಾವರಣಗೊಳಿಸಿದ ನಾರಾಯಣ ಹೆಲ್ತ್ ನ ಅಧ್ಯಕ್ಷ ಮತ್ತು ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ. ದೇವಿಪ್ರಸಾದ್ ಶೆಟ್ಟಿ, “ಕಳೆದ ಎರಡು ದಶಕಗಳಿಂದ ನಾವು ಎಲ್ಲರಿಗೂ ಉನ್ನತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಸತತವಾಗಿ ಒದಗಿಸುತ್ತಿದ್ದೇವೆ. ಈ ಅಸಾಧಾರಣ ಪ್ರಯಾಣದಲ್ಲಿ ನಾವು ಆರೋಗ್ಯಸೇವಾ ಪೂರೈಕೆ ಮಾದರಿಗೆ ಹಲವಾರು ಆವಿಷ್ಕಾರಗಳನ್ನು ತಂದಿದ್ದು ನಾವು ಸೇವೆ ಒದಗಿಸುವ ಎಲ್ಲರಿಗೂ ಗುಣಮಟ್ಟದ ಆರೋಗ್ಯಸೇವೆ ಲಭ್ಯವಾಗುವಂತೆ ಮಾಡುತ್ತಿದ್ದೇವೆ. ಇಂದು ನಮ್ಮ ಪ್ರಯಾಣದಲ್ಲಿ ಗಮನಾರ್ಹ ಪ್ರಯಾಣವಾಗಿದ್ದು ಇದರಲ್ಲಿ ನಾವು ನಾರಾಯಣ ಹೆಲ್ತ್ ನ ಎಲ್ಲ ಆಯಾಮಗಳನ್ನೂ ಒಂದು ಹೆಸರು, ಒಂದು ಹೃದಯ ಮತ್ತು ಒಂದು ಧ್ಯೇಯದ ಒಂದು ಗುರುತಿನೊಂದಿಗೆ ತರುತ್ತಿದ್ದೇವೆ” ಎಂದರು.
ನಮ್ಮ ಹೊಸ ಲಾಂಛನವು ಮೂರು ಹೃದಯಗಳನ್ನು ಹೊಂದಿದೆ ಮತ್ತು `ಹೃದಯದೊಂದಿಗೆ ಆರೋಗ್ಯಸೇವೆ”ಯನ್ನು ಸಮೂಹದ ಗುರುತಿನಲ್ಲಿ ಸೇರ್ಪಡೆ ಮಾಡಿದೆ. ಇದು ತುಂಬು ಹೃದಯದಿಂದ ಜನರಿಗೆ ಸೇವೆ ಒದಗಿಸುವ ನಾರಾಯಣ ಹೆಲ್ತ್ ನ ಬದ್ಧತೆಯನ್ನು ಮರು ದೃಢೀಕರಿಸುತ್ತದೆ. ಸಹಾನುಭೂತಿ ಮತ್ತು ಕರುಣೆಯಿಂದ ಆರೋಗ್ಯಸೇವೆ ಒದಗಿಸುತ್ತದೆ. ಈ ಹೊಸ ಬ್ರಾಂಡ್ ಗುರುತು ಹೊಸ ಬಗೆಯ ಅಕ್ಷರಗಳು ಮತ್ತು ಕೆಂಪು ಹಾಗೂ ನೀಲಿಯ ಬಣ್ಣಗಳಿಂದ ಹೊಸ ದಿಕ್ಕಿನತ್ತ ನೋಡುವ ನಾರಾಯಣ ಹೆಲ್ತ್ ನ ಹೃದಯ ಆರೈಕೆಯ ಬದ್ಧತೆಯನ್ನು ಬಿಂಬಿಸುತ್ತದೆ.
“ನಮ್ಮ ವಿಕಾಸವು ಲಾಂಛನಗಳನ್ನು ಬದಲಾಯಿಸುವುದಕ್ಕಿಂತ ಹೆಚ್ಚಿನದಾಗಿದೆ. ನಮ್ಮ ಧ್ಯೇಯವು ಏಕೀಕೃತ ಆರೈಕೆ ನೀಡುವುದಾಗಿದ್ದು ಅದರಲ್ಲಿ ನಮ್ಮ ರೋಗಿಗಳಲ್ಲಿ ರೋಗತಡೆಯಿಂದ ಚಿಕಿತ್ಸೆಯವರೆಗೆ ಅವರ ಆರೋಗ್ಯಸೇವೆಯ ಅಗತ್ಯಗಳಿಗೂ ಪೂರ್ಣ ಜವಾಬ್ದಾರಿ ತಗೆದುಕೊಳ್ಳುತ್ತೇವೆ. ಆರೋಗ್ಯವಿಮಾ ವಲಯಕ್ಕೆ ನಮ್ಮ ಸನ್ನಿಹಿತ ಪ್ರವೇಶ ಮತ್ತು ಆರೋಗ್ಯಸೇವಾ ವಲಯಗಳಲ್ಲಿ ನಮ್ಮ ಹೂಡಿಕೆಯು ರೋಗಿಗಳ ಮನೆಗಳಿಗೆ ಆರೋಗ್ಯಸೇವೆಯನ್ನು ಹತ್ತಿರವಾಗಿಸುತ್ತಿದ್ದು ಈ ಗುರುತು ನಮ್ಮ ಪ್ರಯಾಣದ ಪ್ರಮುಖ ಹಂತದಲ್ಲಿ ಬಂದಿದೆ” ಎಂದು ನಾರಾಯಣ ಹೆಲ್ತ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಗ್ರೂಪ್ ಸಿಇಒ ಡಾ.ಎಮ್ಯಾನ್ಯುಯೆಲ್ ರುಪರ್ಟ್ ಹೇಳಿದರು.
ಬ್ರಾಂಡ್ ಪರಿವರ್ತನೆಯ ಪ್ರಕ್ರಿಯೆಯೊಂದಿಗೆ `ನಾರಾಯಣ’ ಸಾರ್ವತ್ರಿಕ ಹೆಸರಾಗಿರುತ್ತಿದ್ದು ಎಲ್ಲ ಆರೋಗ್ಯಸೇವೆಯ ವಲಯಗಳಲ್ಲಿ ಸ್ಥಿರವಾದ ಸಂದೇಶ ನೀಡುತ್ತದೆ. ಕ್ಲಿನಿಕ್ ಗಳನ್ನು ನಾರಾಯಣ ಕ್ಲಿನಿಕ್ ಎಂದು, ಲ್ಯಾಬ್ ಗಳನ್ನು ನಾರಾಯಣ ಲ್ಯಾಬ್ ಎಂದು ಮತ್ತು ಫಾರ್ಮಸಿಗಳನ್ನು ನಾರಾಯಣ ಫಾರ್ಮಾ ಎಂದು ಕರೆಯಲಾಗುತ್ತದೆ. ದೇಶಾದ್ಯಂತ ಎಲ್ಲ ಆಸ್ಪತ್ರೆಗಳೂ ನಾರಾಯಣ ಹೆಲ್ತ್ ಎಂಬ ಒಂದೇ ಹೆಸರನ್ನು ಹೊಂದುತ್ತವೆ.