Advertisement

ವಿಜಯಪುರ: ರಸ್ತೆ ಬದಿಯ ಮುಳ್ಳುಕಂಟಿಯಲ್ಲಿ ನವಜಾತ ಹೆಣ್ಣುಶಿಶು ಪತ್ತೆ

12:15 PM Jul 31, 2021 | Team Udayavani |

ವಿಜಯಪುರ: ರಸ್ತೆ ಬದಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಬಳಿ ಜರುಗಿದೆ.

Advertisement

ಮಗು ಅಳುವ ಧ್ವನಿ ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ರಸ್ತೆ ಬದಿಯ ಮುಳ್ಳುಕಂಟಿಯಲ್ಲಿ ಎಸೆಯಲಾಗಿದ್ದ ಹೆಣ್ಣುಶಿಶುವನ್ನು ರಕ್ಷಿಸಿದ್ದಾರೆ.

ಹೆಣ್ಣು ಶಿಶು ಎಂಬ ಕಾರಣಕ್ಕೆ, ಇಲ್ಲವೇ ವಿವಾಹ ಪೂರ್ವ ಜನನದ ಕಾರಣ ತಾಯಿ ಹಾಗೂ ಕುಟುಂಬದವರು ಶಿಶುವನ್ನು ಮುಳ್ಳು ಕಂಟಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ:ಕಾಳಾವರ: ಫೈನಾನ್ಸ್ ಕಚೇರಿಯಲ್ಲೇ ಮಾಲಿಕನ ಕಡಿದು ಕೊಲೆ! ಹಣಕಾಸು ವಿಚಾರ ಶಂಕೆ

ಶಿಶುವನ್ನು ರಕ್ಷಿಸಿರುವ ದೇವರಹಿಪ್ಪರಗಿ ಪೊಲೀಸರು ವಿಜಯಪುರ ಸರಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next