Advertisement

ಮೊದಲ ಓದು ಮಕ್ಕಳ ಮಡಿಲಿಗೆ ಹೊಸ ಪುಸ್ತಕಗಳು

06:36 PM Mar 17, 2021 | Team Udayavani |

ನನ್ನ ಮಗಳು ಸದಾ ನನ್ನ ಮತ್ತು ಆಕೆಯ ಅಜ್ಜಿಯ ಹಣೆಯ ಬೊಟ್ಟು, ಕುಂಕುಮವನ್ನು ತನ್ನ ಕೈಬೆರಳುಗಳಿಂದ  ಕೀಳುತ್ತಾ ತನ್ನ ಮುಖದಲ್ಲೆಲ್ಲಅಂಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾಳೆ. ಹೀಗಿರುವಾಗ ನಮ್ಮ ಪುಟ್ಟಿಗೆ ವನಿತಾ ರಚಿಸಿರುವ ಪುಸ್ತಕದ ಒಂದು ಪುಟದಲ್ಲಿರುವ ‘ಅಜ್ಜಿಯ ಬೊಟ್ಟು’ ಎನ್ನುವ ಚಿತ್ರ ಅದೆಷ್ಟು ಪುಳಕವನ್ನು ಉಂಟುಮಾಡುತ್ತದೆ ಎಂದರೆ, ಅದನ್ನ ನೋಡಿಯೇ ಆನಂದಿಸಬೇಕಷ್ಟೇ. ಅಜ್ಜನ ಕನ್ನಡಕ ಆಕೆಗೊಂದು ದೊಡ್ಡ ಅಚ್ಚರಿ. ಅಜ್ಜನಹತ್ತಿರ ಇರುವಷ್ಟು ಹೊತ್ತೂ ಹೇಗಾದರೂಮಾಡಿ ಆ ಕನ್ನಡಕವನ್ನು ತಾನೂ ಹಾಕಿಕೊಳ್ಳಲು ಹರಸಾಹಸ ಮಾಡುತ್ತಿರುತ್ತಾಳೆ.

Advertisement

ಹೀಗಿರುವಾಗ ಪುಸ್ತಕದ ಪುಟದಲ್ಲಿ ಅಜ್ಜನ ಕನ್ನಡಕದ ಚಿತ್ರ ಕಂಡಾಗ ಅವಳ ಅಜ್ಜ ಮತ್ತು ಕನ್ನಡಕಇಬ್ಬರೂ ಒಟ್ಟಿಗೆ ಸಿಕ್ಕಷ್ಟು ಖುಷಿ ಮಗಳ ಮುಖದಲ್ಲಿ. ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ- ಮಾವ ಹೀಗೆ ಮನೆಯ ಹಾಗೂ ಕುಟುಂಬದ ಇತರ ಎಲ್ಲ ಸದಸ್ಯರನ್ನೂ ಪರಿಚಯಿಸುವ ಮೊದಲ ಓದು ಪುಸ್ತಕನಮ್ಮೆಲ್ಲರಿಗೂ ನನ್ನ ಮಗಳಿಗೆ ಕಂಡಷ್ಟೇ ಆಪ್ತವಾಗಿ ಕಾಣುತ್ತದೆ. ನನ್ನ ಮಗಳು ಲೆಲಾ, ಚಿಕ್ಕಂದಿನಿಂದಲೂ ಪುಸ್ತಕ- ಪೆನ್ನುಗಳ ಜೊತೆ ಆಟ ಆಡಲು ಶುರು ಮಾಡಿದಳು. ಅವಳಿಗೆ ಓದುವ ಆಸಕ್ತಿಯನ್ನು ಬೆಳೆಸುವ ಸಲುವಾಗಿ ಆಕರ್ಷಕವಾದ, ಕ್ರಿಯಾಶೀಲವಾದ ಪುಸ್ತಕಗಳನ್ನು ತರಲು ಶುರು ಮಾಡಿದೆವು.

ಮಕ್ಕಳಿಗೆ ಬೇರೆ ಭಾಷೆಯಲ್ಲಿ ಆಕರ್ಷಕವಾದ ಪುಸ್ತಕಗಳು ಸಿಗುತ್ತಿದ್ದರೂಕನ್ನಡದಲ್ಲಿ ಅಷ್ಟು ವಿಶೇಷವಾದಂತಹಯಾವುದೇ ಪುಸ್ತಕಗಳು ದೊರಕಿರಲಿಲ್ಲ.ಈ ಸಂದರ್ಭದಲ್ಲಿಯೇ ನಮಗೆ ಪರಿಚಯವಾಗಿದ್ದು ಎಲ್ಲರ ಪುಸ್ತಕ ಪ್ರಕಾಶನ. ಇತ್ತೀಚೆಗೆ ಈ ಪ್ರಕಾಶನ ಮಕ್ಕಳಿಗಾಗಿ ರುಚಿ ಮತ್ತು ಮೊದಲುಓದು ಎಂಬ ಪುಸ್ತಕಗಳನ್ನು ಹೊರತಂದಿದೆ. ಇವನ್ನು ರಚಿಸಿದವರು ವನಿತಾ ಅಣ್ಣಯ್ಯ ಯಾಜಿ. ನೀನಾಸಂ ಮತ್ತು ಶಾಂತಿನಿಕೇತನದಲ್ಲಿ ಕಲೆ ಮತ್ತು ನಟನೆಯನ್ನು ಅಭ್ಯಾಸ ಮಾಡಿರುವ ವನಿತ ಅನೇಕ ಶಾಲೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಕಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ರಚಿಸಿರುವ ಪುಸ್ತಕಗಳು ಮಕ್ಕಳಿಗೆ ತುಂಬಾ ಆಪ್ತವಾಗಲು ಅನೇಕ ಕಾರಣಗಳಿವೆ. ಈ ಪುಸ್ತಕಗಳನ್ನು ವನಿತಾಅವರು ರಚಿಸಿದ್ದು ತಮ್ಮ ಮಗಳು ಸುರಗಿಗಾಗಿ. ಮಗಳ ಕಲಿಕೆಯ ದೃಷ್ಟಿಯಿಂದ ಮಗಳಿಗೋಸ್ಕರವೇ ತಾವೇ ಕೈಯಲ್ಲಿ ಚಿತ್ರಿಸಿ ಬಟ್ಟೆಯ ಮುಖಪುಟವನ್ನು ಹೊದಿಸಿ ತಯಾರು ಮಾಡಿದ ಪುಸ್ತಕಗಳು ಇವು. ಚಿಕ್ಕ ಮಕ್ಕಳ ಪುಟ್ಟ ಬೆರಳುಗಳಿಗೆ ಪುಸ್ತಕದ ಪುಟಗಳನ್ನು ತಿರುಗಿಸುವುದುಸುಲಭವಾಗಲಿ ಎನ್ನುವ ಉದ್ದೇಶದಿಂದ ಪುಸ್ತಕದ ಪುಟಗಳನ್ನು ರಟ್ಟಿನಲ್ಲಿಮುದ್ರಿಸಲಾಗಿದೆ. ವರ್ಣರಂಜಿತ ಚಿತ್ರಗಳು ಮಕ್ಕಳ ಗಮನವನ್ನು ತಕ್ಷಣವೇ ಸಳೆಯುತ್ತವೆ.

 

ಮಧು ಜಿ ಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next