Advertisement
ಹೆತ್ತ ಕೆಲವೇ ಕ್ಷಣದಲ್ಲಿ ತನ್ನ ಹಸುಗೂಸನ್ನು ನಾಯಿ ಹಂದಿಗಳಿರುವ ತಾಣದಲ್ಲಿ ಎಸೆದು ಹೋದ ಹೆತ್ತಮ್ಮಳೊಬ್ಬಳ ಮೃಗೀಯ ಮನಸ್ಥಿತಿ ಅನಾವರಣಗೊಂಡಿದ್ದು, ಜನಾಕ್ರೋಶಕ್ಕೆ ಗುರಿಯಾಗಿದೆ. ಪಟ್ಟಣದ ರೆಸ್ಟ್ ಕ್ಯಾಂಪ್ ತಾಂಡಾದ ಜನವಸತಿ ಪ್ರದೇಶದ ಬಹಿರ್ದೆಸೆ ತಾಣದಲ್ಲಿ ಕೇಸರಿಬಾಯಿ ಎಂಬುವವರಿಗೆ ಹೆಣ್ಣು ಶಿಶು ಕಣ್ಣಿಗೆ ಬಿದ್ದಿದೆ. ತಕ್ಷಣ ಬಡಾವಣೆಯ ಆಶಾ ಕಾರ್ಯಕರ್ತೆ ಹಾಗೂ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ ಮಗುವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಾಯ ಮಾಡಿದ್ದಾರೆ. ನಾಯಿ, ಹಂದಿಗಳ ಪಾಲಾಗುತ್ತಿದ್ದ ಶಿಶುವನ್ನು ರಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ತಂದರೆ ಅಲ್ಲಿ ವೈದ್ಯರು ಹಾಗೂ ನರ್ಸ್ ಗಳು ಇಲ್ಲದಿರುವುದು ಪೊಲೀಸರ ಪರದಾಟಕ್ಕೆ ಕಾರಣವಾಯಿತು. ನಂತರ ತಾಲೂಕ ಆರೋಗ್ಯ ಅಧಿಕಾರಿಯನ್ನು ಸಂಪರ್ಕಿಸಿದ ಪೊಲೀಸರು ಮಗುವಿನ ರಕ್ಷಣೆಗೆ ಮನವಿ ಮಾಡಿದರು.
Advertisement
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
02:24 PM Nov 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.