Advertisement

ಬಿಜೆಪಿ ಸಚಿವರ ಖಾತೆ ಹಂಚಿಕೆ ಪಟ್ಟಿ ರಾಜಭವನಕ್ಕೆ ರವಾನೆ; ಯಾರಿಗೆ ಯಾವ ಖಾತೆ ಸಿಕ್ತು?

09:51 AM Aug 27, 2019 | Nagendra Trasi |

ಬೆಂಗಳೂರು: ಬಿಜೆಪಿ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ 17 ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಪಟ್ಟಿಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರೀಕ್ಷೆಯಂತೆ ಸೋಮವಾರ ರಾಜಭವನಕ್ಕೆ ರವಾನಿಸಿದ್ದಾರೆ.

Advertisement

ಕೊಠಡಿಗಳನ್ನು ಬದಲಿಸುವಂತೆ ಸಚಿವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧದಲ್ಲಿ ಮೂವರು ಸಚಿವರಿಗೆ ಕೊಠಡಿ ಹಂಚಿಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಿಂದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ಕಳುಹಿಸಿಕೊಡಲಾಗಿದೆ ಎಂದು ವರದಿ ವಿವರಿಸಿದೆ. ಏತನ್ಮಧ್ಯೆ ಅತೃಪ್ತ ಶಾಸಕರ ಮನವೊಲಿಕೆಗೆ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರೆ. ಜೊತೆಗೆ ತಮ್ಮ ಆಪ್ತ ಶಾಸಕರ ಬಳಿ ಈ ಹಂತದಲ್ಲಿ ಬಂಡಾಯ ಏಳದಂತೆ ಮನವಿ ಮಾಡಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಸಂಭಾವ್ಯ ಖಾತೆಗಳ ವಿವರ:

ಕೆಎಸ್ ಈಶ್ವರಪ್ಪ- ಸಮಾಜಕಲ್ಯಾಣ

Advertisement

ಬೊಮ್ಮಾಯಿ- ಇಂಧನ

ಗೋವಿಂದ ಕಾರಜೋಳ- ಲೋಕೋಪಯೋಗಿ

ಅಶ್ವಥ್ ನಾರಾಯಣ –ಗೃಹ ಸಚಿವ

ಜಗದೀಶ್ ಶೆಟ್ಟರ್-ಬೃಹತ್ ಕೈಗಾರಿಕೆ

ಲಕ್ಷ್ಮಣ ಸವದಿ- ಸಹಕಾರ ಸಚಿವ

ಆರ್.ಅಶೋಕ್- ಕಂದಾಯ

ವಿ.ಸೋಮಣ್ಣ- ವಸತಿ

ಜೆಸಿ ಮಾಧುಸ್ವಾಮಿ- ಸಂಸದೀಯ ವ್ಯವಹಾರ

ಬಿ.ಶ್ರೀರಾಮುಲು-ಆರೋಗ್ಯ

ಸಿಟಿ ರವಿ-ಗ್ರಾಮೀಣಾಭಿವೃದ್ಧಿ

ಕೋಟ ಶ್ರೀನಿವಾಸ ಪೂಜಾರಿ-ಬಂದರು ಮತ್ತು ಮೀನುಗಾರಿಕೆ

ಸುರೇಶ್ ಕುಮಾರ್-ಶಿಕ್ಷಣ

ಸಿಸಿ ಪಾಟೀಲ್-ಗಣಿ ಮತ್ತು ಭೂವಿಜ್ಞಾನ

ಶಶಿಕಲಾ ಜೊಲ್ಲೆ-ಮಹಿಳಾ ಮತ್ತು ಮಕ್ಕಳ ಕಲ್ಯಾಣ

ನಾಳೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಇಲ್ಲ:

ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಮಂಗಳವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಂದೂಡಿದೆ. ಬುಧವಾರ ಬೆಳಗ್ಗೆ 11-30ಕ್ಕೆ ಮೂವರು ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next