Advertisement

20 ಭಾಷೆಗಳಲ್ಲಿ ಪ್ರಧಾನಿ ಮೋದಿ ಜೀವನ ಚರಿತ್ರೆ ಬಿಡುಗಡೆ

07:56 AM Jun 01, 2020 | Hari Prasad |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ‘ನರೇಂದ್ರ ಮೋದಿ- ಹರ್ಬಿಂಜರ್‌ ಆಫ್ ಪ್ರಾಸ್ಪರಿಟಿ ಆ್ಯಂಡ್‌ ಅಪೋಸ್ಟಲ್‌ ಆಫ್ ವರ್ಲ್ಡ್ ಪೀಸ್‌’ ಎಂಬ ಜೀವನ ಚರಿತ್ರೆ ಕೃತಿಯನ್ನು ನಿವೃತ್ತ ನ್ಯಾ| ಕೆ.ಜಿ. ಬಾಲಕೃಷ್ಣನ್‌ ಶನಿವಾರ ಬಿಡುಗಡೆ ಮಾಡಿದ್ದಾರೆ.

Advertisement

ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದು 6 ವರ್ಷ ಭರ್ತಿಯಾದ ಸ್ಮರಣಾರ್ಥವಾಗಿ ಡಾ| ಅದೀಶ್‌ ಸಿ. ಅಗರ್ವಾಲ್‌ ಮತ್ತು ಎಲಿಜಬೆತ್‌ ಹೊರಾನ್‌ ಈ ಕೃತಿಯನ್ನು ರಚಿಸಿದ್ದಾರೆ.

ಮೋದಿ ಅವರ ಬಾಲ್ಯದ ಅಪರೂಪದ ಚಿತ್ರಗಳ ಪೇಂಟಿಂಗ್‌ ಮತ್ತು ಬದುಕಿನ ಕೌತುಕ ಘಟನೆಗಳನ್ನು ಪುಸ್ತಕ ಒಳಗೊಂಡಿದೆ.

ಪುಸ್ತಕವು ಹಾರ್ಡ್‌ ಕವರ್‌ ಮತ್ತು ಇ-ಬುಕ್‌ ಆವೃತ್ತಿಗಳಲ್ಲಿ ಲಭ್ಯವಿದ್ದು, 20 ಭಾಷೆಗಳಿಗೆ ಅನುವಾದಗೊಂಡಿದೆ. ಹಿಂದಿ, ಕನ್ನಡ, ಅಸ್ಸಾಮಿ, ಬಂಗಾಲಿ, ಗುಜರಾತಿ, ಮರಾಠಿ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದು ಭಾಷೆಗಳಲ್ಲಿ ಕೃತಿ ಲಭ್ಯವಿದೆ. ಒಟ್ಟು 10 ವಿದೇಶಿ ಭಾಷೆಗಳಿಗೆ ಇದು ತರ್ಜುಮೆಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next