Advertisement

ಆಟೋ ರಿಕ್ಷಾ, ಟ್ರಕ್, ಬಸ್ ಚಾಲಕರು, ಸಿಬ್ಬಂದಿಗೆ ನೆರವಾಗುವ ಹೊಸ ಬಿಲ್ ಜಾರಿ: ಸಚಿವ ಹೆಬ್ಬಾರ್

01:00 PM Aug 13, 2021 | Team Udayavani |

ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲು ಸಿದ್ದರಾಗಬೇಕೆಂದು ನಿರ್ಧಾರ ಮಾಡಿರುವ ಸಚಿವ ಶಿವರಾಮ್ ಹೆಬ್ಬಾರ್, ಅತೀ ಶೀಘ್ರದಲ್ಲೇ ಹೊಸ ಬಿಲ್ ಮಂಡನೆ ಮಾಡಲಿದ್ದೇವೆ ಎಂದಿದ್ದಾರೆ.

Advertisement

ಆಟೋ ರಿಕ್ಷಾ, ಟ್ರಕ್, ಬಸ್ ಸೇರಿದಂತೆ ಎಲ್ಲಾ ಚಾಲಕರು, ಹಾಗು ತಾಂತ್ರಿಕ ಸಿಬ್ಬಂದಿ ಸಂಬಂಧಪಟ್ಟಂತೆ ಹೊಸ ಬಿಲ್ ಜಾರಿಗೆ ತರಲು ಉದ್ದೇಶಿಸಲಾಗಿದೆ. ಮೃತರಾದರೆ 5 ಲಕ್ಷ ನೀಡುವುದು ಸೇರಿದಂತೆ ಹಲವು ಸೌಲಭ್ಯಗಳು ಹೊಸ ಬಿಲ್ ನಲ್ಲಿ ಇರಲಿದೆ. ಬರುವ ಅಧಿವೇಶನದಲ್ಲಿ ಹೊಸ ಬಿಲ್ ತರಲಾಗುವುದು. ಒಂದು ಕಾಲಕ್ಕೆ ನಾನು ಚಾಲಕನಾಗಿ ಕೆಲಸ ಮಾಡಿದ್ದೆ ನನಗೆ ಚಾಲಕನ ಸಂಕಷ್ಟ ಗೊತ್ತಿದೆ. ಅದಕ್ಕಾಗಿ ಹೊಸ ಬಿಲ್ ತರಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ಇತರರಿಗೂ ಕರೆ ಕೊಡುತ್ತೇನೆ: ಸಿಎಂ ಬೊಮ್ಮಾಯಿ

ಕಾರ್ಮಿಕ ಇಲಾಖೆಯ ಸಂಬಂಧಪಟ್ಟಂತೆ ನೀಡುತ್ತಿರುವ ವಿವಿಧ ಸಹಾಯ ಧನ ದುಪ್ಪಟ್ಟು ಮಾಡಲು ತಿರ್ಮಾನ ಮಾಡಲಾಗಿದೆ. ಕಾರ್ಮಿಕ ಇಲಾಖೆ ಸಂಬಂಧಪಟ್ಟಂತೆ ವಿಜಲೆನ್ಸ್ ಸೆಲ್ ಮಾಡಲಾಗುತ್ತದೆ. ವಲಸೆ ಕಾರ್ಮಿಕರಿಗೆ ಪ್ರಮುಖ ಜಿಲ್ಲೆಯಲ್ಲಿ ವಸತಿ ಸಮುಚ್ಚಯ ಕಟ್ಟಲು ತೀರ್ಮಾನ ಮಾಡಲಾಗಿದೆ. ಅಸಂಘಟಿತ ವಲಯಕ್ಕೆ ಮಾಧ್ಯಮ ಸೇರಿದಂತೆ ಹಲವು ವರ್ಗಗಳನ್ನು ಸೇರಿಸುವಂತೆ ಸಿಎಂಗೆ ಮನವಿ ಮಾಡಲಾಗುವುದು ಎಂದು ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next