ಹೊಸದಿಲ್ಲಿ: ಜನನ ಮತ್ತು ಮರಣಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಮತದಾರರ ಪಟ್ಟಿ ಮತ್ತು ಒಟ್ಟಾರೆ ಅಭಿವೃದ್ಧಿ ಪ್ರಕ್ರಿಯೆಯೊಂದಿಗೆ ಜೋಡಿಸಲು ಸಂಸತ್ತಿನಲ್ಲಿ ಮಸೂದೆಯನ್ನು ತರಲು ಸರ್ಕಾರ ಯೋಜಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದರು.
ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣಿ ಆಯುಕ್ತರ ಕಚೇರಿ ‘ಜನಗಣನ ಭವನ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಸೂಚಿಯ ಆಧಾರದ ಮೇಲೆ ಜನಗಣತಿ ನಡೆಯಲಿದೆ ಎಂದರು.
ಡಿಜಿಟಲ್, ಪೂರ್ಣ ಮತ್ತು ನಿಖರ ಗಣತಿಯು ಹಲವು ರೂಪದ ಲಾಭವನ್ನು ಹೊಂದಿದೆ ಎಂದ ಅವರು, ಗಣತಿ ಮಾಹಿತಿ ಆಧಾರದ ಯೋಜನೆಗಳು ಅತ್ಯಂತ ಕೆಳ ಸ್ಥರ ಬಡವರಿಗೂ ತಲುಪಲು ಸಹಾಯ ಮಾಡುತ್ತದೆ ಎಂದರು.
ಇದನ್ನೂ ಓದಿ:ʼThe Kerala Storyʼ ನೋಡಿದ ಬಳಿಕ ಪ್ರಿಯತಮೆಯ ಧರ್ಮ ಬದಲಾಯಿಸಲು ಒತ್ತಡ ಹೇರಿ ದೌರ್ಜನ್ಯ
Related Articles
ಅಭಿವೃದ್ಧಿ ಕಾರ್ಯಗಳನ್ನು ಸರಿಯಾಗಿ ಯೋಜಿಸಬಹುದಾದ ರೀತಿಯಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ವಿಶೇಷ ರೀತಿಯಲ್ಲಿ ಸಂರಕ್ಷಿಸಲಾಗುವುದು ಎಂದರು.
ಜನನ ಮತ್ತು ಪ್ರಮಾಣ ದತ್ತಾಂಶಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಬಗ್ಗೆ ಸಂಸತ್ತಿನಲ್ಲಿ ಬಿಲ್ ತರುತ್ತಿದ್ದೇವೆ. ಈ ಪ್ರಕ್ರಿಯೆಯ ಅಡಿಯಲ್ಲಿ, ಒಬ್ಬ ವ್ಯಕ್ತಿಗೆ 18 ವರ್ಷ ತುಂಬಿದಾಗ, ಅವನ ಅಥವಾ ಅವಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ. ಅದೇ ರೀತಿ ವ್ಯಕ್ತಿಯೊಬ್ಬ ಮರಣ ಹೊಂದಿದಾಗ ಆ ಮಾಹಿತಿ ಸ್ವಯಂಚಾಲಿತವಾಗಿ ಚುನಾವಣಾ ಆಯೋಗಕ್ಕೆ ಹೋಗಲಿದ್ದು, ಮತದಾರರ ಪಟ್ಟಿಯಿಂದ ಹೆಸರು ಅಳಿಸುವ ಪ್ರಕ್ರಿಯೆ ಆರಂಭವಾಗಲಿದೆ’’ ಎಂದರು.