ಪ್ಯಾರೀಸ್: ಇತ್ತೀಚೆಗೆ ವಿಶ್ವದ ಅತ್ಯಂತ ದುಬಾರಿ “ನಿರುಪಯೋಗಿಬ್ಯಾಗ್ʼ ( Trash Pouch) ತಯಾರಿಸಿ ಸುದ್ದಿಯಾಗಿದ್ದ ಐಷಾರಾಮಿ ಫ್ಯಾಷನ್ ಬ್ರಾಂಡ್ ಬಾಲೆನ್ಸಿಯಾಗ ಈಗ ಮತ್ತೊಂದು ದುಬಾರಿ ಹಾಗೂ ಭಿನ್ನವಾದ ಬ್ಯಾಗ್ ತಯಾರಿಸಿದೆ.
ಇದನ್ನೂ ಓದಿ:ನಮಗೆ ಮೂವರು ಹೆಂಡತಿಯರಿದ್ದರೂ ಗೌರವಿಸುತ್ತೇವೆ, ಆದರೆ ಹಿಂದೂಗಳು.. ಎಐಎಂಐಎಂ ಮುಖಂಡ
ಇತ್ತೀಚೆಗೆ ಬಾಲೆನ್ಸಿಯಾಗ ʼನಿರುಪಯೋಗಿ ಬ್ಯಾಗ್ʼ ವೊಂದನ್ನು ತಯಾರಿಸಿ ಅದಕ್ಕೆ 1.4 ಲಕ್ಷ ಬೆಲೆ ನಿಗದಿ ಮಾಡಿತ್ತು. ಈಗ ಲೇಸ್ ಪಾಕೆಟ್ ರೀತಿಯ ಬ್ಯಾಗ್ ವೊಂದನ್ನು ತಯಾರಿಸಿದೆ. ವರದಿಯ ಪ್ರಕಾರ ಪೆಪ್ಸಿಕೋ ಮತ್ತು ಬಾಲೆನ್ಸಿಯಾಗ ಕ್ರಿಯೇಟಿವ್ ಡಿಸೈನರ್ ಡೆಮ್ನಾ ಲೇ ಅವರು ಆಲೂಗಡ್ಡೆ ಚಿಪ್ಸ್ ಪ್ಯಾಕ್‌ಗಳನ್ನು ಹೋಲುವ ಬ್ಯಾಗ್‌ಗಳನ್ನು ತಯಾರಿಸುವಲ್ಲಿ ಸಹಕರಿಸಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ ಪ್ಯಾರೀಸ್ ಫ್ಯಾಷನ್ ವೀಕ್ ನಲ್ಲಿ ಈ ಬ್ಯಾಗ್ ಅನಾವರಣಗೊಂಡಿತು.
ಲೇಸ್ ಪ್ಯಾಕೆಟ್ ನ ಬಣ್ಣವುಳ್ಳ, ಕೈಯಲ್ಲಿ ಮಡಚಿ ಇಟ್ಟುಕೊಳ್ಳಬಹುದಾದ ಈ ಬ್ಯಾಗ್ ನ ಬೆಲೆ ಕೇಳಿದರೆ ಒಮ್ಮೆ ದಂಗಾಗಿ ಬಿಡಬಹುದು. ಇದರ ಬೆಲೆ 1,40,000 ಲಕ್ಷ ರೂ. ( USD 1,800) ಅ.3 ರಂದು ಲೇಸ್ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬ್ಯಾಗ್ ಫೋಟೋವನ್ನು ಹಂಚಿಕೊಂಡಿದೆ. ಈ ಬ್ಯಾಗ್ ಮಾರುಕಟ್ಟೆಗೆ ಬಂದಾಗಿನಿಂದ ಅನೇಕ ಅಂಗಡಿಗಳಲ್ಲಿ ಔಟ್ ಆಫ್ ಸ್ಟಾಕ್ಸ್ ಆಗಿದೆ. ಇಂಟರ್ ನೆಟ್ ಲೇಸ್ ಬ್ಯಾಗ್ ಸಿಕ್ಕಾಪಟ್ಟೆ ವೈರಲ್ ಆಗಿದೆ.