Advertisement

ಕಾಂಗರೂ ಕ್ರಿಕೆಟ್‌ ಕೋಚ್‌ ಆಂಡ್ರ್ಯೂ ಮೆಕ್‌ಡೊನಾಲ್ಡ್‌ಗೆ ಕೋವಿಡ್ ಪಾಸಿಟಿವ್‌

11:32 PM Jun 01, 2022 | Team Udayavani |

ಮೆಲ್ಬರ್ನ್: ಇನ್ನೇನು ಶ್ರೀಲಂಕಾ ಪ್ರವಾಸಕ್ಕೆ ವಿಮಾನ ಏರಬೇಕು ಎನ್ನುವ ಹೊತ್ತಿನಲ್ಲೇ ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಂಡ್ರ್ಯೂ ಮೆಕ್‌ಡೊನಾಲ್ಡ್‌ಗೆ ಕೊರೊನಾ ಅಂಟಿಕೊಂಡಿದೆ.

Advertisement

ಅವರ ಫ‌ಲಿತಾಂಶ ಪಾಸಿಟಿವ್‌ ಬಂದಿದೆ. ಹೀಗಾಗಿ ಅವರು ಪ್ರವಾಸದ ಮೊದಲ ವಾರ ಲಭ್ಯರಿರುವುದಿಲ್ಲ.

ಉಳಿದಂತೆ ಎಲ್ಲರ ಫ‌ಲಿತಾಂಶ ನೆಗೆಟಿವ್‌ ಬಂದಿದ್ದು, ಬುಧವಾರ ಆಸ್ಟ್ರೇಲಿಯ ಟಿ20 ತಂಡ ಶ್ರೀಲಂಕಾಕ್ಕೆ ಹೊರಟಿದೆ. ಮೆಕ್‌ಡೊನಾಲ್ಡ್‌ ಮೆಲ್ಬರ್ನ್ನಲ್ಲಿ ಒಂದು ವಾರ ಕಾಲ ಐಸೊಲೇಶನ್‌ನಲ್ಲಿ ಇರಲಿದ್ದಾರೆ. ಜೂ. 8ರಂದು ನಡೆಯುವ ದ್ವಿತೀಯ ಟಿ20 ಪಂದ್ಯದ ವೇಳೆ ಅವರು ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ.

ಫುಲ್ -ಟೈಮ್‌ ಕೋಚ್‌ ಆದ ಬಳಿಕ ಆಂಡ್ರ್ಯೂ ಮೆಕ್‌ಡೊನಾಲ್ಡ್‌ಗೆ ಎದುರಾದ ಮೊದಲ ಸರಣಿ ಹೊಣೆಗಾರಿಕೆ ಇದಾಗಿತ್ತು. ಜಸ್ಟಿನ್‌ ಲ್ಯಾಂಗರ್‌ ರಾಜೀನಾಮೆ ನೀಡಿದ ಬಳಿಕ ಮೆಕ್‌ಡೊನಾಲ್ಡ್‌ ಉಸ್ತುವಾರಿ ಕೋಚ್‌ ಆಗಿದ್ದರು. ಅವರ ಗೈರಲ್ಲಿ ಸಹಾಯಕ ಕೋಚ್‌ ಮೈಕಲ್‌ ಡಿ ವೆನುಟೊ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಇದೊಂದು ಸುದೀರ್ಘ‌ ಸರಣಿಯಾಗಿದ್ದು, 3 ಟಿ20,5 ಏಕದಿನ, 2 ಟೆಸ್ಟ್‌ ಪಂದ್ಯಗಳನ್ನು ಆಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next