ಹೆಬ್ರಿ: ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅವಕಾಶಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕು. ಉತ್ತಮ ನಾಯಕತ್ವ ಗುಣ ಬೆಳೆಸುವಲ್ಲಿ ವಿದ್ಯಾರ್ಥಿಸಂಘಗಳ ಪಾತ್ರ ದೊಡ್ಡದು.
ಶಾಲಾ ಫಲಿತಾಂಶವನ್ನು ಮಾತ್ರ ಮಾನದಂಡ ಮಾಡಿದರೆ ಮಕ್ಕಳ ವೈವಿಧ್ಯಮಯ ಪ್ರತಿಭೆಗೆ ಅನ್ಯಾಯ ಮಾಡಿದಂತೆ. ಆದ್ದರಿಂದ ಇಂದು ವ್ಯಕ್ತಿತ್ವ ವಿಕಾಸದ ಹೊಸ ಧೋರಣೆ ನಮಗೆ ಬೇಕು ಎಂದು ನಟ, ರಂಗನಿರ್ದೇಶಕ ಬಿ. ಎಸ್. ರಾಮ ಶೆಟ್ಟಿ ಹೇಳಿದರು.
ಅವರು ಪೆರ್ಡೂರು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಸಂಘದ ಉದ್ಘಾಟನೆ ಮಾಡಿ ಮಾತನಾಡಿದರು. ಮುಖ್ಯ ಶಿಕ್ಷಕ ಹೆಚ್. ಎಸ್. ಗಣೇಶ ಭಟ್ ವಿದ್ಯಾರ್ಥಿಗಳಿಗೆ ಅಧಿಕಾರಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿಸಂಘದ ನಿರ್ದೇಶಕ ಜಿ.ಪಿ. ಪ್ರಭಾಕರ,ನಿಯೋಜಿತ ವಿದ್ಯಾರ್ಥಿನಾಯಕ ಓಂಕಾರ, ವಿದ್ಯಾರ್ಥಿಸಂಘದ ಅಧ್ಯಕ್ಷ ಅಜಯ ಶೆಟ್ಟಿ, ಬಾಲಿಕೆಯರ ಪ್ರತಿನಿಧಿ ಚೈತ್ರಶ್ರೀ ಶೆಟ್ಟಿ, ವಿದ್ಯಾರ್ಥಿಸಂಘದ ಉಪನಾಯಕ ಪ್ರಜ್ವಲ ವೇದಿಕೆಯಲ್ಲಿದ್ದರು. ಪೂಜಾ ಜೆ.
ಸ್ವಾಗತಿಸಿ, ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.