Advertisement
ವೀಸಾ ಪಡೆಯಲು ಅಗತ್ಯವಿದ್ದ ಮೆಡಿಕಲ್ ಚೆಕ್‌ಅಪ್, ದಾಖಲೆಗಳ ದೃಢೀಕರಣ ಮತ್ತಿತರ ಅಂಶಗಳನ್ನು ಯುಎಇನಲ್ಲಿ ನಡೆಸಬೇಕಾಗಿತ್ತು. ಮುಂದಿನ ದಿನಗಳಲ್ಲಿ ಅದನ್ನು ಭಾರತದಲ್ಲಿ ನಡೆಸಲೂ ಅವಕಾಶ ಕಲ್ಪಿಸಲಾಗಿದೆ. ನಮ್ಮ ದೇಶಕ್ಕೆ ಉದ್ಯೋಗ ಹುಡುಕಿಕೊಂಡು ಬರುವವರಿಗೆ ಸುಲಭ ರೀತಿಯಲ್ಲಿ ವ್ಯವಸ್ಥೆಗಳು ಸಿಗುವಂತಾಗಬೇಕು. ಹೀಗಾಗಿ ಇಂಥ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ನವದೆಹಲಿಯಲ್ಲಿ ಯುಎಇ ರಾಯ ಭಾರಿ ಅಹ್ಮದ್ ಅಲ್ ಬನ್ನಾ ಹೇಳಿದ್ದಾರೆ.
ಕುವೈಟ್‌ನಲ್ಲಿ ಅತಂತ್ರರಾಗಿದ್ದ ಸಾವಿರಾರು ಭಾರತೀಯ ಕಾರ್ಮಿಕರಿಗೆ ಅಲ್ಲಿನ ಸರ್ಕಾರ ಆಶ್ರಯದ ಭರವಸೆ ನೀಡಿದೆ. ವೇತನ ಪಾವತಿಯಾಗದ ಕಾರಣ, ಅಕ್ರಮವಾಗಿ ಅಲ್ಲಿ ನೆಲೆಸಬೇಕಾದ ಅನಿ ವಾರ್ಯತೆಗೆ ಸಿಲುಕಿದ್ದ ಭಾರತೀಯರ ರಕ್ಷಣೆಗೆ ಅಲ್ಲಿನ ಸರ್ಕಾರ ಬಂದಿದೆ. ಈ ಕಾರ್ಮಿಕರ ಮೇಲೆ ಯಾವುದೇ ದಂಡ ವಿಧಿಸುವುದಿಲ್ಲ. ಫೆ.22 ರವರೆಗೆ ಆಶ್ರಯ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ನಿಯಮ ಪ್ರಕಾರ, ಅವಧಿ ಮುಗಿದ ಬಳಿಕವೂ ಅಲ್ಲೇ ಇದ್ದರೆ ದಿನಕ್ಕೆ 424 ರೂ.ದಂಡ ವಿಧಿಸಲಾಗುತ್ತದೆ.