Advertisement

ಸಂತಾನ ನಿರೋಧಕ್ಕೆ ಹೊಸ ಕ್ರಮ

12:30 AM Jan 17, 2019 | |

ವಾಷಿಂಗ್ಟನ್‌: ಸದ್ಯ ಲಭ್ಯವಿರುವ ಸಂತಾನ ನಿರೋಧಕ ಕ್ರಮಗಳು ಶೇ. 100 ರಷ್ಟು ಫ‌ಲಿತಾಂಶ ನೀಡುವುದಿಲ್ಲ. ಹೀಗಾಗಿಯೇ ದೀರ್ಘ‌ಕಾಲೀನ ಇಂಪ್ಲಾಂಟ್‌ ಮತ್ತು ಇಂಟ್ರಾಯೂಟರಿನ್‌ ಸಾಧನಗಳು ಮಾರುಕಟ್ಟೆಗೆ ಬಂದವಾದರೂ, ಇವುಗಳನ್ನು ಅಳವಡಿಸಿಕೊಳ್ಳಲು ಆಸ್ಪತ್ರೆಗೆ ತೆರಳಬೇಕಿರುವುದರಿಂದ ಅಷ್ಟೇನೂ ಜನಪ್ರಿಯವಾಗಿಲ್ಲ. ಇದೇ ಕಾರಣಕ್ಕೆ ಅಮೆರಿಕದ ಜಾರ್ಜಿಯಾ ಟೆಕ್‌ ತಂಡವು ವಿಶಿಷ್ಟವಾದ ಸಂಶೋಧನೆ ಮಾಡಿದ್ದು, ಕೈ ಅಥವಾ ಕಾಲಿಗೆ ಅಂಟಿಸಿಕೊಂಡು ಬೇಕಾದಾಗ ಸಕ್ರಿಯಗೊಳಿಸಿ ಕೊಳ್ಳಬಹುದಾದ ಪ್ಯಾಚ್‌ ಒಂದನ್ನು ಅಭಿವೃದ್ಧಿ ಪಡಿಸಿದೆ. ಇದಕ್ಕೆ ವೈದ್ಯರ ನೆರವು ಬೇಕಾಗುವುದಿಲ್ಲ. ಒಮ್ಮೆ ಪ್ಯಾಚ್‌ ಬಳಸಿದರೆ ಒಂದು ತಿಂಗಳದವರೆಗೆ ಇದು ಸಂತಾನ ನಿರೋಧಕತೆ ಸಕ್ರಿಯವಾಗಿ ನೆರವು ನೀಡುತ್ತದೆ. 

Advertisement

ಇದು ಕೆಲಸ ಮಾಡುವ ವಿಧಾನ ಸ್ವಲ್ಪ ಭಿನ್ನವಾಗಿದ್ದು, ಕೇವಲ 1 ಡಾಲರ್‌ ಅಂದರೆ ಸುಮಾರು 70 ರೂ. ತಗುಲಲಿದೆ. ಈ ಪ್ಯಾಚ್‌ನಲ್ಲಿ ಒಂದು ಅತಿ ಸೂಕ್ಷ್ಮ ಸೂಜಿ ಇದ್ದು, ಇದರಿಂದ ನೋವಾಗದಂತೆ ದೇಹದೊಳಕ್ಕೆ ಸಂತಾನ ನಿರೋಧಕ ಹಾರ್ಮೋನ್‌ ಅನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್‌ ದೇಹದ ಪೂರ್ತಿ ಸಂಚರಿಸಲು ಸ್ವಲ್ಪ ಸಮಯ ತೆಗೆದು ಕೊಳ್ಳಲಿದ್ದು, ಶೇ 100ರಷ್ಟು ಪರಿಣಾಮ ಕಾರಿಯಾಗಿರಲಿದೆ. ಈ ವಿಧಾನವನ್ನು ಇಲಿಗಳ ಮೇಲೆ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಮನುಷ್ಯರ ಬಳಕೆಗೆ ಇನ್ನಷ್ಟೇ ಪ್ರಯೋಗ ನಡೆಯಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next