ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 178 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅತೀ ಹೆಚ್ಚು ಸೋಂಕಿತರು ಕಂಡು ಬಂದಿದ್ದು, ಮಹಾರಾಷ್ಟ್ರ ಮೂಲದ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.
ಇಂದಿನ ಹೊಸ 178 ಕೋವಿಡ್ ಸೋಂಕು ಪ್ರಕರಣಗಳಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2711ಕ್ಕೆ ಏರಿಕೆ ಕಂಡಿದೆ. ಇಂದಿನ 178 ಪ್ರಕರಣಗಳ ಪೈಕಿ 156 ಮಂದಿ ಮಹಾರಾಷ್ಟ್ರದಿಂದ ವಾಪಸ್ಸಾದವರಾಗಿದ್ದಾರೆ.
ರಾಯಚೂರಿನಲ್ಲಿ ಇಂದು ಹೊಸ 62 ಪ್ರಕರಣಗಳು ಕಂಡು ಬಂದಿದೆ. ಎಲ್ಲಾ 62 ಪ್ರಕರಣಗಳೂ ಕೂಡಾ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಯಾದಗಿರಿಯಲ್ಲಿ 60 ಪ್ರಕರಣ, ಉಡುಪಿಯಲ್ಲಿ 15 ಪ್ರಕರಣಗಳು ದೃಢವಾಗಿದೆ.
ಕಲಬುರಗಿಯಲ್ಲಿ 15 ಜನರಿಗೆ ಸೋಂಕು ತಾಗಿದೆ. ಚಿಕ್ಕಬಳ್ಳಾಪುರದಲ್ಲಿ ನಾಲ್ಕು, ಬೆಂಗಳೂರು ನಗರದಲ್ಲಿ 10, ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಮಂಡ್ಯದಲ್ಲಿ ಎರಡು, ಚಿತ್ರದುರ್ಗ ಮತ್ತು ಧಾರವಾಡದಲ್ಲಿ ಒಂದು ಪ್ರಕರಣಗಳು ಕಂಡು ಬಂದಿದೆ.
ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ತ್ರಿಶತಕ ಗಡಿ ದಾಟಿದ್ದರೆ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇನ್ನೂರರ ಗಡೆ ದಾಟಿದೆ. ಇದುವರೆಗೆ 72 ಸೋಂಕಿತರ ಸಂಖ್ಯೆಯಿದ್ದ ರಾಯಚೂರಿನಲ್ಲಿ ಇಂದು 62 ಜನರಿಗೆ ಸೋಂಕು ದೃಢವಾದ ಕಾರಣ ಒಟ್ಟು ಸೋಂಕಿತರ ಪಟ್ಟಿಯಲ್ಲಿ ನೂರರ ಗಡಿ ದಾಟಿದೆ.
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2711ಕ್ಕೆ ಎರಿಕೆಯಾಗಿದೆ. ಇದರಲ್ಲಿ 869 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 47 ಜನ ಸೋಂಕಿತರು ಸೋಂಕಿನ ಕಾರಣದಿಂದ ಮರಣ ಹೊಂದಿದ್ದು ಇಬ್ಬರು ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ.