Advertisement

ಯೂ ಟರ್ನ್; ಪ್ರಾದೇಶಿಕ ಭಾಷೆ ಮೇಲೆ ಹಿಂದಿ ಭಾಷೆ ಹೇರುವ ಪ್ರಶ್ನೆಯೇ ಇಲ್ಲ- ಅಮಿತ್ ಶಾ

08:45 AM Sep 19, 2019 | Nagendra Trasi |

ರಾಂಚಿ:ದೇಶದ ಎಲ್ಲೆಡೆ ಹಿಂದಿ ಭಾಷೆಯನ್ನು ಹೇರುವಂತೆ ಯಾವತ್ತೂ ಹೇಳಿಲ್ಲ. ಆದರೆ ಮಾತೃಭಾಷೆಯ ನಂತರ ಹಿಂದಿಯನ್ನು ಎರಡನೇ ಭಾಷೆಯನ್ನಾಗಿ ಬಳಸುವಂತೆ ಸಲಹೆ ನೀಡಿದೆ ಎಂದು ಹೇಳುವ ಮೂಲಕ ಕೇಂದ್ರ ಗೃಹಸಚಿವ ಅಮಿತ್ ಶಾ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

Advertisement

ಹಿಂದಿ ಭಾಷಾ ದಿವಸ ಸಂದರ್ಭದಲ್ಲಿ ಮಾತನಾಡಿದ್ದ ಶಾ, ದೇಶದಲ್ಲಿ ಹಿಂದಿ ಭಾಷೆಯೇ ಪ್ರಮುಖವಾಗಬೇಕು. ಹಿಂದಿ ಭಾಷೆಯ ಮೂಲಕವೇ ಭಾರತ ವಿಶ್ವದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

ನಾನೂ ಕೂಡಾ ಹಿಂದಿಯೇತರ ರಾಜ್ಯದಿಂದ ಬಂದವನು. ನಾನು ಗುಜರಾತ್ ಮೂಲದವನು. ಗುಜರಾತಿ ನನ್ನ ಮಾತೃಭಾಷೆ, ಹಿಂದಿ ಅಲ್ಲ. ಹೀಗಾಗಿ ನನ್ನ ಭಾಷಣವನ್ನು ಸೂಕ್ಷ್ಮವಾಗಿ ಕೇಳಿಸಿಕೊಳ್ಳಿ. ಒಂದು ವೇಳೆ ಯಾರಾದರು ರಾಜಕೀಯಕ್ಕೆ ಬರುತ್ತಾರೆ ಎಂದಾದರೆ, ಆವಾಗ ಹಿಂದಿ ಭಾಷೆಯ ಅಗತ್ಯವಿದೆ ಎಂದು ಹೇಳಿರುವುದಾಗಿ ಶಾ ಸಮಜಾಯಿಷಿ ನೀಡಿದ್ದಾರೆ.

ಭಾರತೀಯ ಭಾಷೆಗಳು ಮತ್ತಷ್ಟು ಬಲಗೊಳ್ಳಬೇಕಾಗಿದೆ. ಅಲ್ಲದೇ ಪ್ರಾದೇಶಿಕ ಭಾಷೆಗಳೂ ಬೆಳೆಯಬೇಕಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next