Advertisement
ಪೂರ್ವ ಲಡಾಖ್ ನ ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದಲ್ಲಿ ಒಳನುಗ್ಗಲು ಯತ್ನಿಸಿದ್ದ ಚೀನಾ ಸೇನೆಯನ್ನು ಭಾರತ ಪ್ರಬಲ ವಿರೋಧದಿಂದ ಹಿಮ್ಮೆಟ್ಟಿಸಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಚೀನಾ ತನ್ನ ವರಸೆ ಬದಲಾಯಿಸಿ, ತಾನು ಬೇರೆ ದೇಶದ ಒಂದಿಂಚೂ ಜಾಗವನ್ನು ಕಬಳಿಸಿಲ್ಲ ಎಂಬುದಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನೈಂಗ್ ತಿಳಿಸಿದ್ದಾರೆ.
Related Articles
Advertisement
ಲಡಾಖ್ ನ ಪ್ಯಾಂಗಾಂಗ್ ನಲ್ಲಿ ಚೀನಾ ಸೇನೆಯನ್ನು ಭಾರತ ಹಿಮ್ಮೆಟ್ಟಿಸಿದ ಹಲವು ಗಂಟೆಗಳ ನಂತರ ಚೀನಾ ಈ ಹೇಳಿಕೆಯನ್ನು ನೀಡಿದೆ ಎಂಬುದನ್ನು ಗಮನಿಸಬಹುದಾಗಿದೆ. ಭಾರತದಲ್ಲಿರುವ ಚೀನಾ ರಾಯಭಾರಿ ಕೂಡಾ ಹೇಳಿಕೆಯನ್ನು ನೀಡಿದ್ದರು. ಭಾರತೀಯ ಸೇನೆ ಕಾನೂನು ಬಾಹಿರವಾಗಿ ಎಲ್ ಎಸಿ ಒಳಗೆ ನುಗ್ಗಿ ಶಾಂತಿ, ಸೌಹಾರ್ದತೆ ಕದಡಿದೆ ಎಂದು ಆರೋಪಿಸಿದ್ದರು.
ಚೀನಾ ಜತೆಗಿನ ಭಾರತದ ಗಡಿ ವಿವಾದ 1914ರಷ್ಟು ಹಿಂದಿನದ್ದಾಗಿದೆ. ಗಡಿ ಸಂಘರ್ಷದ ಪರಿಣಾಮವಾಗಿಯೇ 1962ರಲ್ಲಿ ಯುದ್ಧ ನಡೆದಿತ್ತು. ಆ ನಂತರ ಮೂರು ಒಪ್ಪಂದಗಳು ಆಗಿದ್ದರೂ ಗಡಿ ಸಮಸ್ಯೆ ಬಗೆಹರಿದಿಲ್ಲವಾಗಿತ್ತು. ಅಷ್ಟೇ ಅಲ್ಲ ಭಾರತದ ಅರುಣಾಚಲ ಪ್ರದೇಶ ತನ್ನದೆಂದು ಚೀನಾ ಪ್ರತಿಪಾದಿಸುತ್ತಲೇ ಬಂದಿದೆ! 2017ರಲ್ಲಿ ಚೀನಾ ಸೈನಿಕರು ಭೂತಾನ್ ದೋಕಲಾ ಪ್ರದೇಶವನ್ನು ಅತಿಕ್ರಮಿಸಿ ರಸ್ತೆ ಮತ್ತು ಗಡಿಯನ್ನು ನಿರ್ಮಿಸಲು ಮುಂದಾಗಿತ್ತು. ಆದರೆ ಭಾರತದ ಸೈನಿಕರ ಪ್ರಬಲ ವಿರೋಧದಿಂದ ಚೀನಾ ಸೈನಿಕರು ಹಿಮ್ಮೆಟ್ಟುವಂತಾಗಿತ್ತು. ದೋಕಲಾ ಪ್ರದೇಶ ಕೂಡಾ ತನ್ನದು ಎಂಬುದು ಚೀನಾದ ವಾದವಾಗಿದೆ.