Advertisement

ನವೆಂಬರ್‌ನಲ್ಲಿ “ನ್ಯೂರಾನ್‌’

09:43 AM Nov 06, 2019 | Lakshmi GovindaRaju |

ಫ್ರೆಂಡ್ಸ್‌ ಪ್ರೊಡಕ್ಷನ್‌ ಲಾಂಛನದಲ್ಲಿ ವಿನಯ್‌ ಕುಮಾರ್‌.ಆರ್‌ ಅವರು ನಿರ್ಮಿಸಿರುವ “ನ್ಯೂರಾನ್‌’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ಚಿತ್ರ ನವೆಂಬರ್‌ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನೈಜ ಘಟನೆ ಆಧಾರಿತ ಹಾಗೂ ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚಿತ್ರಕಥೆ ಬರೆದು ವಿಕಾಸ್‌ ಪುಷ್ಪಗಿರಿ ನಿರ್ದೇಶನ ಮಾಡಿದ್ದಾರೆ. ಇದು ಅವರಿಗೆ ಚೊಚ್ಚಲ ಚಿತ್ರ.

Advertisement

“ನ್ಯೂರಾನ್‌’ ಚಿತ್ರದ ಬಗ್ಗೆ ಹೇಳುವುದಾದರೆ, ಮನುಷ್ಯ ನ್ಯೂರಾನ್ಸ್‌ ಇಲ್ಲದೆ ಬದುಕಲು ಸಾಧ್ಯವಿಲ್ಲ. ಬ್ರೈನ್‌ಗೆ ಸಂದೇಶ ರವಾನಿಸೋದೇ ಈ ನ್ಯೂರಾನ್‌. ಇದರಿಂದಲೇ ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಇವತ್ತಿನ ಜನರೇಷನ್‌ಗೆ ಬೇಕಾದ ಅಂಶಗಳೊಂದಿಗೆ ಈ ಚಿತ್ರ ಮಾಡಲಾಗಿದೆ. ಸಕಲೇಶಪುರ, ಮಡಿಕೇರಿ, ಬೆಂಗಳೂರು, ಗೋವಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಯುವ ಈ ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಇನ್ನುಳಿದಂತೆ ನೇಹಾ ಪಾಟೀಲ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವೈಷ್ಣವಿ ಮೆನನ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಜೈಜಗದೀಶ್‌, ಶಿಲ್ಪಾ ಶೆಟ್ಟಿ, ವರ್ಷ, ಅರಂದ್‌ ರಾವ್‌, ಕಬೀರ್‌ ಸಿಂಗ್‌, ರಾಕ್‌ಲೈನ್‌ ಸುಧಾಕರ್‌, ಕಾರ್ತಿಕ್‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಗುರುಕಿರಣ್‌ ಸಂಗೀತವಿರುವ ಈ ಚಿತ್ರಕ್ಕೆ ಹೈದರಾಬಾದ್‌ನ ಶೋಯೆಬ್‌ ಅಹಮದ್‌ ಛಾಯಾಗ್ರಹಣ, ಶ್ರೀಧರ್‌ ಸಂಕಲನ, ಥ್ರಿಲ್ಲರ್‌ ಮಂಜು ಸಾಹಸ ಹಾಗೂ ಶಿವಕುಮಾರ್‌ ಅವರ ಕಲಾ ನಿರ್ದೇಶನವಿದೆ.

Advertisement

Udayavani is now on Telegram. Click here to join our channel and stay updated with the latest news.

Next