ಮುಂಚೆಲ್ಲಾ ಒಂದು ಮಾತಿತ್ತು: ಚಂದ್ರನ ಮೇಲೆ ಹೋದರೂ, ಅಲ್ಲಿ ಟೀಗೆ ಮೋಸವಿಲ್ಲ ಅಂತ. ಏಕೆಂದರೆ, ಮಲಯಾಳಿಗಳು ಯಾವುದೋ ರಾಕೆಟ್ ಹತ್ತಿಕೊಂಡು ಬಂದು, ಅಲ್ಲಿ ಚಾಯ್ ಚಾಯ್ ಅಂತ ಟೀ ಮಾರುತ್ತಿರುತ್ತಾರೆ ಎಂಬ ಜೋಕ್ ಇತ್ತು. ಈಗ ಅದಕ್ಕೆ ಇನ್ನಷ್ಟು ಸೇರಿಸುವುದಾದರೆ, ಪಕ್ಕದಲ್ಲೇ ಗೋಬಿ ಮಂಚೂರಿ ಗಾಡಿಯೊಂದಿರುತ್ತದೆ. ಆ ಮಟ್ಟಿಗೆ ಚೈನೀಸ್ ಫುಡ್ ಜನಪ್ರಿಯವಾಗಿದೆ. ಒಂದು ಪಕ್ಷದಲ್ಲಿ ಚೀನಾದಲ್ಲಿ ಚೈನೀಸ್ ಖಾದ್ಯಗಳು ಸಿಗದಿರಬಹುದು. ಆದರೆ, ಭಾರತದಲ್ಲಿ ಮಾತ್ರ ಮೋಸವಿಲ್ಲ. ಪ್ರತಿ ಏರಿಯಾದಲ್ಲೂ ಗೋಬಿ, ನೂಡಲ್ಸ್, ಫ್ರೈಡ್ ರೈಸ್ ಮಾರುವ ಅಂಗಡಿ, ಗಾಡಿ, ಹೋಟಲ್, ರೆಸ್ಟೋರೆಂಟ್ ಏನಾದರೂ ಇದ್ದೇ ಇರುತ್ತದೆ. ಆ ಮಟ್ಟಿಗೆ ಚೈನೀಸ್ ಫುಡ್ ಇಲ್ಲಿ ಜನಪ್ರಿಯವಾಗಿದೆ. ಈಗ ಇಡ್ಲಿ, ದೋಸೆ, ಚಟ್ನಿಗಳಿಗೆ ಫೇಮಸ್ ಆಗಿರುವ ಬಸವನಗುಡಿಯಲ್ಲೊಂದು ಪಕ್ಕಾ ಚೈನೀಸ್ ಹೋಟೆಲ್‌ವೊಂದು ಕಳೆದ ಕೆಲವು ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದೆ. ಅದರ ಹೆಸರು ಚೈನೀಸ್ ಸ್ಕ್ವೇರ್.
ರಸ್ತೆಗೊಂದು ಗೋಬಿ ಮಂಚೂರಿ ಗಾಡಿ ಸಿಗುತ್ತದೆ ಈಗ. ಅಲ್ಲಿ ತಿನ್ನೋಕೆ ಭಯ. ಸ್ವಲ್ಪ ದೊಡ್ಡ ಹೋಟೆಲ್‌ಗೆ ಹೋಗೋಣ ಅಂದರೆ, ಅಲ್ಲಿ ರೇಟು ಜಾಸ್ತಿ. ಹೀಗೆಲ್ಲಾ ಇರುವಾಗ ಚೈನೀಸ್ ಫುಡ್ ತಿನ್ನೋದು ಕಷ್ಟ ಎಂಬ ತೀರ್ಮಾನಕ್ಕೆ ಬಂದು ಬಿಡಬೇಡಿ. ಆ ಕಡೆ ಆರಕ್ಕೂ ಏರದ, ಈ ಕಡೆ ಮೂರಕ್ಕೂ ಇಳಿಯದ ಒಂದು ಚೈನೀಸ್ ಜಾಯಿಂಟ್ ಇದೆ. ಹೆಸರು ಚೈನೀಸ್ ಸ್ಕ್ವೇರ್ ಅಂತ. ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಬಸ್‌ಸ್ಟಾಂಡ್ ಹಿಂಭಾಗದಲ್ಲೇ ಈ ಚೈನೀಸ್ ಸ್ಕ್ವೇರ್ ಇದೆ. ಈ ಚೈನೀಸ್ ಸ್ಕ್ವೇರ್‌ನ ವಿಶೇಷತೆಯೆಂದರೆ, ಕಡಿಮೆ ಬೆಲೆಯ ಆರೋಗ್ಯಕರ ಚೈನೀಸ್ ಫುಡ್.
ಚೈನೀಸ್ ಫುಡ್ ಎಂದರೆ ಸಾಕು, ಮೊದಲು ನೆನಪಿಗೆ ಬರುವ ಖಾದ್ಯಗಳೆಂದರೆ ಗೋಬಿ, ನೂಡಲ್ಸ್ ಮತ್ತು ಫ್ರೈಡ್ ರೈಸ್. ಈ ಮೂರು ಶೈಲಿಗಳು ಚೈನೀಸ್ ಫುಡ್‌ನ ಆಧಾರಸ್ತಂಭಗಳೆಂದರೆ ತಪ್ಪಲ್ಲ. ಈ ಮೂರು ಶೈಲಿಯಲ್ಲೇ ಹಲವಾರು ಖಾದ್ಯಗಳನ್ನು ಇಲ್ಲಿ ಮಾಡಿಕೊಡಲಾಗುತ್ತದೆ.
ಪ್ರಮುಖವಾಗಿ ಇಲ್ಲಿ ಸೂಪ್‌ನಲ್ಲಿ ಐದು ತರಹದ ಸೂಪ್‌ಗ್ಳಿವೆ. ಹಾಟ್ ಆ್ಯಂಡ್ ಸೌರ್, ಸ್ವೀಟ್ ಕಾರ್ನ್, ವೆಜ್ ಮಂಚೂರಿ, ವೆಜ್ ಕ್ಲಿಯರ್ ಮತ್ತು ಯಮ್ಮಿ ಟೊಮೇಟೋ ಸೂಪ್‌ಗ್ಳು ಇಲ್ಲಿ ಸಿಗುತ್ತವೆ. ಈ ಸೂಪ್‌ಗ್ಳಲ್ಲಿ ಯಾವುದನ್ನೇ ತೆಗೆದುಕೊಂಡರೂ 15 ರೂಪಾಯಿ ಮಾತ್ರ. ಇನ್ನು ವೆಜ್ ಫ್ರೈಡ್ ರೈಸ್ ಜೊತಗೆ ಪನ್ನೀರ್ ಫ್ರೈಡ್ ರೈಸ್, ಮಶ್ರೂಮ್ ಫ್ರೈಡ್ ರಸ್ ಮತ್ತು ಸಿಜುವಾನ್ ಫ್ರೈಡ್ ರೈಸ್ ರೈಸ್ ಐಟಂಗಳೂ ಇಲ್ಲಿ ಸಿಗುತ್ತವೆ. ನೂಡಲ್ಸ್‌ನಲ್ಲೂ ಅಷ್ಟೇ. ನಾಲ್ಕು ವಿಧ. ವೆಜ್ ನೂಡಲ್ಸ್, ಪನ್ನೀರ್ ನೂಡಲ್ಸ್, ಮಶ್ರೂಮ್ ನೂಡಲ್ಸ್ ಮತ್ತು ಸಿಜುವಾನ್ ನೂಡಲ್ಸ್ ಈ ಚೈನೀಸ್ ಸ್ಕ್ವೇರ್‌ನ ಸ್ಪೆಷಾಲಿಟಿ. ರೈಸ್ ಮತ್ತು ನೂಡಲ್ಸ್‌ನಲ್ಲಿ 40 ರೂಪಾಯಿಗಳಿಂದ ಶುರುವಾಗಿ, 70ರವರೆಗೂ ಹಲವು ಖಾದ್ಯಗಳು ಸಿಗುತ್ತವೆ.
ಇವೆಲ್ಲಾ ಮೇಯ್ನ ಮೆನು ಕಥೆ. ಸ್ಟಾರrರ್ನಲ್ಲಿ ಗೋಬಿ ಮಂಚೂರಿಯನ್, ಗೋಬಿ ಚಿಲ್ಲಿ, ಪನ್ನೀರ್ ಮಂಚೂರಿಯನ್, ಪನ್ನೀರ್ ಚಿಲ್ಲಿ, ಬೇಬಿ ಕಾರ್ನ್ ಮಂಚೂರಿಯನ್, ಬೇಬಿ ಕಾರ್ನ್ ಚಿಲ್ಲಿ, ಫಿಂಗರ್ ಚಿಪ್ಸ್ ಮತ್ತು ವೆಜ್ ಸ್ಪ್ರಿಂಗ್‌ಗಳು ಇಲ್ಲಿಯ ಸ್ಪೆಷಾಲಿಟಿ. ಇದರ ಜೊತೆಗೆ ಫ್ರೆಶ್ ಚೂÂಸ್‌ಗಳು, ಮಿಲ್ಕ್ಶೇಕ್‌ಗಳು ಸಿಗುತ್ತವೆ.
ಚೈನೀಸ್ ಫುಡ್ ಬೇಕೆಂದರೆ, ಅದರಲ್ಲೂ ನಿಮ್ಮ ಮನೆ ನೆಟ್ಟಕಲ್ಲಪ್ಪ ಸರ್ಕಲ್ ಆಸುಪಾಸಿನಲ್ಲೇಲಾದರೂ ಇದ್ದರೆ, ಒಮ್ಮೆ ಚೈನೀಸ್ ಸ್ಕ್ವೇರ್ ಟ್ರೈ ಮಾಡಿ ಬನ್ನಿ.