ಮುಬೈ : ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್‌ಲಿಫ್ಟರ್ ಮೀರಾಬಾಯ್ ಚಾನು ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ.
ಚಾನು ಅವರನ್ನು ಭೇಟಿ ಮಾಡಿರುವ ಕುರಿತು ಟ್ವೀಟ್ ಮಾಡಿರುವ ಸಲ್ಲು ಭಾಯ್, “ಬೆಳ್ಳಿ ಪದಕ ವಿಜೇತೆ ನಿಮ್ಮನ್ನು ಭೇಟಿಯಾಗಿದ್ದು ಬಹಳ ಸಂತಸವಾಗಿದೆ.. ನನ್ನ ಹಾರೈಕೆಗಳು ನಿಮ್ಮಂದಿಗೆ ಸದಾ ಇರಲಿವೆ!” ಎಂದಿದ್ದಾರೆ.
ಇನ್ನು ಸಲ್ಮಾನ್ ಖಾನ್ ಅವರ ಟ್ವೀಟ್ ಫೋಸ್ಟ್ ಗೆ ಪ್ರತಿಕ್ರಿಯಿಸಿದ ಚಾನು, ನಾನು ಮೊದಲಿನಿಂದಲೂ ನಿಮ್ಮ ದೊಡ್ಡ ಅಭಿಮಾನಿ. ನಿಮ್ಮನ್ನು ಭೇಟಿ ಮಾಡುವ ಮೂಲಕ ನನ್ನ ಬಹುದಿನದ ಕನಸು ನನಸಾಗಿದೆ ಎಂದು ಹೇಳಿದ್ದಾರೆ.
Related Articles
ಗಮನ ಸೆಳೆದ ಸಲ್ಮಾನ್ ಶಾಲ್ :
ಇನ್ನು ಚಾನು ಜೊತೆಗಿನ ಫೋಟೊದಲ್ಲಿ ಸಲ್ಮಾನ್ ಖಾನ್ ಕೊರಳಿನಲ್ಲಿ ಧರಿಸಿದ ಶಾಲ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಫಿಕ್ ಆಗಿದೆ. ಈ ಶಾಲ್ ನಲ್ಲಿ ಕೃಷ್ಣಮೃಗದ ಚಿತ್ರ ಇರುವುದು ಗಮನ ಸೆಳೆದಿದೆ. ಇದನ್ನು ಸಲ್ಮಾನ್ ಅವರಿಗೆ ಚಾನು ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ. ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಡಿ ಸಲ್ಮಾನ್ ಖಾನ್ ಜೈಲಿಗೆ ಹೋಗಿ ಬಂದಿದ್ದನ್ನು ಉಲ್ಲೇಖಿಸಿರುವ ನೆಟ್ಟಿಜನ್, ಚಾನು ಅವರಿಗೆ ಧನ್ಯವಾದ ಹೇಳುತ್ತಿದ್ದಾರೆ ಜೊತೆಗೆ ಸಲ್ಮಾನ್ ಖಾನ್ ಅವರನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ.
ಇತ್ತೀಚಿಗೆ ನಡೆದ ಟೋಕಿಯೋ ಒಲಿಂಪಿಕ್ಸ್ ನಲ್ಲಿ ವೇಟ್‌ಲಿಫ್ಟಿಂಗ್ ಶಿಸ್ತಿನ ಮಹಿಳೆಯರ ವಿಭಾಗದ 49 ಕೆಜಿ ಕೆಟಗರಿಯಲ್ಲಿ ಮೀರಾಬಾಯ್ ಬೆಳ್ಳಿ ಪದಕ ಜಯಿಸಿದ್ದರು.
ಇನ್ನು ಸಲ್ಮಾನ್ ಖಾನ್ ಅವರು ನಟಿಸಿದ್ದ ರಾಧೆ ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ಆದರೆ, ಅಭಿಮಾನಿಗಳ ಮನ ಗೆಲ್ಲುವಲ್ಲಿ ಈ ಸಿನಿಮಾ ಸೋತಿತು. ಸದ್ಯ ಅವರು ಕಿಕ್ 2 ಚಿತ್ರಕ್ಕೆ ಸಜ್ಜಾಗುತ್ತಿದ್ದು, ಇದರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಾಯಕಿಯಾಗಿ ನಟಿಸಲಿದ್ದಾರೆ.