Advertisement

Kannada Cinema; ಹೊಸಬರ ‘ನೇತ್ರಂ’ ತೆರೆಗೆ ಸಿದ್ಧ

02:30 PM Oct 11, 2023 | Team Udayavani |

ಹೊಸಬರೇ ಸೇರಿ ಮಾಡಿರುವ “ನೇತ್ರಂ’ ಸಿನಿಮಾ ಬಿಡುಗಡೆ ಹಂತಕ್ಕೆ ಬಂದಿದೆ. ಚಿತ್ರ ನವೆಂಬರ್‌ 17ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಯುವ ನಟ ದಕ್ಷ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ.

Advertisement

ಮಕ್‌ದುಮ್‌ ಪಟೇಲ್‌, ಶೇಕ್‌ ಸಬೀರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಬಿಲ್ಲೂರ ಸುರೇಶ್‌ ನಿರ್ದೇಶಿಸಿದ್ದಾರೆ. ಇದೊಂದು ಕಣ್ಣುಗಳ ಮಹತ್ವ ಸಾರುವ ಅಂಶದ ಜೊತೆಗೆ ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ನಲ್ಲಿ ಈ ಚಿತ್ರ ಸಾಗುತ್ತದೆ. ಮಡಿಕೇರಿ, ಬೆಂಗಳೂರು, ಚಿಂತಾಮಣಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ನೇತ್ರಂ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬರುತ್ತಿದ್ದು, ಒಟ್ಟು ಮೂರು ಹಾಡುಗಳು ಹಾಗೂ ಭರ್ಜರಿ ಆ್ಯಕ್ಷನ್‌ ದೃಶ್ಯಗಳಿದ್ದು, ಸೆನ್ಸಾರ್‌ನಿಂದ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಸಿಕ್ಕಿದೆ.

“ಇದು ನನ್ನ ಮೊದಲ ಚಿತ್ರ. ನಿರ್ದೇಶಕರು ಹಾಗು ನಾನು ಇಬ್ಬರೂ ಗೆಳೆಯರು. ಈಗ ಅವರ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದೇನೆ. ಚಿತ್ರದಲ್ಲಿ ಆ್ಯಕ್ಷನ್‌, ಲವ್‌, ಸೆಂಟಿಮೆಂಟ್‌ ಎಲ್ಲಾ ಅಂಶಗಳಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎಂದರು. ಚಿತ್ರದಲ್ಲಿ ಮೂವರು ನಾಯಕಿಯರು. ನಾಯಕಿ ಧನುಶ್ರೀ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು

Advertisement

Udayavani is now on Telegram. Click here to join our channel and stay updated with the latest news.

Next