ದುಬೈ: ನೆದರ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ರಿಯಾನ್ ಟೆನ್ ಡೆಶ್ಕೋಟ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಶುಕ್ರವಾರ ಶ್ರೀಲಂಕಾ ವಿರುದ್ದದ ಪಂದ್ಯದ ಬಳಿಕ ನೆದರ್ಲೆಂಡ್ ಆಲ್ ರೌಂಡರ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ನೆರರ್ಲೆಂಡ್ ತಂಡ ಸೂಪರ್ 12 ಹಂತ ತಲುಪಲು ವಿಫಲವಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ಟೆನ್ ಡೆಶ್ಕೋಟ್ ಅಂತಿಮ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ.
ಇದನ್ನೂ ಓದಿ:ಬುಮ್ರಾ ಮತ್ತು ಶಾಹಿನ್ ಅಫ್ರಿದಿ ನಡುವಿನ ಹೋಲಿಕೆ ಮೂರ್ಖತನ: ಆಮಿರ್
“ವಿದಾಯ ಘೋಷಣೆ ಮಾಡಲು ಇದು ಸರಿಯಾದ ಕೂಟವಲ್ಲ. ಆದರೆ ನಮ್ಮ ಪ್ರಯತ್ನದ ಬಗ್ಗೆ ಹೆಮ್ಮೆಯಿದೆ. ಆದರೆ ನೆದರ್ಲೆಂಡ್ ತಂಡವನ್ನು ಪ್ರತಿನಿಧಿಸಲು ಯಾವಾಗಲು ಹೆಮ್ಮೆಯಿದೆ” ಎಂದು ರಿಯಾನ್ ಟೆನ್ ಡೆಶ್ಕೋಟ್ ಹೇಳಿದರು.
41 ವರ್ಷದ ರಿಯಾನ್ ಟೆನ್ ಡೆಶ್ಕೋಟ್ ಅವರು ನೆದರ್ಲೆಂಡ್ ಪರ 33 ಏಕದಿನ ಮತ್ತು 24 ಟಿ20 ಪಂದ್ಯಗಳಲ್ಲಿ ಆಡಿದ್ದರು. ಐಪಿಎಲ್ ನಲ್ಲೂ ಆಡಿದ್ದ ರಿಯಾನ್ ಟೆನ್ ಡೆಶ್ಕೋಟ್ ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡಿದ್ದರು.