ನವದೆಹಲಿ: ಸಿನಿಮಾ, ವೆಬ್ ಸೀರಿಸ್ ಮೂಲಕ ಜಾಗತಿಕವಾಗಿ ಜನಪ್ರಿಯತೆ ಪಡೆದ ನೆಟ್ ಫ್ಲಿಕ್ಸ್ ಇದೀಗ ಭಾರತೀಯ ಬಳಕೆದಾರರನ್ನು ಆಕರ್ಷಿಸಲು ಹೊಸ ಸೇವೆಯೊಂದನ್ನು ಪರಿಚಯಿಸುತ್ತಿದೆ. ಇದನ್ನು ಸ್ಟ್ರೀಮ್ ಫೆಸ್ಟ್ (Stream Fest) ಎಂದೇ ಕರೆಯಲಾಗಿದ್ದು, ವಾರಾಂತ್ಯದಲ್ಲಿ ಉಚಿತವಾಗಿ ನೆಟ್ ಫ್ಲಿಕ್ಸ್ ವೀಕ್ಷಿಸಿ ಮನರಂಜನೆ ಪಡೆಯಬಹುದಾಗಿದೆ.
48 ಗಂಟೆಗಳ ಮೊದಲ ಉಚಿತ ಸೇವೆ ಡಿಸೆಂಬರ್ 4 ರಿಂದ ಆರಂಭವಾಗಲಿದೆ. ಆ ಮೂಲಕ ಭಾರತೀಯ ಬಳಕೆದಾರರನ್ನು ವಾರಾಂತ್ಯದಲ್ಲಿ ಸೆಳೆಯಲು ನೆಟ್ ಫ್ಲಿಕ್ಸ್ ತಂತ್ರ ರೂಪಿಸುತ್ತಿದೆ. ವರದಿಗಳ ಪ್ರಕಾರ ಮೊದಲ ವಾರಾಂತ್ಯ ಮಾತ್ರ ನೆಟ್ ಫ್ಲಿಕ್ಸ್ ಉಚಿತವಾಗಿರಲಿದ್ದು, ನಂತರದಲ್ಲಿ ಬಳಕೆದಾರರರ ಪ್ರತಿಕ್ರಿಯೆ ಗಮನಿಸಿ ಉಚಿತ ಸೇವೆ ಮುಂದುವರಿಸುವ ಕುರಿತು ತೀರ್ಮಾನವಾಗಲಿದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ನೆಟ್ ಫ್ಲಿಕ್ಸ್ ಕಡೆಗೆ ಹೆಚ್ಚಿನ ಬಳಕೆದಾರರು ಇನ್ನೂ ಆಕರ್ಷಿತರಾಗಿಲ್ಲ. ಹೀಗಾಗಿ ಹೆಚ್ಚಿನ ಜನರನ್ನು ಸೆಳೆಯಲು ಈ ಯೋಜನೆ ರೂಪಿಸಲಾಗಿದೆ. ಇತ್ತೀಚಿಗಷ್ಟೇ ನೆಟ್ ಫ್ಲಿಕ್ಸ್ ಸಂಸ್ಥೆ ಅಮೆರಿಕಾದಲ್ಲಿ ನೀಡುತ್ತಿದ್ದ ಉಚಿತ ಸೇವೆಯನ್ನು ರದ್ದುಪಡಿಸಿತ್ತು.
ಇದನ್ನೂ ಓದಿ: ಗುಡ್ ನ್ಯೂಸ್: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕೆಜಿಎಫ್-2 ಅಧೀರ “ಸಂಜಯ್ ದತ್”
ಜಾಗತಿಕವಾಗಿ ಹೆಚ್ಚಿನ ಬಳಕೆದಾರರನ್ನು ಸೆಳೆಯಲು ಹೊಸ ಮಾರ್ಗ ಅನುಸರಿಸಲಾಗುತ್ತಿದೆ. ಅದರಂತೆ ಭಾರತದಲ್ಲೂ ಉಚಿತವಾಗಿ ನೆಟ್ ಫ್ಲಿಕ್ಸ್ ಮೂಲಕ ಜನರಿಗೆ ಮನೋರಂಜನೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಾತ್ರವಲ್ಲದೆ ಡಿಸ್ನಿ-ಹಾಟ್ ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಇತರ ಒಟಿಟಿ (ಓವರ್ ದ ಟಾಪ್) ಫ್ಲ್ಯಾಟ್ ಫಾರ್ಮ್ ಗಳಿಗೆ ಪೈಪೋಟಿ ನೀಡುವತ್ತ ಗಮನಹರಿಸಲಾಗಿದೆ ಎಂದು ನೆಟ್ ಫ್ಲಿಕ್ಸ್ ಸಿಓಓ ಮತ್ತು ಪ್ರೋಡಕ್ಟ್ ಆಫೀಸರ್ ಗ್ರೆಗ್ ಪೀಟರ್ಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ 2020: ಮೊದಲ ಹಂತದಲ್ಲಿ ಶೇ.31ರಷ್ಟು ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳು!
ಭಾರತದಲ್ಲಿ ಪ್ರತಿಯೊಬ್ಬರಿಗೆ ವಾರಾಂತ್ಯದಲ್ಲಿ ಉಚಿತವಾಗಿ ನೆಟ್ ಫ್ಲಿಕ್ಸ್ ವೀಕ್ಷಿಸಲು ಅವಕಾಶ ನೀಡಲಾಗುವುದು. ಇದರಿಂದ ಬಳಕೆದಾರರಿಗೆ ನೆಟ್ ಫ್ಲಿಕ್ಸ್ ನೀಡುವ, ಸಿನಿಮಾ, ವೆಬ್ ಸೀರಿಸ್ ಸೇರಿದಂತೆ ಇತರ ಅದ್ಭುತ ಮನೋರಂಜನಾ ವಿಚಾರಗಳ ಬಗ್ಗೆ ತಿಳಿಯುತ್ತದೆ. ತದನಂತರದಲ್ಲಿ ಬಳಕೆದಾರರಿಗೆ ಮೆಚ್ಚುಗೆಯಾದರೇ ಸೈನ್ ಅಪ್ ಆಗಬಹುದು. ಆದರೇ ಈಗಾಗಲೇ ಸಬ್ ಸ್ಕ್ರೈಬ್ ಆಗಿರುವವರಿಗೆ ಈ ಉಚಿತ ಸೇವೆ ಲಭ್ಯವಿಲ್ಲ. ಈವರೆಗೂ ಅಕೌಂಟ್ ಹೊಂದಿಲ್ಲದವರಿಗೆ ಮಾತ್ರ ಈ ಸೇವೆ ದೊರಕಲಿದೆ ಎಂದು ಗ್ರೇಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಎಫೆಕ್ಟ್:ಆಂಧ್ರಪ್ರದೇಶದಲ್ಲಿ 27 ವಿದ್ಯಾರ್ಥಿಗಳಿಗೆ ಸೋಂಕು ದೃಢ, 4 ಶಾಲೆ ಮತ್ತೆ ಬಂದ್