Advertisement

ಕಾರಣಿಕ ಕ್ಷೇತ್ರ ನೆರೂಲ್‌ ಶ್ರೀ ಶನೀಶ್ವರ ಮಂದಿರ: ಅದ್ದೂರಿ ರಥೋತ್ಸವ

11:08 AM Feb 11, 2022 | Team Udayavani |

ನವಿಮುಂಬಯಿ: ನೆರೂಲ್‌ ಸೆಕ್ಟರ್‌ – 11ರಲ್ಲಿರುವ ಕಾರಣಿಕ ಕ್ಷೇತ್ರ ಶ್ರೀ ಶನೀಶ್ವರ ಮಂದಿರ ನೆರೂಲ್‌ ಇದರ ರಥೋತ್ಸವ ಹಾಗೂ 30ನೇ ವಾರ್ಷಿಕೋತ್ಸವ ಸಂಭ್ರಮವು ಫೆ. 7ರಂದು ಪ್ರಾರಂಭ ಗೊಂಡಿದ್ದು, ಫೆ. 11ರ ವರೆಗೆ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಯಾಗಿ ಜರಗಲಿದೆ.

Advertisement

ಶ್ರೀ ಮಹಾಗಣಪತಿ, ಶ್ರೀ ಹನುಮಾನ್‌, ಶ್ರೀ ಶನಿದೇವರ ಮಂದಿರದಲ್ಲಿ ಧಾರ್ಮಿಕ ಕಾರ್ಯ ಕ್ರಮವಾಗಿ ಮಂದಿರದ ಪ್ರಧಾನ ಅರ್ಚಕ ಸೂರಜ್‌ ಭಟ್‌ ಮತ್ತು ಕಳತ್ತೂರು ಉದಯ ತಂತ್ರಿಯವರ ಪೌರೋಹಿತ್ಯದಲ್ಲಿ ಫೆ. 10ರಂದು ಮಂದಿರದ ರಥೋತ್ಸವ ನಡೆ ಯಿತು. ಮುಂಜಾನೆ 6ರಿಂದ ಕವಾಟೋದ್ಘಾಟನೆ, ನವಕ ಪ್ರಧಾನ ಹವನ, ಬೆಳಗ್ಗೆ 11ರಿಂದ ಮಹಾಪೂಜೆ, ಬಲಿ, ರಥಾರೋಹಣ, ಪಲ್ಲಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ತುಳು – ಕನ್ನಡಿಗರು ಸಹಿತ ನೂರಾರು ಭಕ್ತರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ಪ್ರಸಾದ ಸ್ವೀಕರಿಸಿ ಶನಿದೇವರ ಕೃಪೆಗೆ ಪಾತ್ರರಾದರು. ಸಂಜೆ 6ರಿಂದ ಬಲಿ ಉತ್ಸವ, ಅವಭೃಥ ಸ್ನಾನ, ರಾತ್ರಿ 8ರಿಂದ ಮಂಗಳಾರತಿ, ಅನ್ನಪ್ರಸಾದ ವಿತರಣೆ ನೆರವೇರಿತು.

ಈ ಸಂದರ್ಭದಲ್ಲಿ  ಶ್ರೀ ಶನೇಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್‌ ಡಿ. ಶೆಟ್ಟಿ, ಅಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ, ಉಪಾಧ್ಯಕ್ಷ ಗೋಪಾಲ ವೈ. ಶೆಟ್ಟಿ, ಕಾರ್ಯದರ್ಶಿ ವಿ. ಕೆ. ಸುವರ್ಣ, ಜತೆ ಕಾರ್ಯದರ್ಶಿ ಜಯಕರ ಬಿ. ಪೂಜಾರಿ, ಕೋಶಾಧಿಕಾರಿ ವಿಶ್ವನಾಥ್‌ ಕೆ. ಪೂಜಾರಿ, ಜತೆ ಕೋಶಾಧಿಕಾರಿ ಅದ್ಯಪಾಡಿಗುತ್ತು ಕರುಣಾಕರ್‌ ಎಸ್‌. ಆಳ್ವ, ವಿಶ್ವಸ್ತರಾದ ಎನ್‌. ಡಿ. ಶೆಣೈ, ಪುನೀತ್‌ ಕುಮಾರ್‌ ಆರ್‌. ಶೆಟ್ಟಿ, ಪ್ರಭಾಕರ್‌ ಎಸ್‌. ಹೆಗ್ಡೆ, ಅನಿಲ್‌ ಕುಮಾರ್‌ ಹೆಗ್ಡೆ, ಕೃಷ್ಣ ಎಂ. ಪೂಜಾರಿ, ದಾಮೋದರ್‌ ಶೆಟ್ಟಿ, ದಯಾನಂದ್‌ ಶೆಟ್ಟಿ, ತಾರಾನಾಥ ಶೆಟ್ಟಿ, ಸಲಹೆಗಾರ ಸಮಿತಿಯ ಪ್ರಕಾಶ್‌ ಭಂಡಾರಿ, ಕೆ. ಡಿ. ಶೆಟ್ಟಿ, ಸದಾನಂದ ಡಿ. ಶೆಟ್ಟಿ, ಎನ್‌. ಕೆ. ಪೂಜಾರಿ, ಜಯರಾಮ್‌ ಪೂಜಾರಿ, ಕೃಷ್ಣ ಆರ್‌. ಕೋಟ್ಯಾನ್‌, ಪ್ರಧಾನ ಅರ್ಚಕರಾದ ಸೂರಜ್‌ ಭಟ್ಟ ಹಾಗೂ ವೃಂದ, ಭಜನ ಮಂಡಳಿ ಅಧ್ಯಕ್ಷ ಜಯರಾಮ್‌ ಪೂಜಾರಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸ್ವರ್ಣಲತಾ ಡಿ. ಶೆಟ್ಟಿ, ಪೂಜಾ ಸಮಿತಿ, ಮಹಿಳಾ ವಿಭಾಗ ಹಾಗೂ ಆಡಳಿತ ಸಮಿ ತಿಯ ಸದಸ್ಯರು, ವಿವಿಧ ನಗರ, ಉಪನಗರಗಳ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

ಫೆ. 7ರಂದು ಬೆಳಗ್ಗೆ 9ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಸ್ವಸ್ತಿ ಪುಣ್ಯಾಹ ವಾಚನ, ದ್ವಾದಶ ನಾಳಿಕೇರ ಗಣಪತಿಯಾಗ, ಮುಖ್ಯಪ್ರಾಣ ದೇವರಿಗೆ ನವಕ ಪ್ರಧಾನ ಹವನ, ಅಪರಾಹ್ನ 2ರಿಂದ ಸಂಪೂರ್ಣ ಶ್ರೀ ಶನೀಶ್ವರ ಮಹಾತ್ಮೆ ಗ್ರಂಥ ಪಾರಾಯಣ, ರಾತ್ರಿ 9ರಿಂದ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು.

ಫೆ. 8ರಂದು ಬೆಳಗ್ಗೆ 9ರಿಂದ ಶ್ರೀ ಮಹಾಗಣಪತಿ ದೇವರಿಗೆ ನವಕ ಪ್ರಧಾನ ಹವನ, ಶ್ರೀ ಶನೀಶ್ವರ ದೇವರಿಗೆ ನವಕ ಪ್ರದಾನ ಹವನ, ರಾತ್ರಿ 8ರಿಂದ ಶ್ರೀ ಮಹಾಗಣಪತಿ ಹಾಗೂ ಶ್ರೀ ವೀರಾಂಜನೇಯ  ಸ್ವಾಮಿಗೆ ರಂಗಪೂಜೆ, ಬಲಿ ಉತ್ಸವ ನಡೆಯಿತು. ಫೆ. 9ರಂದು ಬೆಳಗ್ಗೆ 9ರಿಂದ ಶ್ರೀ ಮುಖ್ಯಪ್ರಾಣ ಸ್ವಾಮಿಗೆ ವಾಯುಸ್ತುತಿ ಪುನಃಶ್ಚರಣ ಹವನ, ಸಗ್ರಹಮಕ ಶನಿ ಶಾಂತಿ ಹವನ, ಅಪರಾಹ್ನ 4ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ರಾತ್ರಿ 8ರಿಂದ ಬಲಿ ಉತ್ಸವ, ಕವಾಟ ಬಂಧನ ಜರಗಿತು.  ಫೆ. 11ರಂದು ಬೆಳಗ್ಗೆ 9ರಿಂದ ನವಕ ಪ್ರಧಾನ ಹವನ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ತೀರ್ಥ ಪ್ರಸಾದ ವಿತರಣೆ ಜರಗಲಿದೆ.

Advertisement

ಚಿತ್ರ-ವರದಿ: ಸುಭಾಷ್‌ ಶಿರಿಯ

Advertisement

Udayavani is now on Telegram. Click here to join our channel and stay updated with the latest news.

Next