ನವಿ ಮುಂಬಯಿ: ನೆರೂಲ್‌ನಲ್ಲಿ ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದಲ್ಲಿ ಶಾಶ್ವತ ಪೂಜಾ ನಿಧಿಯ ಉದ್ಘಾಟನೆಯು ಮಾ. 7ರಂದು ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಪಂಚಾಮೃತ ಅಭಿಷೇಕ, 49 ಕಲಶಾಧಿವಾಸ, ಪ್ರಧಾನ ಹೋಮ, ಪ್ರಧಾನ ಕಲಶ ಸಹಿತ ಪರಿಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಅಪರಾಹ್ನ ಭಜನ ಕಾರ್ಯಕ್ರಮ ಹಾಗೂ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರಿಂದ ಸತಿ ಸಾವಿತ್ರಿ ಹರಿಕಥಾ ಕಾಲಕ್ಷೇಪವು ತುಳುವಿನಲ್ಲಿ ನಡೆಯಿತು. ರಾತ್ರಿ ಶ್ರೀ ರಂಗಪೂಜೆ ಹಾಗೂ ಮಹಾಮಂಗಳಾರತಿ, ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ಏಳ್ಗೆಯ ದೃಷ್ಟಿಯಿಂದ ಭಕ್ತಾದಿಗಳ ಆಪೇಕ್ಷೆಯ ಮೇರೆಗೆ ಶಾಶ್ವತ ಪೂಜಾ ನಿಧಿಯನ್ನು ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರು ಉದ್ಘಾಟಿಸಿ, ಸ್ವತಃ ನಿಧಿಗೆ ಚಾಲನೆ ನೀಡಿ ಶುಭ ಹಾರೈಸಿದರು. ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಆಶೀರ್ವಚಿಸಿ, ಈ ಶಾಶ್ವತ ಪೂಜಾ ನಿಧಿಯು ಅಕ್ಷಯ ಪಾತ್ರೆಯಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಹರಿಕಥಾ ಕಾಲಕ್ಷೇಪವನ್ನಿತ್ತು ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರನ್ನು ಮಂದಿರದ ವತಿಯಿಂದ ಗೌರವಿಸಲಾಯಿತು.
ನೆರೂಲ್ ಶ್ರೀ ಮಣಿಕಂಠ ಸೇವಾ ಸಂಘಂನ ಕಾರ್ಯಾಧ್ಯಕ್ಷ ಚೆಲ್ಲಡ್ಕ ಕುಸುಮೋದರ ಶೆಟ್ಟಿ, ಅಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಎನ್. ಶೆಟ್ಟಿ, ಉಪಾಧ್ಯಕ್ಷ ದಾಮೋದರ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುಂದರ ಯು. ಪೂಜಾರಿ, ಗೌರವ ಕೋಶಾಧಿಕಾರಿ ಸುರೇಶ್ ಜಿ. ಶೆಟ್ಟಿ, ಜತೆ ಕಾರ್ಯದರ್ಶಿ ಹರಿ ಎಲ್. ಶೆಟ್ಟಿ, ಜತೆ ಕೋಶಾಧಿಕಾರಿ ರಾಜೇಂದ್ರ ಪ್ರಸಾದ್ ಮಾಡ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಎಸ್. ಶೆಟ್ಟಿ, ಟ್ರಸ್ಟಿಗಳಾದ ರವಿ ಆರ್. ಶೆಟ್ಟಿ, ರಿತೇಶ್ ಜಿ. ಕುರುಪು,ಡಾ| ಶಿವ ಮೂಡಿಗೆರೆ, ಪ್ರಕಾಶ್ ಮಹಾಡಿಕ್, ಖಾಂದೇಶ್ ಭಾಸ್ಕರ ಶೆಟ್ಟಿ, ಹರೀಶ್ ಎನ್. ಶೆಟ್ಟಿ, ಮಹೇಶ್ ಡಿ. ಪಟೇಲ್, ನರೇನ್ ಭಾç ಪಟೇಲ್ ಉಪಸ್ಥಿತರಿದ್ದರು.
ಸದಸ್ಯರಾದ ರಾಮಕೃಷ್ಣ ಎಸ್. ಶೆಟ್ಟಿ, ಅಣ್ಣಪ್ಪ ಕೋಟೆಕಾರ್, ಸುರೇಂದ್ರ ಆರ್. ಶೆಟ್ಟಿ, ನಿತ್ಯಾನಂದ ವಿ. ಶೆಟ್ಟಿ, ಸದಾಶಿವ ಎನ್. ಶೆಟ್ಟಿ, ಮೋಹನ್‌ದಾಸ್ ಕೆ. ರೈ, ಮೇಘರಾಜ ಎಸ್. ಶೆಟ್ಟಿ, ಸುರೇಶ್ ಆರ್. ಶೆಟ್ಟಿ, ವಿಶ್ವನಾಥ ಡಿ. ಶೆಟ್ಟಿ, ರಘು ವಿ. ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಉಪಸಮಿತಿಯ ಪದಾಧಿಕಾರಿಗಳು, ಮಹಿಳಾ ಮಂಡಳಿ ಸದಸ್ಯರು, ನೆರೂಲ್ ಶ್ರೀ ಮಣಿಕಂಠ ಸೇವಾ ಸಂಘಂ, ಧರ್ಮಶಾಸ್ತ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ ನವಿಮುಂಬಯಿ ಸದಸ್ಯರು ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಮಾಜ ಸೇವಕರು, ಗಣ್ಯರು ಪಾಲ್ಗೊಂಡಿದ್ದರು.