Advertisement

ಬೆಂಗಳೂರಿನಿಂದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ನೇಪಾಳದ ಮಾಜಿ ಪೊಲೀಸ್ ಸಿಬ್ಬಂದಿ ಬಂಧನ

01:21 PM Jan 21, 2021 | Team Udayavani |

ಬೆಂಗಳೂರು: ಕೆಲಸಕ್ಕಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ನೇಪಾಳಕ್ಕೆ ಪರಾರಿಯಾಗಿದ್ದ ಮಾಜಿ ಪೊಲೀಸ್‌ ಸಿಬ್ಬಂದಿಯಿಂದ ಚಾಮರಾಜಪೇಟೆ ಪೊಲೀಸರು ಚಿನ್ನದ ಬೆಸ್ಕೆಟ್‌ ಮತ್ತು ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ನೇಪಾಳ ಮೂಲದ ತಾಪಾ ಸೂರ್ಯ ಬಹದ್ದೂರ್‌ (30) ಎಂಬಾತನಿಂದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಉದ್ಯಮಿ ಟಿ. ಸೆಲ್ವರಾಜ್‌ ಎಂಬುವರು ಪತ್ನಿ ಮತ್ತು ಪುತ್ರನೊಂದಿಗೆ ಚಾಮರಾಜಪೇಟೆಯ ಮನೆಯಲ್ಲಿ ವಾಸವಾಗಿದ್ದರು. ಈ ಮನೆಗೆ ಸಂಬಂಧಿಸಿದಂತೆ ಸೆಲ್ವರಾಜ್‌ ಮತ್ತು ಅವರ ಸಂಬಂಧಿ ನಡುವೆ ಕೋರ್ಟ್ ನಲ್ಲಿ ವ್ಯಾಜ್ಯವಿದ್ದು, ವಿಚಾರಣೆ ನಡೆಯುತ್ತಿತ್ತು.

ಇದನ್ನೂ ಓದಿ:ಸ್ನೇಹಿತರಿಂದಲೇ ಯುವತಿಗೆ ಬ್ಲ್ಯಾಕ್‌ಮೇಲ್‌: ಮಾಂಗಲ್ಯ ಸರ ನೀಡಿದರೂ ಬಿಡದ ದುರುಳರು

ಆರೋಪಿ ತಾಪಾ ಸೂರ್ಯ ಬಹದ್ದೂರ್‌ ಹತ್ತು ತಿಂಗಳ ಹಿಂದೆ ಅವರ ಮನೆಯಲ್ಲಿ ಸೆಕ್ಯೂ ರಿಟಿ ಗಾರ್ಡ್‌ ಆಗಿ ನೇಮಕಗೊಂಡಿದ್ದ. ನಂತರ ಮನೆಯವರ ವಿಶ್ವಾಸ ಗಳಿಸಿದ್ದರಿಂದ ಆತನಿಗೆ ಮನೆಯ ಎಲ್ಲೆಡೆ ಹೋಗಲು ಅವಕಾಶವಿತ್ತು. ಇದನ್ನೇ ದುರುಪಯೋಗಪಡಿಸಿಕೊಂಡಿರುವ ಆರೋಪಿಯು ಮನೆಯ ಬೀರುವಿನಲ್ಲಿದ್ದ ಸುಮಾರು 62 ಲಕ್ಷ ರೂ. ಮೌಲ್ಯ ದ 1192 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಾನೆ.

Advertisement

ಡಿ.25ರಂದು ನ್ಯಾಯಾಲಯದ ಸೂಚನೆ ಮೇರೆಗೆ ಮನೆ ಖಾಲಿ ಮಾಡುವಾಗ ಬೀರುವಿನಲ್ಲಿದ್ದ ಚಿನ್ನಾಭರಣ ಕಳವಾಗಿರುವುದು ಸೆಲ್ವರಾಜ್‌ ಕುಟುಂಬಕ್ಕೆ ಗೊತ್ತಾಯಿತು. ಅದರಿಂದ ಅನಮಾನಗೊಂಡು ಸೆಕ್ಯೂರಿಟಿ ಗಾರ್ಡ್‌ ವಿಚಾರಿಸಲು ಹೋದಾಗ ಆತ ನಾಪತ್ತೆಯಾಗಿದ್ದ. ಈ ಸಂಬಂಧ ಸೆಲ್ವರಾಜ್‌ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ದ್ವಿವೇದಿಗೆ ಜಾಮೀನು ನೀಡಿದ ಸುಪ್ರೀಂ

ನೇಪಾಳದಲ್ಲಿ ಸೆರೆ: ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಚಾಮರಾಜಪೇಟೆ ಠಾಣಾಧಿಕಾರಿ ಬಿ.ಎಸ್‌.ಲೋಕಾಪುರ ನೇತೃತ್ವದಲ್ಲಿ ತಂಡ ರಚನೆಯಾಗಿತ್ತು. ಆರೋಪಿ ನೇಪಾಳದ ಕಠ್ಮಂಡುಗೆ ಹೋಗಿರುವ ಮಾಹಿತಿ ಪಡೆಯಲಾಗಿತ್ತು. ಅಷ್ಟರಲ್ಲಿ ರಾಮೇಛಾಪ್‌ ಪೊಲೀಸರು ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಈ ಮಾಹಿತಿ ಮೇರೆಗೆ ನೇಪಾಳದ ರಾಯಭಾರ ಕಚೇರಿ ಮತ್ತು ಇಂಟರ್‌ಪೋಲ್‌ ಅಧಿಕಾರಿಗಳ ಜತೆ ಪತ್ರ ವ್ಯವಹಾರ ನಡೆಸಿದ್ದರು. ಅಲ್ಲದೆ, ರಾಮೇ ಭಾಫ್ ಪೊಲೀಸ್‌ ಠಾಣೆಗೂ ಮಾಹಿತಿ ನೀಡಲಾಗಿತ್ತು. ಬಳಿಕ ನೇಪಾಳಕ್ಕೆ ತೆರಳಿದ ಪೊಲೀಸರು ಆರೋಪಿಯಿಂದ ಚಿನ್ನದ ಬೆಸ್ಕೆಟ್ ಗಳು ಮತ್ತು ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು ಎಂದು ಹಿರಿಯ ಪೊಲೀಸರು ಮಾಹಿತಿ ನೀಡಿದರು.

ಪೊಲೀಸ್‌ ಸಿಬ್ಬಂದಿಯಾಗಿದ್ದ ಆರೋಪಿ ತಾಪಾ ಸೂರ್ಯ:  ಆರೋಪಿ ತಾಪಾ ಸೂರ್ಯ ಬಹದ್ದೂರು ಈ ಮೊದಲು ನೇಪಾಳ ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿದ್ದ. ಈ ವೇಳೆ ಕರ್ತವ್ಯ ಲೋಪ ಹಾಗೂ ಇತರೆ ಪ್ರಕರಣವೊಂದರಲ್ಲಿ ಅಮಾನತು ಮಾಡಲಾಗಿತ್ತು. ಆ ಬಳಿಕ ಆರೋಪಿ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದ. ಕಳೆದ ತಿಂಗಳು ನೇಪಾಳಕ್ಕೆ ಹೋಗುತ್ತಿದ್ದಂತೆ ಆರೋಪಿಯನ್ನು ರಾಮೇ ಭಾಫ್ ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next