Advertisement

Nepal T20I Tri-Series: ಟಿ20: ನೆದರ್ಲೆಂಡ್ಸ್‌ಗೆ 2ನೇ ಜಯ

09:17 PM Feb 29, 2024 | Team Udayavani |

ಕೀರ್ತಿಪುರ (ನೇಪಾಳ): ನೇಪಾಳ ತ್ರಿಕೋನ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡವು ನಮೀಬಿಯ ತಂಡವನ್ನು 59 ರನ್ನುಗಳಿಂದ ಸೋಲಿಸಿದೆ. ಇದು ಈ ಸರಣಿಯಲ್ಲಿ ನೆದರ್ಲೆಂಡ್ಸ್‌ ದಾಖಲಿಸಿದ ಎರಡನೇ ಗೆಲುವು ಆಗಿದೆ.

Advertisement

ಆರಂಭಿಕ ಆಟಗಾರ ಮೈಕಲ್‌ ಲೆವಿಟ್‌ ಅವರ 135 ರನ್‌ ನೆರವಿನಿಂದ ನೆದರ್ಲೆಂಡ್ಸ್‌ ತಂಡವು 5 ವಿಕೆಟಿಗೆ 247 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ನಮೀಬಿಯ 7 ವಿಕೆಟಿಗೆ 188 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಲೆವಿಟ್‌ ಮತ್ತು ಸೈಬ್ರ್ಯಾಂಡ್‌ ಏಂಜೆಲ್‌ಬ್ರೆಚ್‌ ದ್ವಿತೀಯ ವಿಕೆಟಿಗೆ 193 ರನ್ನುಗಳ ಜತೆಯಾಟ ನಡೆಸಿದ್ದರಿಂದ ನೆದರ್ಲೆಂಡ್ಸ್‌ ಉತ್ತಮ ಮೊತ್ತ ಗಳಿಸಿತು. ಲೆವಿಟ್‌ ಕೇವಲ 62 ಎಸೆತಗಳಿಂದ 135 ರನ್‌ ಗಳಿಸಿದ್ದರು. 11 ಬೌಂಡರಿ ಮತ್ತು 10 ಸಿಕ್ಸರ್‌ ಬಾರಿಸಿದ್ದರು. 10 ಸಿಕ್ಸರ್‌ ಮತ್ತು 135 ರನ್‌ ಬಾರಿಸಿರುವುದು ನೆದರ್ಲೆಂಡ್ಸ್‌ ಆಟಗಾರನೋರ್ವನ ಗರಿಷ್ಠ ಸಾಧನೆಯೂ ಆಗಿದೆ. ಏಂಜೆಲ್‌ಬ್ರೆಚ್‌ 40 ಎಸೆತಗಳಿಂದ 75 ರನ್‌ ಹೊಡೆದರು. 7 ಬೌಂಡರಿ ಮತ್ತು 5 ಸಿಕ್ಸರ್‌ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next