Advertisement
ನೇಪಾಳದ ಸಪ್ತಾರಿ, ಬಾರ್ಡಿಯಾ, ಕಪಿಲವಸ್ತು ಜಿಲ್ಲೆಗಳಲ್ಲಿ ಸೋಮವಾರದಿಂದ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಚೀನಾದ ವಿರುದ್ಧ ಘೋಷಣೆ ಕೂಗುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
Related Articles
Advertisement
ಹುಮ್ಲಾ ಜಿಲ್ಲೆಯ ಭಾಗ್ದಾರೆ ನದಿ ಪ್ರದೇಶದ ಆರು ಹೆಕ್ಟೇರ್ ಪ್ರದೇಶ ಹಾಗೂ ಕರ್ನಾಲಿ ಜಿಲ್ಲೆಯಲ್ಲಿ ನಾಲ್ಕು ಹೆಕ್ಟೇರ್ ಪ್ರದೇಶವನ್ನು ಚೀನಾ ಅತಿಕ್ರಮಣ ಮಾಡಿಕೊಂಡಿದೆ ಇದು ಟಿಬೆಟ್ ನ ಫುರಾಂಗ್ ಪ್ರದೇಶಕ್ಕೆ ಸೇರಿದೆ ಎಂದು ಸರ್ವೆಯಲ್ಲಿದೆ. ಅದೇ ರೀತಿ ಸನ್ಜೆನ್ ಸರೋವರ ಪ್ರದೇಶದ ಮತ್ತು ರಾಸುವಾದ ಜಂಭು ಖೋಲಾದಲ್ಲಿ ಆರು ಹೆಕ್ಟೇರ್ ಇದು ದಕ್ಷಿಣ ಟಿಬೆಟ್ ನ ಕೇರುಂಗ್ ಪ್ರದೇಶಕ್ಕೆ ಸೇರಿರುವುದಾಗಿ ಹೇಳಿದೆ.
ಅಲ್ಲದೇ ಸಿಂಧುಪಾಲ್ ಚೌಕ್ ಜಿಲ್ಲೆಯ ಭೋಟೆಕೋಶಿ ಮತ್ತು ಖಾರಾನೆಖೋಲಾ ಪ್ರದೇಶದಲ್ಲಿ ಚೀನಾ ಹತ್ತು ಹೆಕ್ಟೇರ್ ಗಿಂತಲೂ ಹೆಚ್ಚು ಜಾಗವನ್ನು ಅತಿಕ್ರಮಣ ಮಾಡಿಕೊಂಡಿದೆ. ಈ ಪ್ರದೇಶ ಈಗ ಟಿಬೆಟ್ ನ ನ್ಯಾಲಾಂ ಪ್ರದೇಶಕ್ಕೆ ಸೇರಿರುವುದಾಗಿ ವರದಿ ತಿಳಿಸಿದೆ. ನೇಪಾಳದ ಸಚಿವಾಲಯದ ಡಾಟಾ ಪ್ರಕಾರ ನೇಪಾಳದ ನೂರಾರು ಹೆಕ್ಟೇರ್ ಪ್ರದೇಶ ಚೀನಾ ವಶಪಡಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದೆ.